ದೊಡ್ಡವರ ಜೊತೆ ಮಲಗದೇ ಇದ್ದರೆ ಪತ್ರಕರ್ತರಾಗಲ್ಲ :ಬಿಜೆಪಿಗನ ಕೀಳು ಹೇಳಿಕೆ

First Published 21, Apr 2018, 9:26 AM IST
Tamil Nadu BJP Leader Shares Facebook Post Abusing Women Journalists
Highlights

ಡಿಎಂಕೆ ಸಂಸದೆ ಕನಿಮೋಳಿಯನ್ನು ಅಕ್ರಮ ಸಂತಾನ ಎನ್ನುವ ಮೂಲಕ ಇತ್ತೀ ಚೆಗಷ್ಟೇ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯ ದರ್ಶಿ ಎಚ್. ರಾಜಾ ತೀವ್ರ ವಿವಾದ ಸೃಷ್ಟಿ ಸಿದ್ದ ಬೆನ್ನಲ್ಲೇ, ಇದೀಗ ತಮಿಳುನಾಡಿನ ಇನ್ನೋರ್ವ ಬಿಜೆಪಿ ನಾಯಕ ಎಸ್.ವಿ. ಶೇಖರ್ ವೆಂಕಟರಾಮನ್, ದೊಡ್ಡವರ ಜೊತೆ ಮಲಗದೇ ಇದ್ದಲ್ಲಿ ಪತ್ರಕರ್ತರಾಗುವುದುಸಾಧ್ಯವೇ ಇಲ್ಲ ಎನ್ನುವ ಮೂಲಕ ತಮ್ಮ ಕೀಳು ನಾಲಿಗೆಯನ್ನು ಹರಿಯಬಿಟ್ಟಿದ್ದಾರೆ.

ಚೆನ್ನೈ: ಡಿಎಂಕೆ ಸಂಸದೆ ಕನಿಮೋಳಿಯನ್ನು ಅಕ್ರಮ ಸಂತಾನ ಎನ್ನುವ ಮೂಲಕ ಇತ್ತೀ ಚೆಗಷ್ಟೇ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯ ದರ್ಶಿ ಎಚ್. ರಾಜಾ ತೀವ್ರ ವಿವಾದ ಸೃಷ್ಟಿ ಸಿದ್ದ ಬೆನ್ನಲ್ಲೇ, ಇದೀಗ ತಮಿಳುನಾಡಿನ ಇನ್ನೋರ್ವ ಬಿಜೆಪಿ ನಾಯಕ ಎಸ್.ವಿ. ಶೇಖರ್ ವೆಂಕಟರಾಮನ್, ದೊಡ್ಡವರ ಜೊತೆ ಮಲಗದೇ ಇದ್ದಲ್ಲಿ ಪತ್ರಕರ್ತರಾಗುವುದುಸಾಧ್ಯವೇ ಇಲ್ಲ ಎನ್ನುವ ಮೂಲಕ ತಮ್ಮ ಕೀಳು ನಾಲಿಗೆಯನ್ನು ಹರಿಯಬಿಟ್ಟಿದ್ದಾರೆ.

ತಮ್ಮ ಈ ಫೇಸ್ ಬುಕ್ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಲೇ ಅವರು ಆ ಹೇಳಿಕೆಯನ್ನು ಅಳಿಸಿಹಾಕಿದ್ದಾರೆ.ಇತ್ತೀಚೆಗೆ ರಾಜ್ಯಪಾಲರು, ಮಹಿಳಾ ಪತ್ರಕರ್ತೆಯ ಕೆನ್ನೆ ಸವರಿದ ಬಗ್ಗೆ ಫೇಸ್‌ಬುಕ್‌ನಲ್ಲಿ ಹೇಳಿಕೆ ಪ್ರಕಟಿಸಿದ್ದ ಶೇಖರ್ ‘ಇತ್ತೀಚಿನ ದೂರನ್ನು ಗಮನಿಸಿದರೆ ಅವರು (ಪತ್ರಕರ್ತೆ) ದೊಡ್ಡವರ ಜೊತೆ ಮಲಗದೇ ಹೋದಲ್ಲಿ ಪತ್ರಕರ್ತೆ ಅಥವಾ ನಿರೂಪಕಿ ಆಗುವುದು ಸಾಧ್ಯವೇ ಇಲ್ಲ ಅನ್ನಿಸುತ್ತದೆ.

ಅನಕ್ಷರಸ್ಥ ಮೂರ್ಖ ಜನರು, ಅದರಲ್ಲೂ ತಮಿಳುನಾಡು ಮಾಧ್ಯಮದಲ್ಲೇ ಹೆಚ್ಚಾಗಿ ಇದ್ದಾರೆ. ಇದಕ್ಕೆ, ಈ ಮಹಿಳಾ ಪತ್ರಕರ್ತೆಯೂ ಹೊರತಲ್ಲ’ ಎಂದು ಟೀಕಿಸಿದ್ದಾರೆ.

loader