ಬೆಂಗಳೂರು(ನ.22): ಕಳೆದ ಒಂದೂವರೆ ತಿಂಗಳಿಂದ ನೆನೆಗುದಿಗೆ ಬಿದ್ದಿದ್ದ ಬಿಬಿಎಂಪಿಯ 12 ಸ್ಥಾಯಿ ಸಮಿತಿಗಳ ಚುನಾವಣೆಗೆ ಡಿ.4ರಂದು ಹೊಸ ಮುಹೂರ್ತ ನಿಗದಿಯಾಗಿದೆ.

ಸ್ಥಾಯಿ ಸಮಿತಿಗಳ ಅಧ್ಯಕ್ಷರು ಮತ್ತು ಸದಸ್ಯರ ಅಧಿಕಾರಾವಧಿ ಡಿ.5ಕ್ಕೆ ಪೂರ್ಣಗೊಳ್ಳಲಿರುವ ಹಿನ್ನೆಲೆಯಲ್ಲಿ ಡಿ.4ರಂದು ಎಲ್ಲಾ 12 ಸ್ಥಾಯಿ ಸಮಿತಿಗಳಿಗೂ ಚುನಾವಣೆ ನಡೆಸಿ ಹೊಸ ಸದಸ್ಯರನ್ನು ಆಯ್ಕೆಗೆ ಸಭೆ ಗೊತ್ತುಪಡಿಸಲಾಗಿದೆ. ಅಂದು ಬೆಳಗ್ಗೆ 11.30ಕ್ಕೆ ಬಿಬಿಎಂಪಿಯ ಕೆಂಪೇಗೌಡ ಪೌರ ಸಭಾಂಗಣದಲ್ಲಿ ಸ್ಥಾಯಿ ಸಮಿತಿ ಚುನಾವಣಾ ಸಭೆ ಕರೆಯಲಾಗಿದೆ. ಈ ಕುರಿತು ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತ ಹರ್ಷ ಗುಪ್ತ ಅವರು ಗುರುವಾರ ಪ್ರಕಟಣೆ ಹೊರಡಿಸಿದ್ದಾರೆ.

ಉಪಚುನಾವಣೆ: 3.23 ಕೋಟಿ ಮೌಲ್ಯದ ಅಕ್ರಮ ಮದ್ಯ ವಶ

ಕೆಎಂಸಿ ಕಾಯ್ದೆ ಪ್ರಕಾರ ಪ್ರತೀ ವರ್ಷ ಮೇಯರ್‌ ಚುನಾವಣೆ ಸಂದರ್ಭದಲ್ಲೇ ಸ್ಥಾಯಿ ಸಮಿತಿಗಳಿಗೂ ಚುನಾವಣೆ ನಡೆಸಬೇಕು. ಅದರಂತೆ ಕಳೆದ ಅ.1ರಂದು ನಡೆದ ಮೇಯರ್‌ ಚುನಾವಣೆ ವೇಳೆಯಲ್ಲೇ ಸ್ಥಾಯಿ ಸಮಿತಿಗಳ ಚುನಾವಣೆಗೂ ಪ್ರಾದೇಶಿಕ ಆಯುಕ್ತರು ಸಮಯ ನಿಗದಿಪಡಿಸಿದ್ದರು.

BJP ಅಭ್ಯರ್ಥಿಗಳನ್ನು ಶ್ವಾನಕ್ಕೆ ಹೋಲಿಸಿ ಅವಹೇಳನಕಾರಿ ಪೋಸ್ಟ್‌

ಆದರೆ, 2018ರಲ್ಲಿ ಸ್ಥಾಯಿ ಸಮಿತಿಗಳ ಚುನಾವಣೆ ಕಾರಣಾಂತರಗಳಿಂದ ಮೇಯರ್‌ ಚುನಾವಣೆಯಾದ ಒಂದು ತಿಂಗಳು ತಡವಾಗಿ ನಡೆದಿದ್ದರಿಂದ ಈ ಬಾರಿ ಮೇಯರ್‌ ಚುನಾವಣೆ ವೇಳೆಗೆ ಸ್ಥಾಯಿ ಸಮಿತಿ ಅಧ್ಯಕ್ಷರು, ಸದಸ್ಯರ ಅಧಿಕಾರಾವಧಿ ಪೂರ್ಣಗೊಂಡಿರಲಿಲ್ಲ. ಈ ಕಾರಣಕ್ಕೆ ಅವಧಿಗೂ ಮೊದಲೇ ಚುನಾವಣೆ ನಡೆಸಲು ಒಪ್ಪದ ಅಧ್ಯಕ್ಷರು, ಸದಸ್ಯರು ನ್ಯಾಯಾಲಯದ ಮೊರೆ ಹೋಗಿದ್ದರು. ಕೋರ್ಟ್‌ ಚುನಾವಣೆಗೆ ತಡೆ ನೀಡಿತ್ತು.