Asianet Suvarna News Asianet Suvarna News

Tablighi Jamaat Ban : ಧರ್ಮ ಆಧಾರಿತ ಐಡೆಂಟಿಟಿ ಬದಲಾವಣೆಗೆ ಯತ್ನಿಸುತ್ತಿದೆಯೇ ಸೌದಿ ಅರೇಬಿಯಾ?

ತಬ್ಲಿಘಿ ಜಮಾತ್ ಸಂಘಟನೆಗೆ ನಿಷೇಧ ಹೇರಿದ ಸೌದಿ ಅರೇಬಿಯಾ
ಧರ್ಮ ಆಧಾರಿತ ಐಡೆಂಟಿಟಿ ಬದಲಾವಣೆಗೆ ಅವಿರತ ಪ್ರಯತ್ನ
ಹಲವಾರು ಬದಲಾವಣೆಗೆ ತೆರೆದುಕೊಂಡ ಸಂಪ್ರದಾಯಸ್ಥ ಮುಸ್ಲಿಂ ದೇಶ

Tablighi Jamaat Ban is Saudi Arabia moving away from a religion based identity san
Author
Bengaluru, First Published Dec 19, 2021, 9:21 PM IST

ಬೆಂಗಳೂರು (ಡಿ.19): ಭಾರತೀಯ ಮೂಲದ ತಬ್ಲಿಘಿ ಜಮಾತ್  ( Tablighi Jamaat) ಸಂಘಟನೆಯನ್ನು ಸಮಾಜಕ್ಕೆ ಅಪಾಯಕಾರಿ ಹಾಗೂ ಭಯೋತ್ಪಾದನೆಯ ಪ್ರಮುಖ ದ್ವಾರಗಳು ಎಂದು ಗುರುತಿಸಿದ ಸೌದಿ ಅರೇಬಿಯಾ  (Saudi Arabia) ತನ್ನ ದೇಶದಲ್ಲಿ ಈ ಸಂಘಟನೆಯನ್ನು ನಿಷೇಧಿಸುವ ತೀರ್ಮಾನ ಮಾಡಿದೆ. ಸೌದಿ ಅರೇಬಿಯಾದ ಇಸ್ಲಾಮಿಕ್ ವ್ಯವಹಾರಗಳ ಸಚಿವ, ಡಾ.ಅಬ್ದುಲ್ಲತೀಫ್‌ ಆಲ್‌-ಶೇಖ್‌, (Dr. Abdullatif bin Abdulaziz Al-Sheikh) ಈ ಕುರಿತಂತೆ ಮಾಡಿರುವ ಟ್ವೀಟ್ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಜಮಾತ್ ಸಂಘಟನೆಯ ಸದಸ್ಯರು ಇದು ತಮ್ಮ ಕುರಿತಾಗಿ ಹೇಳಿರುವ ಮಾತುಗಳಲ್ಲ ಎಂದಿದ್ದರೆ, ಕೆಲ ಮುಸ್ಲಿಂ ಸಮುದಾಯ ಇದು ತಬ್ಲಿಘಿ ಕುರಿತಾಗಿಯೇ ಹೇಳಿದ್ದು ಎಂದು ತೀರ್ಮಾನಿಸಿದ್ದಾರೆ.

