ರೇಪ್ ಆರೋಪ ಹೊರಿಸಿದ್ದ ಯುವತಿ ಜೊತೆ ಭಾರತೀಯ ಆಟಗಾರನ ಮದುವೆ!
ಅತ್ಯಾಚಾರ ಆರೋಪ ಮಾಡಿದ್ದ ಯುವತಿ ಜೊತೆ ಮದುವೆ! ಟೇಬಲ್ ಟೆನಿಸ್ ಆಟಗಾರ ಸೌಮ್ಯಜೀತ್ ಘೋಷ್! ರೇಪ್ ಆರೋಪ ಹೊರಿಸಿದ್ದ ಯುವತಿಯನ್ನೇ ವರಿಸಿದ ಷೋಷ್! ಯುವತಿ ಆರೋಪದ ಹಿನ್ನೆಲೆಯಲ್ಲಿ ಏಷ್ಯನ್ ಗೇಮ್ಸ್‌ನಿಂದ ಕೈಬಿಡಲಾಗಿತ್ತು
ನವದೆಹಲಿ(ಆ.7): ಭಾರತದ ಟೇಬಲ್ ಟೆನಿಸ್ ಆಟಗಾರ ಸೌಮ್ಯಜಿತ್ ಘೋಷ್ ತಮ್ಮ ವಿರುದ್ಧ ಅತ್ಯಾಚಾರ ದೂರು ದಾಖಲಿಸಿದ್ದ 18 ವರ್ಷದ ಯುವತಿಯನ್ನೇ ವಿವಾಹವಾಗಿ ವಿವಾದಕ್ಕೆ ತೆರೆ ಎಳೆದಿದ್ದಾರೆ.
ಕಳೆದ ಮಾರ್ಚ್ ನಲ್ಲಿ ಪಶ್ಚಿಮ ಬಂಗಾಳದ ಬರಾಸತ್ ಠಾಣೆಯಲ್ಲಿ ಯುವತಿಯೊಬ್ಬಳು ತನ್ನ ಮೇಲೆ ಅತ್ಯಾಚಾರ ನಡೆದಿರುವುದಾಗಿ ದೂರು ದಾಖಲಿಸಿದ್ದಳು. ಆ ವೇಳೆ ಜರ್ಮನಿಯ ಲೀಗ್ ನಲ್ಲಿ ಆಡುತ್ತಿದ್ದ ಸೌಮ್ಯಜಿತ್ ರನ್ನು ಏಷ್ಯನ್ ಗೇಮ್ಸ್ ತಂಡದಿಂದ ಕೈ ಬಿಡಲಾಗಿತ್ತು. ಜೊತೆಗೆ ರಾಷ್ಟ್ರೀಯ, ಅಂತಾರಾಷ್ಟ್ರೀಯ ಕೂಟಗಳಿಂದ ಅಮಾನುತುಗೊಳಿಸಲಾಗಿತ್ತು.
ಬಂಧನ ಭೀತಿಯಿಂದ ಯುರೋಪ್ ನಲ್ಲೇ ಉಳಿದಿದ್ದ ಸೌಮ್ಯಜಿತ್ ಕಳೆದ ಶುಕ್ರವಾರ ಕೋಲ್ಕತ್ತಾಕ್ಕೆ ಆಗಮಿಸಿ ಯುವತಿಯೊಂದಿಗೆ ಮದುವೆಯಾಗಿದ್ದಾರೆ.