Asianet Suvarna News Asianet Suvarna News

ಬುದ್ಧನ ಪ್ರತಿಮೆ ಬ್ರಿಟನ್‌ನಿಂದ ಭಾರತಕ್ಕೆ ವಾಪಸ್

- 12 ನೇ ಶತಮಾನದ ಬುದ್ದನ ಪ್ರತಿಮೆ ವಾಪಸ್ 

- 60 ವರ್ಷ ಗಳ ಹಿಂದೆ ಬಿಹಾರದ ನಳಂದಾ ಮ್ಯೂಸಿಯಂನಿಂದ ಬುದ್ಧನ ವಿಗ್ರಹ ಕಳವು

- ಕಳೆದು ಹೋಗಿದ್ದ ಬುದ್ಧನ ಪ್ರತಿಮೆ ವಾಪಸ್ 
 

Stolen Buddha statue returning India after 57 years
Author
Bengaluru, First Published Aug 16, 2018, 10:36 AM IST

ಲಂಡನ್ (ಆ. 16): ಭಾರತದಿಂದ ಕಳವಾಗಿದ್ದ 12 ನೇ ಶತಮಾನದ ಬುದ್ಧನ ಅಪರೂಪದ ವಿಗ್ರಹವೊಂದನ್ನು ಬ್ರಿಟನ್ ಸರ್ಕಾರ, ಭಾರತಕ್ಕೆ ಮರಳಿಸಿದೆ. 60 ವರ್ಷ ಗಳ ಹಿಂದೆ ಬಿಹಾರದ ನಳಂದಾ ಮ್ಯೂಸಿಯಂನಿಂದ ಈ
ವಿಗ್ರಹವನ್ನು ಕಳವು ಮಾಡಲಾಗಿತ್ತು.

ನಂತರದ ವರ್ಷಗಳಲ್ಲಿ ಈ ವಿಗ್ರಹ ಹಲವರ ಕೈಬದಲಾಗಿ ಕೊನೆಗೆ ಬ್ರಿಟನ್‌ನ ಹರಾಜು ಮಾರುಕಟ್ಟೆಗೆ ಬಂದಿ ತ್ತು. ಈ ವೇಳೆ ಭಾರತೀಯ ಅಧಿಕಾರಿಗಳು ಇದನ್ನು ಪತ್ತೆ ಹಚ್ಚಿದ್ದರು. ಈ ಹಿನ್ನೆಲೆಯಲ್ಲಿ ಲಂಡನ್ನ ಮೆಟ್ರೋ ಪಾಲಿಟನ್ ಪೊಲೀಸರು ಈ ವಿಗ್ರಹವನ್ನು ವಶಪಡಿಸಿ ಕೊಂಡು ಭಾರತದ 72 ನೇ ಸ್ವಾತಂತ್ರ್ಯೋತ್ಸವ ದಿನವಾದ ಬುಧವಾರ ಇಲ್ಲಿ ಭಾರತೀಯ ಹೈಕಮೀಷನ್ ಅಧಿಕಾರಿಗಳಿಗೆ ಹಸ್ತಾಂತರ ಮಾಡಿದರು. 

Follow Us:
Download App:
  • android
  • ios