ಈ ನಡುವೆ ಕಟ್ಟರ್ ಸಂಪ್ರದಾಯವಾದಿ ಮುಸ್ಲಿಂ ದೇಶವಾಗಿರುವ ಸೌದಿ ಅರೇಬಿಯಾ ಇಂಥದ್ದೊಂದು ದೊಡ್ಡ ನಿರ್ಧಾರವನ್ನು ಮುಸ್ಲಿಂ ಸಂಘಟನೆಯ ಕುರಿತಾಗಿ ಮಾಡಲು ಹೇಗೆ ಸಾಧ್ಯ ಎನ್ನುವ ಚರ್ಚೆಗಳು ಆರಂಭವಾಗಿದೆ.  ಇಸ್ಲಾಂ ಜಗತ್ತಿನ ಎರಡು ಪವಿತ್ರ ಸ್ಥಳವಾಗಿರುವ ಮೆಕ್ಕಾ (Mecca ) ಹಾಗೂ ಮದೀನಾವನ್ನು (Medina) ತನ್ನ ಸಾಮ್ರಾಜ್ಯದೊಳಗೆ ಹೊಂದಿರುವ ಸೌದಿ ಅರೇಬಿಯಾ ಇಂಥದ್ದೊಂದು ನಿರ್ಧಾರ ಮಾಡಿದೆ ಎಂದಾದಲ್ಲಿ ಜಗತ್ತಿನಲ್ಲಿರುವ ಇಡೀ ಮುಸ್ಲಿಂ ಸಮುದಾಯ ಇದನ್ನು ಪಾಲನೆ ಮಾಡುತ್ತದೆ. ಇದರ ಬೆನ್ನಲ್ಲಿಯೇ ಸೌದಿ ಅರೇಬಿಯಾವೇ ತಬ್ಲಿಘಿ ಜಮಾತ್ ಅನ್ನು ನಿಷೇಧಿಸಿರುವಾಗ ಭಾರತವೂ ತಬ್ಲಿಘಿ ಜಮಾತ್ ಅನ್ನು ನಿಷೇಧಿಸಬೇಕು ಎಂದು ವಿಶ್ವ ಹಿಂದೂ ಪರಿಷತ್ ಕೇಂದ್ರ ಸರ್ಕಾರವನ್ನು ಆಗ್ರಹಿಸಿದೆ.

1926ರಲ್ಲಿ ಹರಿಯಾಣದ (Haryana)ಮೇವಾತ್ ನಲ್ಲಿ (Mewat) ಮೊಹಮದ್ ಇಲ್ಯಾಸ್ ಕಂಧಲ್ವಿ (Mohammad Ilyas Kandhalvi) ಸ್ಥಾಪಿಸಿದ್ದ ತಬ್ಲಿಘಿ ಜಮಾತ್ ನ ಮುಖ್ಯ ಉದ್ದೇಶ ಸಂಪ್ರದಾಯ, ವಸ್ತ್ರ ಮತ್ತು ವೈಯಕ್ತಿಕ ನಡತೆಗಳಲ್ಲಿ ಧರ್ಮವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ತನ್ನ ಆನುಯಾಯಿಗಳಿಗೆ ಬೋಧಿಸುವುದಾಗಿದೆ. ವಿಶ್ವದಾದ್ಯಂತ ಇದಕ್ಕೆ ಅಂದಾಜು 40 ಕೋಟಿ ಅನುಯಾಯಿಗಳು ಇದ್ದಾರೆ. ರಾಜಕೀಯ ಚಟುವಟಿಕೆಗಳಿಂದ ತಾನು ಪೂರ್ಣ ದೂರವಿದ್ದು, ಕೇವಲ ಧರ್ಮ ಪ್ರಚಾರವಷ್ಟೇ ತನ್ನ ಉದ್ದೇಶ ಎಂದು ಸಂಘಟನೆ ಹೇಳಿಕೊಳ್ಳುತ್ತದೆ. ನೇರವಾಗಿ ಈ ಸಂಘಟನೆಯ ಹೆಸರು ಯಾವುದೇ ಭಯೋತ್ಪಾದಕ ಕೃತ್ಯಗಳಲ್ಲಿ ಕಂಡಿಲ್ಲವಾದರೂ, 2001ರಿಂದಲೂ ಅಮೆರಿಕ (USA) ಈ ಸಂಘಟನೆಯ ಮೇಲೆ ಕಣ್ಣಿಟ್ಟಿದ್ದು, ಸಂಘಟನೆಯ ಬೋಧನೆ ಮತ್ತು ನಂಬಿಕೆಗಳು ಅನುಯಾಯಿಗಳನ್ನು ತೀವ್ರವಾದಿ ಮುಸ್ಲಿಂ ಸಂಘಟನೆಗಳತ್ತ ತಳ್ಳುವ ಆರಂಭಿಕ ಕೇಂದ್ರವಾಗಿದೆ ಎಂದು ಅಭಿಪ್ರಾಯಪಟ್ಟಿದೆ. ಹೆಚ್ಚೂ ಕಡಿಮೆ ಸೌದಿ ಅರೇಬಿಯಾ ಮಾಡಿರುವ ನಿರ್ಧಾರವೂ ಇದೇ ರೀತಿಯಲ್ಲಿರುವುದರಿಂದ ತಬ್ಲಿಘಿ ಜಮಾತ್ ಗೆ ಈಗ ಸಂಕಷ್ಟ ಎದುರಾಗಿದೆ.

