ಸಿಎಂ ತವರಲ್ಲಿ ವಾಮಾಚಾರ

First Published 25, Apr 2018, 9:34 AM IST
Superstition in Mysuru
Highlights

ಸಿಎಂ ತವರು ಜಿಲ್ಲೆಯ  ಚುನಾವಣಾಧಿಕಾರಿ ಕಚೇರಿ ಮುಂಭಾಗದಲ್ಲಿ ವಾಮಾಚಾರ ನಡೆದಿದೆ.  ವರುಣಾ ಕ್ಷೇತ್ರದ ಡಿಸಿ ಕಚೇರಿ ಮುಂಭಾಗದಲ್ಲಿ ವಾಮಾಚಾರ ನಡೆದಿದೆ ಎನ್ನಲಾಗಿದ್ದು  ಕಚೇರಿ ಮುಂಭಾಗದಲ್ಲಿ ಮಾಟ ಮಂತ್ರ ಪದಾರ್ಥಗಳು, ನಿಂಬೆ ಹಣ್ಣು, ತಗಡು, ಅರಿಶಿನ ಕುಂಕುಮ ಪದಾರ್ಥಗಳು ಪತ್ತೆಯಾಗಿವೆ. 

ಮೈಸೂರು (ಏ. 25): ಸಿಎಂ ತವರು ಜಿಲ್ಲೆಯ  ಚುನಾವಣಾಧಿಕಾರಿ ಕಚೇರಿ ಮುಂಭಾಗದಲ್ಲಿ ವಾಮಾಚಾರ ನಡೆದಿದೆ. 

ವರುಣಾ ಕ್ಷೇತ್ರದ ಡಿಸಿ ಕಚೇರಿ ಮುಂಭಾಗದಲ್ಲಿ ವಾಮಾಚಾರ ನಡೆದಿದೆ ಎನ್ನಲಾಗಿದ್ದು  ಕಚೇರಿ ಮುಂಭಾಗದಲ್ಲಿ ಮಾಟ ಮಂತ್ರ ಪದಾರ್ಥಗಳು, ನಿಂಬೆ ಹಣ್ಣು, ತಗಡು, ಅರಿಶಿನ ಕುಂಕುಮ ಪದಾರ್ಥಗಳು ಪತ್ತೆಯಾಗಿವೆ. 
ನಾಮಪತ್ರ ಸಲ್ಲಿಸಿರುವ ಅಭ್ಯರ್ಥಿಗಳು ಗೆಲುವಿನ ನಿರೀಕ್ಷೆಗಳನ್ನಿಟ್ಟುಕೊಂಡು ಜ್ಯೋತಿಷಿಗಳ ಮೂಲಕ ಮಾಟ ಮಂತ್ರ ಮಾಡಿಸಿರುವ ಅನುಮಾನ ವ್ಯಕ್ತವಾಗಿದೆ. ವರುಣಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಯ್ಕೆ ವಿಚಾರ ನಿನ್ನೆ ಭಾರೀ ಸಂಚಲನ‌ ಮೂಡಿಸಿತ್ತು. 

ವಿಜಯೇಂದ್ರಗೆ ಟಿಕೆಟ್ ಕೈ ತಪ್ಪಿದ‌‌ ಬೆನ್ನಲ್ಲೇ ಈ‌ ರೀತಿಯ ವಾಮಾಚಾರ ನಡೆದಿದೆ. 
 

loader