ಬೆಂಗಳೂರು(ಅ.16): ದಿನವೊಂದಕ್ಕೆ ದೇಶದಲ್ಲಿ ಅದೆಷ್ಟು ಘಟನೆಗಳು ಸಂಭವಿಸುತ್ತವೆ. ದೇಶದ ರಾಜಕೀಯ, ಆರ್ಥಿಕ, ಸಾಮಾಜಿಕ ಕ್ಷೇತ್ರದಲ್ಲಿ ಅಸಂಖ್ಯಾತ ಘಟನಾವಳಿಗಳು ಜರುತ್ತಲೇ ಇರುತ್ತವೆ. ಈ ಎಲ್ಲ ಸುದ್ದಿಗಳನ್ನು ಹೆಕ್ಕಿ ತೆಗೆಯುವ, ಸುದ್ದಿಯ ಆಳಕ್ಕಿಳಿದು ವಿಶ್ಲೇಷಿಸುವ ಪತ್ರಿಕಾಧರ್ಮವನ್ನು ನಿಮ್ಮ ಸುವರ್ಣನ್ಯೂಸ್.ಕಾಂ ಚಾಚೂ ತಪ್ಪದೇ ಪಾಲಿಸಿಕೊಂಡು ಬರುತ್ತದೆ.  ಅದರಂತೆ ಇಂದಿನ ಅಸಂಖ್ಯ ಘಟನಾವಳಿಗಳ ಸಮುದ್ರದಿಂದ ಟಾಪ್ 10 ಸುದ್ದಿ ಎಂಬ ಬೊಗಸೆಯಲ್ಲಿಡಿದು ಓದುಗರ ಮುಂದಿಟ್ಟಿದೆ. ಸುವರ್ಣನ್ಯೂಸ್.ಕಾಂ. ಓದಿರಿ, ಓದಿಸಿರಿ.

1.  ಕೊನೆಗೂ ಮುಗೀತು ವಿಚಾರಣೆ: ಅಯೋಧ್ಯೆ ತೀರ್ಪಿಗೆ ದಿನಗಣನೆ!...

ನವದೆಹಲಿ(ಅ.16): ಅಯೋಧ್ಯೆಯ ರಾಮ ಜನ್ಮಭೂಮಿ-ಬಾಬ್ರಿ ಮಸೀದಿ ಭೂ ವಿವಾದ ಪ್ರಕರಣದ ಪ್ರತಿ ದಿನದ ವಿಚಾರಣೆಯನ್ನು ಸುಪ್ರೀಂಕೋರ್ಟ್ ಇಂದು ಕೊನೆಗೊಳಿಸಿದೆ. ಇಂದು 40ನೇ ಹಾಗೂ ಅಂತಿಮ ದಿನದ ವಿಚಾರಣೆ ವೇಳೆ ಸಿಜೆಐ ರಂಜನ್ ಗಗೋಯ್, 'ಇಲ್ಲಿಗೆ ಸಾಕು..' ಎಂದು ಹೇಳುವ ಮೂಲಕ ಪ್ರತಿದಿನದ ವಿಚಾರಣೆಗೆ ತೆರೆ ಎಳೆದಿದ್ದಾರೆ.

2.  ಕಾಂಗ್ರೆಸ್‌ಗೆ ಬಿಗ್ ಶಾಕ್: ಕರ್ನಾಟಕ ರಾಜ್ಯಸಭೆ ಸದಸ್ಯ ರಾಜೀನಾಮೆ

ಕರ್ನಾಟಕ ಕಾಂಗ್ರೆಸ್ ರಾಜ್ಯಸಭಾ ಸದಸ್ಯ ಕೆ.ಸಿ.ರಾಮಮೂರ್ತಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಕೇವಲ ರಾಜ್ಯಸಭೆಗೆ ಮಾತ್ರವಲ್ಲದೇ ಕಾಂಗ್ರೆಸ್ ಪಕ್ಷಕ್ಕೂ ಕೆ.ಸಿ.ರಾಮಮೂರ್ತಿ ಅವರು ರಾಜೀನಾಮೆ ನೀಡಿದ್ದಾರೆ. ರಾಜ್ಯಸಭೆ ಸದಸ್ಯಕ್ಕೆ ರಾಜೀನಾಮೆ ಪತ್ರವನ್ನು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರಿಗೆ ನೀಡಿದ್ದಾರೆ.

3) ಪ್ರಚಾರಕ್ಕಾಗಿ ರಾಜೀನಾಮೆ ವಿಚಾರ ತೇಲಿ ಬಿಟ್ಟರಾ ಸಾ.ರಾ.ಮಹೇಶ್?