Tablighi Jamaat : ಬ್ಯಾನ್ ಮಾಡುವಂತೆ ವಿಶ್ವ ಹಿಂದೂ ಪರಿಷತ್ ಆಗ್ರಹ
ತೈಲ ಅವಲಂಬಿತ ಆರ್ಥಿಕತೆಯಿಂದ ಹೊರಬರುವ ಅನಿವಾರ್ಯತೆ: ಇಡೀ ವಿಶ್ವವೇ ತೈಲದ ಹೊರತಾಗಿ ಪರ್ಯಾಯ ಇಂಧನದ ಯೋಚನೆಯಲ್ಲಿದೆ. ಸೌದಿ ಅರೇಬಿಯಾ ಕೂಡ ತೈಲ ಅವಲಂಬಿತ ಆರ್ಥಿಕತೆಯಿಂದ (Oil-Dependent Economy) ಹೊರಬರುವ ಉದ್ದೇಶದ ಆರಂಭವಾಗಿ ಇದನ್ನು ಕಾಣಬಹುದಾಗಿದೆ. ಆದರೆ, ಸೌದಿಯ ಪತ್ರಿಕೆಗಳು ಹಾಗೂ ಸಮುದಾಯದ ಮುಖಂಡರು, ತಬ್ಲಿಘಿ ಜಮಾತ್ ನ ರಕ್ಷಣೆಗೆ ನಿಂತಿದ್ದು, ಸಂಘಟನೆಯ ಧಾರ್ಮಿಕತೆ ಹಾಗೂ ಸಮರ್ಪಣಾ ಮನೋಭಾವವನ್ನು ಇಲ್ಲಿ ಗಮನಿಸಬೇಕು ಎಂದು ಹೇಳಿದ್ದಾರೆ. ಭಾರತದಲ್ಲೂ ಇದರ ಬಗ್ಗೆ ಚರ್ಚೆಗಳಾಗುತ್ತಿವೆ. ಹಿಂದೂ ಮುಖಂಡರು ಹಾಗೂ ಮುಸ್ಲಿಂ ಮುಖಂಡರು ತಮ್ಮದೇ ದೃಷ್ಟಿಕೋನದಲ್ಲಿ ಸೌದಿಯ ನಿರ್ಧಾರದ ಬಗ್ಗೆ ಚರ್ಚೆ ಮಾಡುತ್ತಿದ್ದು, ಭಾರತದಲ್ಲಿ ಅದರ ಪರಿಣಾಮದ ಬಗ್ಗೆ ಚಿಂತನೆಯಲ್ಲಿದ್ದಾರೆ.

