ಕೊಲಂಬೋ[ಮೇ.08]: ಈಸ್ಟರ್‌ ಭಾನುವಾರದ ಸರಣಿ ಬಾಂಬ್‌ ಸ್ಫೋಟ ಮತ್ತು ನಂತರ ಬೆಳವಣಿಗೆಗೆ ಕಾರಣರಾಗಿದ್ದ ಎಲ್ಲಾ ಇಸ್ಲಾಮಿಕ್‌ ಉಗ್ರರನ್ನು ಬಂಧಿಸಲಾಗಿದೆ ಇಲ್ಲವೇ ಹತ್ಯೆಗೈಯಲಾಗಿದೆ. ಹೀಗಾಗಿ ಇದೀಗ ದ್ವೀಪರಾಷ್ಟ್ರ ಸುರಕ್ಷಿತವಾಗಿದೆ. ದೇಶ ಸಾಮಾನ್ಯ ಸ್ಥಿತಿಗೆ ಹಿಂದಿರುಗುವ ಸಮಯ ಸನ್ನಿಹಿತವಾಗಿದೆ ಎಂದು ಶ್ರೀಲಂಕಾ ಘೋಷಿಸಿದೆ.

ಶ್ರೀಲಂಕಾಕ್ಕೆ ಹೆಚ್ಚಿನ ಕನ್ನಡಿಗರು ಹೋಗುವುದೇಕೆ?: ಇಂಟೆರೆಸ್ಟಿಂಗ್ ಮಾಹಿತಿ

ಸೇನೆಯ ಮೂರು ವಿಭಾಗದ ಮುಖ್ಯಸ್ಥರು, ಪೊಲೀಸ್‌ ವಿಭಾಗದ ಮುಖ್ಯಸ್ಥರು ನಡೆಸಿದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಈ ಹೇಳಿಕೆ ನೀಡಲಾಗಿದೆ. ಉಗ್ರ ಸಂಘಟನೆ ಬಳಿ ಇದ್ದ ಎಲ್ಲಾ ಸ್ಫೋಟಕ ಪದಾರ್ಥ ವಶಪಡಿಸಿಕೊಳ್ಳಲಾಗಿದೆ. ಉಗ್ರ ಸಂಘಟನೆಯ ಎಲ್ಲಾ ಸದಸ್ಯರನ್ನು ಗುರುತಿಸಲಾಗಿದೆ. ಸಂಘಟನೆಯ ಬಳಿಕ ಅಂದಾಜು 14 ಕೋಟಿ ರು. ನಗದು ಮತ್ತು 700 ಕೋಟಿ ರು. ಮೌಲ್ಯದ ಆಸ್ತಿ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.