ತಾವು ರಾಜೀನಾಮೆ ನೀಡಿರುವುದಾಗಿ ಮೈಸೂರಿನ ಕೆ ಆರ್ ನಗರ ಕ್ಷೇತ್ರದ ಶಾಸಕ ಸಾ.ರಾ. ಮಹೇಶ್ ಹೇಳಿದ್ದು, ಆದರೆ ಇದೆಲ್ಲಾ ಸುಳ್ಳು ಮಾಹಿತಿಯಾಗಿದ್ದು, ಎಲ್ಲಾ ಪ್ರಚಾರಕ್ಕೆ ಮಾಡಿದ ಗಿಮಿಕ್ ಎನ್ನಲಾಗುತ್ತಿದೆ. 

4) ಐಎನ್ ಎಕ್ಸ್ ಕೇಸ್: ಚಿದುಗೆ ಇ.ಡಿ ಬಂಧನ ಭೀತಿ ಶುರು!

ಐಎನ್‌ಎಕ್ಸ್‌ ಮೀಡಿಯಾ ಹಗರಣ ಸಂಬಂಧ ಸುಮಾರು ಎರಡು ತಿಂಗಳಿನಿಂದ ಬಂಧನದಲ್ಲಿರುವ ಕಾಂಗ್ರೆಸ್ಸಿನ ಪ್ರಭಾವಿ ನಾಯಕ ಹಾಗೂ ಕೇಂದ್ರದ ಮಾಜಿ ಸಚಿವ ಪಿ. ಚಿದಂಬರಂ ಅವರಿಗೆ ಅದೇ ಪ್ರಕರಣದಲ್ಲಿ ಇದೀಗ ಜಾರಿ ನಿರ್ದೇಶನಾಲಯ (ಇ.ಡಿ.)ದಿಂದಲೂ ಬಂಧನ ಭೀತಿ ಎದುರಾಗಿದೆ.

5) 2 ಸಾವಿರ ನೋಟು ಮುದ್ರಣವೇ ಸ್ಥಗಿತ; ಚಲಾವಣೆ ನಿಲ್ಲುತ್ತಾ?

ಪ್ರಸಕ್ತ ಹಣಕಾಸು ವರ್ಷದಲ್ಲಿ ಈವರೆಗೆ 2000 ರು. ಮುಖಬೆಲೆಯ ಒಂದೇ ಒಂದು ನೋಟನ್ನೂ ಮುದ್ರಿಸಲಾಗಿಲ್ಲ ಎಂದು ಮಾಹಿತಿ ಹಕ್ಕು (ಆರ್‌ಟಿಐ) ಅಡಿ ಸ್ವತಃ ಆರ್‌ಬಿಐ ಮಾಹಿತಿ ನೀಡಿದೆ. ಜತೆಗೆ ವರ್ಷದಿಂದ ವರ್ಷಕ್ಕೆ 2000 ರು. ಮುಖಬೆಲೆಯ ನೋಟುಗಳ ಮುದ್ರಣ ಪ್ರಮಾಣವನ್ನು ಇಳಿಕೆ ಮಾಡಿದ ವಿಷಯವನ್ನೂ ಬಹಿರಂಗಪಡಿಸಿದೆ.

6) ರಾಜ್ಯದಲ್ಲಿ ಪೂರ್ಣ ಸಾಲಮನ್ನಾ ಇಲ್ಲ : ಸಿಎಂ!

ಸದ್ಯದ ಪರಿಸ್ಥಿತಿಯಲ್ಲಿ ರಾಜ್ಯದಲ್ಲಿ ರೈತರ ಸಂಪೂರ್ಣ ಸಾಲ ಮನ್ನಾ ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ. ಭಾರೀ ಪ್ರಾಕೃತಿಕ ವಿಕೋಪದಿಂದಾಗಿ ರಾಜ್ಯದಲ್ಲಿ ಬಹುದೊಡ್ಡ ಅನಾಹುತ ಆಗಿದೆ. ಹೀಗಾಗಿ ರಾಜ್ಯದಲ್ಲಿ ಸಂಪೂರ್ಣ ಸಾಲ ಮನ್ನಾ ಮಾಡುವ ಸ್ಥಿತಿ ಇಲ್ಲ ಎಂದು ತಿಳಿಸಿದ್ದಾರೆ.

7) BJP ಸೇರ್ತಾರ ಗಂಗೂಲಿ? ಅಮಿತ್ ಶಾ ಭೇಟಿಯಾದ ನೂತನ BCCI ಅಧ್ಯಕ್ಷ!

