Asianet Suvarna News Asianet Suvarna News

ಸಾರ್ಥಕ ಸಾಧಕಿಯರಿಗೆ ಸುವರ್ಣ ನ್ಯೂಸ್, ಕನ್ನಡ ಪ್ರಭ ಮಹಿಳಾ ಸಾಧಕಿ ಪ್ರಶಸ್ತಿ ಸನ್ಮಾನ

Oct 6, 2018, 10:57 PM IST

ಬೆಂಗಳೂರು[ಅ.06]: ನಗರದ ಟೌನ್ ಹಾಲ್ ನಲ್ಲಿ ನಡೆದ ಸುವರ್ಣ ನ್ಯೂಸ್, ಕನ್ನಡ ಪ್ರಭ ಮಹಿಳಾ ಸಾಧಕಿ 2018 ಪ್ರಶಸ್ತಿಯನ್ನು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ 8 ಮಹಿಳೆಯರಿಗೆ ವಿತರಿಸಲಾಯಿತು. 

ಮಹಾದೇವಿ ವಣದೆ(ಕೃಷಿ ಕ್ಷೇತ್ರ ಸಾಧಕಿ - ಆಳಂದ) - ರೀಟಾ ಪ್ರಿಯಾಂಕಾ(ಕ್ರೀಡಾ ಕ್ಷೇತ್ರದಲ್ಲಿ ಸಾಧನೆ - ಮಂಡ್ಯ) - ನಾಗರತ್ನ(ಜನಧಾನ್ಯ ಮಹಿಳಾ ಸಂಘಟನೆ - ಕಾರ್ಪೊರೇಟ್ ಕ್ಷೇತ್ರ - ರಾಮನಗರ) - ಅನನ್ಯಾ ಭಟ್(ಕಲೆ ಮತ್ತು ಸಂಸ್ಕೃತಿ - ಮೈಸೂರು) - ಅನಿತಾ ಸತೀಶ್ (ಅಂಧರಿಗೆ ನೆರವು - ಶಿವಮೊಗ್ಗ) - ತೇಜಶ್ರೀ(ಸಾಹಿತ್ಯ - ಹಾಸನ) - ಲೂಸಿ ಸಲ್ಡಾನ(ಸಮಾಜ ಸೇವೆ - ಧಾರವಾಡ) - ಅಮ್ರೀನ್ ಖಾನ್(ಶಿಕ್ಷಣ ಕ್ಷೇತ್ರ - ಬೆಂಗಳೂರು) ಪ್ರಶಸ್ತಿಗೆ ಭಾಜನರಾದರು.

ಸಾಧಕಿಯರಿಗೆ ಪ್ರಶಸ್ತಿ ಫಲಕ, 10 ಸಾವಿರ ರೂಪಾಯಿ ಚೆಕ್ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಸುವರ್ಣ ನ್ಯೂಸ್ ಪ್ರಧಾನ ಸಂಪಾದಕ ರವಿ ಹಗ್ಡೆ, ಸುದ್ದಿ ವಿಭಾಗದ ಮುಖ್ಯಸ್ಥ ಅಜಿತ್ ಹನಮಕ್ಕನವರ್ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು.