ನಾದಿನಿ ರೇಪ್‌ ಆರೋಪ: ಕೊಪ್ಪ ತಾಪಂ ಇಓ ಬಂಧನ

Taluk Panchayat EO arrested on charges of sexual assault
Highlights

 ನಾದಿನಿ ಮೇಲೆಯೇ ಅತ್ಯಾಚಾರ ನಡೆಸಿದ ಆರೋಪದಲ್ಲಿ ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿಯನ್ನು ಪೊಲೀಸರು ಬಂಧಿಸಿದ್ದಾರೆ.
 

ಕೊಪ್ಪ :  ನಾದಿನಿ ಮೇಲೆಯೇ ಅತ್ಯಾಚಾರ ನಡೆಸಿದ ಆರೋಪದಲ್ಲಿ ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿಯನ್ನು ಪೊಲೀಸರು ಬಂಧಿಸಿದ್ದಾರೆ.

ಜಯರಾಂ ಬಂಧಿತ ಆರೋಪಿ. ಅತ್ಯಾಚಾರಕ್ಕೆ ಪುಸಲಾಯಿಸಿದ ಆರೋಪ ಎದುರಿಸುತ್ತಿರುವ ಪತ್ನಿ ತಿಮ್ಮಕ್ಕ ಲತಾ ತಲೆಮರೆಸಿಕೊಂಡಿದ್ದಾರೆ. ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಕಲ್ಯಾಣದುರ್ಗದ ನಿವಾಸಿಯಾಗಿರುವ ಸಂತ್ರಸ್ತೆ ಮಡಕಶಿರ ಸರ್ಕಾರಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದರು. ಪಾವಗಡದಲ್ಲಿ ವಾಸವಾಗಿದ್ದ ಸಂದರ್ಭದಲ್ಲಿ ಕಾಲೇಜಿಗೆ ಹೋಗಿ ಬರುತ್ತಿದ್ದಾಗ ಮದುವೆಯಾಗುವುದಾಗಿ ಹೇಳಿ ಜಯರಾಂ ಬಲವಂತವಾಗಿ ಅತ್ಯಾಚಾರ ನಡೆಸಿದ್ದರು. ನಂತರ ಆಗಾಗ ತನ್ನ ಈ ಕೃತ್ಯ ಮುಂದುವರಿಸಿದ್ದರು. ವಿಷಯ ಮನೆಯವರಿಗೆ ತಿಳಿದಾಗ ಜಯರಾಂನೊಂದಿಗೆ ಧರ್ಮಸ್ಥಳದಲ್ಲಿ ಮದುವೆ ಮಾಡಿಸಿದ್ದರು. ಆದರೆ, ಇತ್ತೀಚೆಗೆ ಕೊಪ್ಪಕ್ಕೆ ಬಂದಾಗ ಅಕ್ಕ ತಿಮ್ಮಕ್ಕ ಲತಾ ತನ್ನನ್ನು ಮನೆಯೊಳಗೆ ಬಿಟ್ಟುಕೊಳ್ಳದೆ ಹೊಡೆದು ಮನೆಯಿಂದ ಹೊರಹಾಕಿದ್ದಾರೆ ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ.

ಜಯರಾಂ ಬಲವಂತವಾಗಿ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ, ಕಾನೂನಿಗೆ ವಿರುದ್ಧವಾಗಿ ಮೋಸದಿಂದ 2ನೇ ಮದುವೆ ಯಾಗಿದ್ದಾರೆ ಹಾಗೂ ಅತ್ಯಾಚಾರಕ್ಕೆ ಅಕ್ಕ ತಿಮ್ಮಕ್ಕ ಲತಾ ಪುಸಲಾಯಿಸಿದ್ದಾರೆ ಎಂದು ಆರೋಪಿಸಿ ಸಂತ್ರಸ್ತೆ ಕೊಪ್ಪ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಅದರಂತೆ ಜಯರಾಂರನ್ನು ಪೊಲೀಸರು ಶುಕ್ರವಾರ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ತಿಮ್ಮಕ್ಕ ಲತಾ ತಲೆಮರೆಸಿಕೊಂಡಿದ್ದು, ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ.

loader