Asianet Suvarna News Asianet Suvarna News

#MeToo ವಿಚಾರಣೆ: ಪಿಐಎಲ್ ಗೆ ಸುಪ್ರೀಂ ಟೂ ಟೂ!

ಮೀಟೂ ಅಭಿಯಾನದಡಿ ದಾಖಲಾದ ಎಫ್‌ಐಆರ್ ಮಾಹಿತಿ ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.

Supreme Court Refuses To Entertain PIL Seeking on #METoo Revelations
Author
Bengaluru, First Published Nov 19, 2018, 4:05 PM IST

ನವದೆಹಲಿ(ನ.19): ಮೀಟೂ ಅಭಿಯಾನದಡಿ ದಾಖಲಾದ ಎಫ್‌ಐಆರ್ ಮಾಹಿತಿ ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.

ಮೀಟೂ ಆಭಿಯಾನದಡಿ ದಾಖಲಾದ ಒಟ್ಟು ಎಫ್‌ಐಆರ್ ಮತ್ತು ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆ ಕುರಿತು ಮಾಹಿತಿ ಕೋರಿ ವಕೀಲ ಮನೋಹರಲಾಲ್ ಶರ್ಮಾ ಎಂಬುವವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

ಆದರೆ ಈ ಅರ್ಜಿಯನ್ನು ತಿರಸ್ಕರಿಸಿರುವ ಸುಪ್ರೀಂ ಕೋರ್ಟ್, ಈ ಕುರಿತು ಯಾವುದೇ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ. ಅಲ್ಲದೇ ಮೀಟೂ ವಿಚಾರಣೆ ಕುರಿತು ತುರ್ತು ವಿಚಾರಣಾ ನ್ಯಾಯಾಲಯಗಳನ್ನು ಸ್ಥಾಪಿಸಬೇಕು ಮತ್ತು ಇದರಲ್ಲಿ ರಾಷ್ಟ್ರೀಯ ಮಹಿಳಾ ಆಯೋಗ ಕೂಡ ಭಾಗವಹಿಸಬೇಕು ಎಂಬ ಶರ್ಮಾ ಮನವಿಯನ್ನು ಕೋರ್ಟ್ ತಳ್ಳಿ ಹಾಕಿದೆ.

ಶರ್ಮಾ ತಮ್ಮ ಅರ್ಜಿಯಲ್ಲಿ ನಮೂದಿಸಿದ್ದ ಕಲಂ 32ರ ಕುರಿತು ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಮುಖ್ಯ ನ್ಯಾಯಮೂರ್ತಿ ರಂಜನ್ ಗಗೋಯ್, ಈ ಕುರಿತು ಶರ್ಮಾ ಬದಲು ರಾಷ್ಟ್ರೀಯ ಮಹಿಳಾ ಆಯೋಗ ಮತ್ತು ಮೀಟೂ ಸಂತ್ರಸ್ಥ ಮಹಿಳೆಯರು ವಾದ ಮಂಡಿಸಿದರೆ ಒಳಿತು ಎಂದು ಹೇಳಿದರು.

ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ವಕೀಲ ಶರ್ಮಾ ಆಗ್ರಹಿಸಿದ್ದ ಎಲ್ಲಾ ಬೇಡಿಕೆಗಳನ್ನು ಸುಪ್ರೀಂ ಕೋರ್ಟ್ ತಳ್ಳಿ ಹಾಕಿದ್ದು, ಈ ಕುರಿತು ವಿಚಾರಣೆ ನಡೆಸಲು ನಿರಾಸಕ್ತಿ ತೋರಿರುವುದು ಚರ್ಚೆಗೆ ಎಡೆ ಮಾಡಿಕೊಟ್ಟಿದೆ.

Follow Us:
Download App:
  • android
  • ios