ನವದೆಹಲಿ(ಜ.10): ತೀವ್ರ ಕುತೂಹಲ ಕೆರಳಿಸಿದ್ದ ಅಯೋಧ್ಯೆ ರಾಮ ಜನ್ಮಭೂಮಿ ಮತ್ತು ಬಾಬ್ರಿ ಮಸೀದಿ ವಿಚಾರಕ್ಕೆ ಸಂಬಂಧಿಸಿದ ವಿಚಾರಣೆಯನ್ನು ಮತ್ತೆ ಸುಪ್ರೀಂ ಕೋರ್ಟ್ ಜನವರಿ 29ಕ್ಕೆ ಮುಂದೂಡಿದೆ.

"

ಇಂದು ವಿಚಾರಣೆ ಆರಂಭಿಸಿದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸಿಜೆಐ ರಂಜನ್ ಗಗೋಯ್ ಅವರು, 'ಅಯೋಧ್ಯೆ ಪ್ರಕರಣದಲ್ಲಿ ಇಂದು ವಿಚಾರಣೆ ನಡೆಯುವುದಿಲ್ಲ. ವಿಚಾರಣೆಯ ಅರ್ಜಿಗಳನ್ನು ಮಾತ್ರ ನಾವು ಕೈಗೆತ್ತಿಕೊಳ್ಳುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.

ಈ ಹಿಂದೆ ಜ.4ರಂದು ಒಂದೇ ನಿಮಿಷದಲ್ಲಿ ಅರ್ಜಿ ವಿಚಾರಣೆ ನಡೆಸಿದ್ದ ರಂಜನ್​ ಗೊಗೊಯ್​ ನೇತೃತ್ವದ ಪೀಠ, 'ಅಯೋಧ್ಯೆ ಪ್ರಕರಣದ ತನಿಖೆ ವಿಚಾರದಲ್ಲಿ ಮುಂದಿನ ಆದೇಶವನ್ನು ಜನವರಿ 10ರಂದು ನೀಡಲಾಗುವುದು' ಎಂದಿತ್ತು.

ಅಲ್ಲದೆ, ಪ್ರಕರಣವನ್ನು ಹೊಸ ಸಂವಿಧಾನ ಪೀಠಕ್ಕೆ ವರ್ಗಾವಣೆ ಮಾಡುವುದಾಗಿ ಕೂಡ ಸುಪ್ರೀಂ ಕೋರ್ಟ್ ತಿಳಿಸಿತ್ತು. ಹೊಸ ಪೀಠದಲ್ಲಿ ನ್ಯಾಯಮೂರ್ತಿಗಳಾದ ಡಿ.ವೈ. ಚಂದ್ರಚೂಡ್​, ಉದಯ್​ ಲಲಿತ್​, ಎಸ್​.ಎ ಬೊಬ್ಡೆ, ಎಸ್​.ವಿ. ರಮಣ್​ ಇದ್ದಾರೆ. ರಂಜನ್​ ಗೊಗೊಯಿ ಈ ಪೀಠದ ನೇತೃತ್ವ ವಹಿಸಿದ್ದರು.

ಅಯೋಧ್ಯೆ ವಿಚಾರಣೆ: ತ್ರಿಸದಸ್ಯ ಪೀಠ ರಚನೆ ನಿರೀಕ್ಷೆ

ರಾಮಮಂದಿರ ಬಗ್ಗೆ ಮೊದಲ ಬಾರಿ ಮೋದಿ ಮಾತು; ಏನಂದ್ರು ಪ್ರಧಾನಿ?

ಅಯೋಧ್ಯ ವಿವಾದ: ಜ.4 ಕ್ಕೆ ವಿಚಾರಣೆ