Tablighi Jamaat ಸಂಘಟನೆಯಿಂದ ದೂರ ಇರಿ: ಸೌದಿ ಅರೇಬಿಯಾ ಪ್ರಜೆಗಳಿಗೆ ಎಚ್ಚರಿಕೆ!
ಆದರೆ, ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶವೇನೆಂದರೆ, 2015ರಲ್ಲಿ ಸುಲ್ತಾನ್ ಸಲ್ಮಾನ್ ಬಿನ್ ಅಬ್ದುಲಜೀಜ್ಅಲ್ ಸೌದ್ (Sultan Salman bin Abdulaziz Al Saud )ಪದವಿಗೆ ಏರಿದ ಬಳಿಕ, ತೈಲ ಸಮೃದ್ಧ ಸಂಪ್ರದಾಯವಾದಿ ದೇಶವು ನಿಧಾನವಾಗಿ ಧರ್ಮ ಆಧಾರಿತ ಗುರುತಿನಿಂದ (religion based identity) ದೂರ ಸರಿಯುವ ಪ್ರಯತ್ನ ಮಾಡುತ್ತಿದೆ. ಆಂತರಿಕ ಭಿನ್ನಾಭಿಪ್ರಾಯಗಳ ಹೊರತಾಗಿಯೂ ಸಾಮ್ರಾಜ್ಯದಲ್ಲಿ ಆಳುವ ವರ್ಗವು ತೈಲ-ಅವಲಂಬಿತ ಆರ್ಥಿಕತೆಯಿಂದ ದೂರ ಸರಿಯಬೇಕೆಂದು ಅರಿತುಕೊಂಡಂತೆ ಕಾಣುತ್ತಿದೆ.

ಇನ್ನು ಸಮಾಜದಲ್ಲಿ ಬದಲಾವಣೆ ಕಾಣದ ಹೊರಲು ಆರ್ಥಿಕತೆಯಲ್ಲಿ ವೈವಿಧ್ಯತೆ ಕಾಣುವುದಿಲ್ಲ ಎನ್ನುವ ಅರಿವು ಆ ದೇಶಕ್ಕಿದೆ. ಅದಕ್ಕಾಗಿಯೇ, ಮಹಿಳಾ ಹಕ್ಕುಗಳು, ಪುರುಷ ಸಂಬಂಧಿ ಇಲ್ಲದೆ ಮಹಿಳೆಯರು ಕಾರುಗಳ ಲೈಸೆನ್ಸ್ ಪಡೆಯುವುದು, ಸ್ವಂತ ವ್ಯಾಪಾರವನ್ನು ಹೊಂದುವುದು ಇದೆಲ್ಲ ಬದಲಾವಣೆಗಳನ್ನು ಇತ್ತೀಚೆಗೆ ಮಾಡಲಾಗಿದೆ. ತಬ್ಲಿಘಿ ಜಮಾತ್ ಸಂಘಟನೆಯ ನಿಷೇಧ ಈ ಪಟ್ಟಿಗೆ ಇನ್ನೊಂದು ಸೇರ್ಪಡೆ ಎನ್ನಬಹುದಷ್ಟೇ. ಕಿಂಗ್ ಸಲ್ಮಾನ್ ಈಗಾಗಲೇ ಪುತ್ರ ವಿವಾದಿತ ವ್ಯಕ್ತಿ ಮೊಹಮದ್ ಬಿನ್ ಸಲ್ಮಾನ್  (Mohammed bin Salman ) ರನ್ನು ಉತ್ತರಾಧಿಕಾರಿಯಾಗಿ ಘೋಷಣೆ ಮಾಡಿದ್ದಾರೆ. ಅವರ ಮೇಲೆ ಜಮಾಲ್ ಖಶೋಗಿ ಕೊಲೆ ಆರೋಪಗಳಿದ್ದರೂ, ದುಬೈ ಮಾದರಿಯಲ್ಲಿ ದೇಶವನ್ನು ಪ್ರವಾಸಿ ಹಾಗೂ ವ್ಯಾಪಾರಿ ತಾಣವನ್ನಾಗಿ ಮಾಡುವ ನಿಟ್ಟಿನಲ್ಲಿ ಪ್ರಯತ್ನ ಪಡುತ್ತಿದ್ದಾರೆ. 

Follow Us:
Download App:
  • android
  • ios