ಹೈದರಾಬಾದ್(ಏ.26): ರಶೀದ್ ಖಾನ್ 19/3 , ಶಕೀಬ್ 18/2, ಸಂದೀಪ್ 17/2 ಹಾಗೂ ಥಂಪಿ 14/2 ದಾಳಿಗೆ ಪಂಜಾಬ್ ಬ್ಯಾಟ್ಸ್’ಮೆನ್’ಗಳು ಸರದಿ ಸಾಲಿನಲ್ಲಿ ಪೆವಿಲಿಯನ್’ಗೆ ತೆರಳಿದರು. 
ಆರಂಭದಲ್ಲಿ ಕೆ.ಎಲ್.ರಾಹುಲ್ (32) ಹಾಗೂ ಕ್ರಿಸ್ ಗೇಲ್(23) ಒಂಚೂರು ಆರ್ಭಟ ತೋರಿದರೂ ಯಾವುದೇ ಪ್ರಯೋಜನವಾಗಲಿಲ್ಲ. 19.2 ಓವರ್’ಗಳಲ್ಲಿ 119 ರನ್’ಗಳಿಗೆ ಪಂಜಾಬ್ ಕಿಂಗ್ಸ್  ಇಲೆವೆನ್ ತಂಡ ಸರ್ವ ಪತನ ಕಂಡು 13ರನ್’ಗಳ ಸೋಲು ಕಂಡಿತು.
ರಜಪೂತ್ ಅಮೋಘ ಬೌಲಿಂಗ್
ಟಾಸ್ ಗೆದ್ದ ಪಂಜಾಬ್ ತಂಡದ ನಾಯಕ ಆರ್.ಅಶ್ವಿನ್  ಹೈದರಾಬಾದ್ ತಂಡವನ್ನು ಬ್ಯಾಟಿಂಗ್ ಆಹ್ವಾನಿಸಿದರು.  ಪಂಜಾಬ್’ನ  ರಜಪೂತ್  15/5  ದಾಳಿಯಿಂದ ಸನ್ ರೈಸರ್ರ್‌ ಹೈದರಾಬಾದ್ ತಂಡ  ಪಂಜಾಬ್ ತಂಡವನ್ನು 133 ರನ್ ಕಟ್ಟಿ ಹಾಕಿದರು.
ಕನ್ನಡಿಗ ಬ್ಯಾಟ್ಸ್’ಮೆನ್ ಮನೀಶ್ ಪಾಂಡೆ ಹಾಗೂ ಶಕೀಬ್(28) ಮಾತ್ರ ಒಂದಿಷ್ಟು ಪ್ರತಿರೋಧ ತೋರಿದರು. ಮನೀಶ್  54 ರನ್’ಗಳ ಆಟದಲ್ಲಿ 1 ಸಿಕ್ಸ್’ರ್ ಹಾಗೂ 3 ಬೌಂಡರಿಗಳಿದ್ದವು.

ಸ್ಕೋರ್
ಸನ್ ರೈಸರ್ರ್‌ ಹೈದರಾಬಾದ್ 20 ಓವರ್’ಗಳಲ್ಲಿ 132/6 
(ಮನೀಶ್ ಪಾಂಡೆ , ಶಕೀಬ್ 28, ಯೂಸೆಫ್ 21 , ರಜಪೂತ್  15/5 )

ಪಂಜಾಬ್ 19.2 ಓವರ್’ಗಳಲ್ಲಿ  119/10
(ರಾಹುಲ್ 32, ಗೇಲ್ 23, ರಶೀದ್ ಖಾನ್ 19/3 , ಶಕೀಬ್ 18/2, ಸಂದೀಪ್ 17/2 ಹಾಗೂ ಥಂಪಿ 14/2 )

ಹೈದರಾಬಾದ್’ಗೆ  13 ರನ್’ಗಳ ಜಯ