ಬೆಂಗಳೂರು, [ಡಿ. 25]: ಪದ್ಮಶ್ರೀ ಪುರಸ್ಕೃತೆ ಸೂಲಗಿತ್ತಿ ನರಸಮ್ಮ (98) ಇಂದು [ಮಂಗಳವಾರ] ನಿಧನರಾಗಿದ್ದಾರೆ.

"

ಅನಾರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದ ನರಸಮ್ಮ ಅವರನ್ನು ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಗೆ ದಾಖಲಾಗಿಸಲಾಗಿತ್ತು. ಆದ್ರೆ, ಚಿಕಿತ್ಸೆ ಫಲಕಾರಿಯಾಗದೆ ಇಂದು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

2018ನೇ ಪದ್ಮ ಪ್ರಶಸ್ತಿಗಳು ಪ್ರಕಟ: 15 ಸಾವಿರ ಉಚಿತ ಹೆರಿಗೆ ಮಾಡಿಸಿದ್ದ ಕನ್ನಡತಿ ನರಸಮ್ಮಗೆ ಪದ್ಮಶ್ರೀ

ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಕೃಷ್ಣಾಪುರ ಗ್ರಾಮದಲ್ಲಿ ಜನಿಸಿದ್ದ ನರಸಮ್ಮ, ಸಾವಿರಕ್ಕೂ ಹೆಚ್ಚು ಹೆರಿಗೆಗಳನ್ನು ಮಾಡಿಸಿ  ಮಾಡಿಸಿ ಸೈ ಎನಿಸಿಕೊಂಡಿದ್ದರು.

ಇದ್ರಿಂದ ಸೂಲಗಿತ್ತಿ ನರಸಮ್ಮ ಎಂದೇ ಪ್ರಸಿದ್ಧಿ ಪಡೆದಿದ್ದರು. ನರಸಮ್ಮ ಅವರ ಸಾಮಾಜಿಕ  ಸೇವೆ ಪರಿಗಣಿಸಿ ಪದ್ಮಶ್ರೀ, ರಾಜ್ಯೋತ್ಸವ, ಡಾಕ್ಟರೇಟ್ ಸೇರಿ ಹಲವು ಪ್ರತಿಷ್ಠಿತ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.