Asianet Suvarna News Asianet Suvarna News

ಹೊಸ ವರ್ಷ ಜನಿಸುವ ಹೆಣ್ಣು ಮಕ್ಕಳಿಗೆ 5 ಲಕ್ಷ : ಯೋಜನೆಗೆ ವಿರೋಧ

ಬಿಬಿಎಂಪಿ ಆಸ್ಪತ್ರೆಗಳಲ್ಲಿ ಸಹಜ ಹೆರಿಗೆಯಿಂದ ಜನಿಸುವ ಹೆಣ್ಣು ಮಗುವಿಗೆ 5 ಲಕ್ಷ ರೂ.ಅನುದಾನ ನೀಡುವ ‘ಪಿಂಕ್ ಬೇಬಿ ಯೋಜನೆ’ಯನ್ನು ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಘೋಷಿಸಿರುವುದನ್ನು ಶ್ರೀರಾಮ ಸೇನೆ ವಿರೋಧಿಸಿದೆ.

Sri Rama Sena Oppose To BBMP Pink Baby Scheme
Author
Bengaluru, First Published Dec 30, 2018, 9:20 AM IST

ಬೆಂಗಳೂರು: ಹೊಸ ವರ್ಷದ ದಿನದಂದು ಬಿಬಿಎಂಪಿ ಆಸ್ಪತ್ರೆಗಳಲ್ಲಿ ಸಹಜ ಹೆರಿಗೆಯಿಂದ ಜನಿಸುವ ಹೆಣ್ಣು ಮಗುವಿಗೆ 5 ಲಕ್ಷ ರೂ.ಅನುದಾನ ನೀಡುವ ‘ಪಿಂಕ್ ಬೇಬಿ ಯೋಜನೆ’ಯನ್ನು ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಘೋಷಿಸಿರುವುದನ್ನು ಶ್ರೀರಾಮ ಸೇನೆ ವಿರೋಧಿಸುತ್ತದೆ ಎಂದು ಬೆಂಗಳೂರು ರಾಜ್ಯಾಧ್ಯಕ್ಷ ವಿನಯ್‌ಗೌಡ ಹೇಳಿದರು. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಯೋಜನೆಯ ಬದಲು ಹೆಣ್ಣು ಮಕ್ಕಳ ಶಿಕ್ಷಣ, ಆರೋಗ್ಯ, ಸರ್ವಾಂಗೀಣ ಅಭಿವೃದ್ಧಿಗೆ ಆದ್ಯತೆ ನೀಡುವುದು ಸೂಕ್ತ ಆಡಳಿತದಲ್ಲಿರುವವರು ನಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ರಕ್ಷಿಸುವ ಕೆಲಸ ಮಾಡಬೇಕು ಎಂದರು. ಈ ಬಾರಿ ಹೊಸ ವರ್ಷಾಚರಣೆಗೆ ಸರ್ಕಾರವೇ ಪ್ರೋತ್ಸಾಹ ನೀಡುತ್ತಿರುವುದು
ಖಂಡನೀಯ.

ಯುಗಾದಿ ನಮಗೆ ಹೊಸ ವರ್ಷವಾಗಿದ್ದು,ಯುಗಾದಿಯನ್ನ ಸಂಭ್ರಮದಿಂದ ಆಚರಿಸುವುದು ಸೂಕ್ತ. ಜ. 1 ರಂದು ಬಹಿರಂಗವಾಗಿ ಹೊಸ ವರ್ಷ ಆಚರಿಸುವುದು.ಮದ್ಯಪಾನ ಸೇವಿಸಿ ಬೀದಿ ಬೀದಿಗಳಲ್ಲಿ ಕುಣಿಯುವ ಸಂಸ್ಕೃತಿ ನಮ್ಮದಲ್ಲ.ನಮ್ಮ ಮುಂದಿನ ಪೀಳಿಗೆ ಇದನ್ನೇ ಅನುಕರಣೆ ಮಾಡುತ್ತಾರೆ.ಹೊಸ ವರ್ಷಾಚರಣೆ ಪಾಶ್ಚಿಮಾತ್ಯರ ಆಚರಣೆ.ಇದನ್ನು ಆಚರಿಸಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಹೇಳಿದರು. 

Follow Us:
Download App:
  • android
  • ios