ನವದೆಹಲಿ (ನ. 30): 25 ವರ್ಷ ಮೇಲ್ಪಟ್ಟವೈದ್ಯಕೀಯ ಆಕಾಂಕ್ಷಿಗಳು 2019ನೇ ಸಾಲಿನ ರಾಷ್ಟ್ರೀಯ ಅರ್ಹತೆ ಹಾಗೂ ಪ್ರವೇಶ ಪರೀಕ್ಷೆ- ನೀಟ್‌ ಬರೆಯಲು ಸುಪ್ರೀಂಕೋರ್ಟ್‌ ಗುರುವಾರ ಅನುಮೋದನೆ ನೀಡಿದೆ.

ಆದರೆ, ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಕಾಲೇಜು ಪ್ರವೇಶ ಬಯಸುವ ಅಭ್ಯರ್ಥಿಗಳ ಭವಿಷ್ಯವು 25 ವರ್ಷ ವಯೋಮಿತಿಯನ್ನು ನಿಗದಿಪಡಿಸಿರುವ ಸಿಬಿಎಸ್‌ಇಯ ನಿರ್ಧಾರದ ಮಾನ್ಯತೆ ಪ್ರಶ್ನಿಸಿರುವ ಪ್ರಕರಣದ ತೀರ್ಪಿನ ಮೇಲೆ ನಿಂತಿದೆ ಎಂದು ಸುಪ್ರೀಂಕೋರ್ಟ್‌ ಹೇಳಿದೆ. ಸಿಬಿಎಸ್‌ಇ ಹೊರಡಿಸಿರುವ ಸುತ್ತೋಲೆಯಲ್ಲಿ 2019ರ ಮೇ 5ರ ಬಳಿಕ 25 ವರ್ಷ ದಾಟಿದ ಅಭ್ಯರ್ಥಿಗಳು ನೀಟ್‌ ಪರೀಕ್ಷೆಗೆ ಅರ್ಹತೆ ಹೊಂದಿಲ್ಲ ಎಂದು ತಿಳಿಸಲಾಗಿದೆ. ಈ ಸಂಬಂಧ 2019ನೇ ಸಾಲಿನ ನೀಟ್‌ ಪರೀಕ್ಷೆಗೆ ನ.1ರಂದು ಅಧಿಸೂಚನೆ ಹೊರಡಿಸಲಾಗಿದ್ದು, ಅರ್ಜಿ ಸಲ್ಲಿಕೆಗೆ ನ.30 ಕೊನೆಯ ದಿನವಾಗಿದೆ. ಇದೀಗ 25 ವರ್ಷ ಮೇಲ್ಪಟ್ಟವರು ಕೂಡಾ ಪರೀಕ್ಷೆಗೆ ಹಾಜರಾಗಬಹುದಾಗಿದೆ.