ಮಂಡ್ಯ (ಡಿ. 12): ಅಂಬರೀಶ್ ಗೂ ಮಂಡ್ಯಗೂ ಅವಿನಾಭಾವ ಸಂಬಂಧ. ಮಂಡ್ಯ ಜನರಿಗೂ ಅಷ್ಟೇ ಅಂಬಿ ಎಂದರೆ ಅಪಾರ ಅಭಿಮಾನ. ಅಂಬಿ ಇನ್ನು ನೆನಪು ಮಾತ್ರವಾದರೂ ಮಂಡ್ಯದ ನಂಟು ಮಾತ್ರ ಬಿಟ್ಟಿಲ್ಲ.

ಪತ್ನಿ ಸುಮಲತಾ ಇದನ್ನೇ ಮುಂದುವರೆಸಿಕೊಂಡು ಹೋಗಲಿದ್ದಾರೆ.  ಅಂಬಿ ತಿಂಗಳ ತಿಥಿ ಕಾರ್ಯವನ್ನು ಮಂಡ್ಯದಲ್ಲಿ ನಡೆಸಲು ಚಿಂತನೆ ನಡೆಸಲಾಗಿದೆ ಎಂದು  ಅಂಬಿ ಕುಟುಂಬದ ಆಪ್ತ ಮೂಲಗಳು ತಿಳಿಸಿವೆ. 

ಮೀಟೂ ವಿವಾದದ ನಂತರ ಆಫರ್ ಬರ್ತಾಯಿಲ್ಲ : ಶೃತಿ ಹರಿಹರನ್

ಡಿ.27 ಕ್ಕೆ ಮಂಡ್ಯ ನಗರದಲ್ಲಿ ಅಂಬರೀಶ್ ತಿಂಗಳ ತಿಥಿ ಕಾರ್ಯ ನಡೆಸಲು ಚಿಂತನೆ ನಡೆಸಲಾಗಿದೆ. ತಿಂಗಳ ತಿಥಿ ಕಾರ್ಯದಲ್ಲಿ ಲಕ್ಷಾಂತರ ಜನ ಸೇರುವ ನಿರೀಕ್ಷೆಯಿದೆ. 

ಅಂಬರೀಶ್ ಪಾರ್ಥಿವ ಶರೀರವನ್ನು ಮಂಡ್ಯಕ್ಕೆ ತಂದಾಗಲು ಲಕ್ಷಾಂತರ ಜನ ಅಂಬಿ ಅಂತಿಮ ದರ್ಶನ ಪಡೆದಿದ್ದರು. 11 ನೇ ದಿನದ ಅಂಬಿ ಪುಣ್ಯಸ್ಮರಣೆಯನ್ನು ಜಿಲ್ಲೆಯಾದ್ಯಂತ ಸ್ವಯಂಪ್ರೇರಿತರಾಗಿ ಆಚರಿಸಿದ್ದರು.  ಈ ಹಿನ್ನಲೆಯಲ್ಲಿ ಮಂಡ್ಯದಲ್ಲಿ ಅಂಬಿ ತಿಂಗಳ ತಿಥಿ ಕಾರ್ಯ ನಡೆಸಲು ನಿರ್ಧರಿಸಲಾಗಿದೆ ಎನ್ನಲಾಗಿದೆ. 

ಸಹಾಯ ಹಸ್ತ ಚಾಚಿ ಮಾನವೀಯತೆ ಮೆರೆದ ದರ್ಶನ್

ಜೊತೆಗೆ ರಾಜಕೀಯವಾಗಿಯೂ ಮಂಡ್ಯದೊಂದಿಗೆ ನಂಟು ಬೆಳೆಸಿಕೊಳ್ಳಲು ಸುಮಲತಾ ಚಿಂತಿಸಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.  ಮುಂದಿನ ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಸುಮಲತಾ ಸ್ಪರ್ಧೆ ಮಾಡ್ತಾರೆ ಎಂಬ ಮಾತು ಕೇಳಿ ಬರುತ್ತಿದೆ.