ಬಿಸಿಸಿಐ ನೂತನ ಅಧ್ಯಕ್ಷ ಸೌರವ್ ಗಂಗೂಲಿ ದಿಢೀರ್ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿಯಾಗಿದ್ದಾರೆ. ಗಂಗೂಲಿ ಹಾಗೂ ಶಾ ಭೇಟಿ ಬಳಿಕ ರಾಜಕೀಯ ಚಟುವಟಿಕೆ ಗರಿಗೆದರಿದೆ. ಗಂಗೂಲಿ ಬಿಜೆಪಿ ಸೇರಿಕೊಳ್ಳಲಿದ್ದಾರೆ ಅನ್ನೋ ಮಾತುಗಳು ಕೇಳಿ ಬಂದಿದೆ.

8) ಮತ್ತೆ ಸ್ಯಾಂಡಲ್ ವುಡ್ ಗೆ ಮರಳುತ್ತಾರಾ ಬ್ಯೂಟಿ ಕ್ವೀನ್ ರಮ್ಯಾ?

ಸ್ಯಾಂಡಲ್‌ವುಡ್‌ ಕ್ವೀನ್‌ ರಮ್ಯಾ ನಟನೆಯ ಚಿತ್ರಕ್ಕೆ ಮರುಜೀವ ಬರುತ್ತಿದೆ. ತುಂಬಾ ವರ್ಷಗಳ ನಂತರ ಸದ್ದು ಮಾಡಲು ಸಜ್ಜಾಗಿರುವ ಈ ಚಿತ್ರದ ಹೆಸರು ‘ದಿಲ್‌ ಕಾ ರಾಜ’. ಪ್ರಜ್ವಲ್‌ ದೇವರಾಜ್‌ ಚಿತ್ರದ ನಾಯಕ. ಈ ಚಿತ್ರಕ್ಕೆ ರಮ್ಯಾ ನಾಯಕಿ.

8) ಫೇಸ್ ಬುಕ್ ಡಿಜಿಟಲ್ ಕರೆನ್ಸಿ ಲಿಬ್ರಾಗೆ ಅಧಿಕೃತ ಚಾಲನೆ

ವಿಶ್ವಾದ್ಯಂತ 270 ಕೋಟಿಗೂ ಅಧಿಕ ಬಳಕೆದಾರರನ್ನು ಹೊಂದಿರುವ ಪ್ರಸಿದ್ಧ ಸಾಮಾಜಿಕ ಜಾಲತಾಣ ಫೇಸ್‌ಬುಕ್‌, ಬಿಟ್‌ಕಾಯಿನ್‌ ಮಾದರಿಯ ಡಿಜಿಟಲ್‌ ಕರೆನ್ಸಿ ‘ಲಿಬ್ರಾ’ಗೆ ಮಂಗಳವಾರ ಅಧಿಕೃತವಾಗಿ ಚಾಲನೆ ನೀಡಿದೆ. ಹಣ ವರ್ಗಾವಣೆ ಹಾಗೂ ಪಾವತಿ ಕ್ಷೇತ್ರದಲ್ಲಿ ಇದು ಕ್ರಾಂತಿ ಮಾಡಬಹುದು ಎಂಬ ನಿರೀಕ್ಷೆ ಇದೆ. 

10) ದೀಪಾವಳಿಗೆ ಖರೀದಿಸಹುದಾದ ಕಡಿಮೆ ಬೆಲೆಯ ಟಾಪ್ 5 ಕಾರು!

ಈ ವರ್ಷದ ದೀಪಾವಳಿಯನ್ನು ಹೊಸ ಕಾರಿನೊಂದಿಗೆ ಆಚರಿಸಿ ಅನ್ನೋದು ಬಹುತೇಕ ಆಟೋಮೊಬೈಲ್ ಕಂಪನಿಗಳ ಜಾಹೀರಾತು. ಆದರೆ ಈ ದೀಪಗಳ ಹಬ್ಬದಲ್ಲಿ ಕಾರು ಖರೀದಿಸುವವರಿಗೆ ಹೆಚ್ಚುವರಿಗೆ ರಿಯಾಯಿತಿ, ಆಫರ್ ಸಿಗಲಿದೆ. ಕಾರಣ ಈಗಾಗಲೇ ವಾಹನ ಮಾರಾಟ ಕುಸಿತ ಗೊಂಡಿದೆ. 10 ಲಕ್ಷ ರೂಪಾಯಿ ಒಳಗಡೆ ಖರೀದಿಸಬಹುದಾದ ಟಾಪ್ 5 ಕಾರುಗಳ ವಿವರ ಇಲ್ಲಿದೆ.