ಮುಂಬೈ(ಏ.24): ಹೈದರಾಬಾದ್ ನೀಡಿದ ಕಡಿಮೆ ಮೊತ್ತದ ಗುರಿಯನ್ನು ಬೆನ್ನಟ್ಟಲಾಗದ ಮುಂಬೈ ಇಂಡಿಯನ್ಸ್'ನ ರೋಹಿತ್ ಶರ್ಮಾ ಪಡೆ 87 ರನ್'ಗಳಿಗೆ ಆಲ್'ಔಟ್ ಆಗಿ 32 ರನ್'ಗಳ ಸೋಲನ್ನು ಅನುಭವಿಸಿತು.
ಇದು ಮುಂಬೈ ತಂಡಕ್ಕೆ 5ನೇ ಸೋಲಾಗಿದೆ. ಹೈದರಾಬಾದ್ ಬೌಲರ್'ಗಳ ದಾಳಿಗೆ ಬೆದರಿದ ಮುಂಬೈ ಇಂಡಿಯನ್ಸ್ ಬ್ಯಾಟ್ಸ್'ಮೆನ್'ಗಳು ಸಾಲುಸಾಲಾಗಿ ಪೆವಿಲಿಯನ್'ಗೆ ತೆರಳಿದರು. ಸೂರ್ಯಕಾಂತ್ ಯಾದವ್ (34) ಹಾಗೂ ಕೃನಾಲ್ ಪಾಂಡೆ (24) ಮಾತ್ರ ಒಂಚೂರು ಪ್ರತಿರೋಧ ತೋರಿದರು.   
ಹೈದರಾಬಾದ್ ತಂಡದ ಪರ ಸಿದ್ಧಾರ್ಥ್ ಕೌಲ್ 23/3, ರಶೀದ್ ಖಾನ್ 11/2 ಹಾಗೂ ಬಸೀಲ್ ತಂಪಿ 4/2 ವಿಕೇಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಟಾಸ್ ಗೆದ್ದ ಮುಂಬೈ ತಂಡದ ನಾಯಕ ರೋಹಿತ್ ಶರ್ಮಾ ಹೈದರಾಬಾದ್ ತಂಡವನ್ನು ಬ್ಯಾಟಿಂಗ್'ಗೆ ಆಹ್ವಾನಿಸಿದರು. ನಾಯಕ ಕೇನ್ ವಿಲಿಯಮ್ಸ್'ನ್(29), ಯೂಸಫ್ ಪಠಾಣ್ (29), ಮನೀಶ್ ಪಾಂಡೆ (16) ನಬಿ(14) ಹೊರತು ಪಡಿಸಿದರೆ ಉಳಿದವರ್ಯಾರು ಒಂದಂಕಿಯ ಮೊತ್ತ ದಾಖಲಿಸಲಿಲ್ಲ.
ಮುಂಬೈ ತಂಡದ ಪರ ಹಾರ್ದಿಕ್ ಪಾಂಡ್ಯ 20/2, ಮಾರ್ಕಾಂಡೆ 15/2 ಹಾಗೂ ಮ್ಯಾಕ್ಕ್ಲೇನ್'ಗೇನ್ 22/2 ವಿಕೇಟ್ ಪಡೆದು ಯಶಸ್ವಿ ಬೌಲರ್ ಎನಿಸಿದರು. 

ಸ್ಕೋರ್
ಹೈದರಾಬಾದ್ 18.4 ಓವರ್'ಗಳಲ್ಲಿ 118/10
(ಕೇನ್ ವಿಲಿಯಮ್ಸ್'ನ್ 29, ಯೂಸಫ್ ಪಠಾಣ್ 29, ಪಾಂಡ್ಯ 20/2, ಮಾರ್ಕೆಂಡೆ 15/2 )

ಮುಂಬೈ ಇಂಡಿಯನ್ಸ್ 18.5 ಓವರ್'ಗಲ್ಲಿ 87/10
(ಎಸ್.ಯಾದವ್  34, ಕೆ.ಪಾಂಡ್ಯ 24, ಸಿದ್ಧಾರ್ಥ್ ಕೌಲ್ 23/3, ರಶೀದ್ ಖಾನ್ 11/2 ಹಾಗೂ ಬಸೀಲ್ ತಂಪಿ 4/2 )

ಹೈದರಾಬಾದ್ ತಂಡಕ್ಕೆ 32 ರನ್'ಗಳ ಜಯ