ಕಡಿಮೆ ಮೊತ್ತಕ್ಕೆ ಹೈದರಾಬಾದ್ ಪತನ
ನಾಯಕ ಕೇನ್ ವಿಲಿಯಮ್ಸ್'ನ್(29), ಯೂಸಫ್ ಪಠಾಣ್ (29), ಮನೀಶ್ ಪಾಂಡೆ (16) ನಬಿ(14) ಹೊರತು ಪಡಿಸಿದರೆ ಉಳಿದವರ್ಯಾರು ಒಂದಂಕಿಯ ಮೊತ್ತವನ್ನು ದಾಖಲಿಸಲಿಲ್ಲ.
ಮುಂಬೈ(ಏ.24): ಅತೀ ಕನಿಷ್ಠ ಮೊತ್ತಕ್ಕೆ ಪತನವಾಗಿರುವ ಹೈದರಾಬಾದ್ ತಂಡ ಮುಂಬೈ ಇಂಡಿಯನ್ಸ್ ತಂಡಕ್ಕೆ 119 ರನ್ ಟಾರ್ಗೆಟ್ ನೀಡಿದ್ದು 4 ಪಂದ್ಯಗಳನ್ನು ಸೋತಿರುವ ಮುಂಬೈ ತಂಡ 2ನೇ ಪಂದ್ಯ ಗೆಲ್ಲುವ ನಿರೀಕ್ಷೆಯಲ್ಲಿದೆ.
ಟಾಸ್ ಗೆದ್ದ ಮುಂಬೈ ತಂಡದ ನಾಯಕ ರೋಹಿತ್ ಶರ್ಮಾ ಹೈದರಾಬಾದ್ ತಂಡವನ್ನು ಬ್ಯಾಟಿಂಗ್'ಗೆ ಆಹ್ವಾನಿಸಿದರು. ನಾಯಕ ಕೇನ್ ವಿಲಿಯಮ್ಸ್'ನ್(29), ಯೂಸಫ್ ಪಠಾಣ್ (29), ಮನೀಶ್ ಪಾಂಡೆ (16) ನಬಿ(14) ಹೊರತು ಪಡಿಸಿದರೆ ಉಳಿದವರ್ಯಾರು ಒಂದಂಕಿಯ ಮೊತ್ತವನ್ನು ದಾಖಲಿಸಲಿಲ್ಲ.
ಮುಂಬೈ ತಂಡದ ಪರ ಹಾರ್ದಿಕ್ ಪಾಂಡ್ಯ 20/2, ಮಾರ್ಕಾಂಡೆ 15/2 ಹಾಗೂ ಮ್ಯಾಕ್ಕ್ಲೇನ್'ಗೇನ್ 22/2 ವಿಕೇಟ್ ಪಡೆದು ಯಶಸ್ವಿ ಬೌಲರ್ ಎನಿಸಿದರು.
ಸ್ಕೋರ್
ಹೈದರಾಬಾದ್ 18.4 ಓವರ್'ಗಳಲ್ಲಿ 118/10
(ಕೇನ್ ವಿಲಿಯಮ್ಸ್'ನ್ 29, ಯೂಸಫ್ ಪಠಾಣ್ 29, ಪಾಂಡ್ಯ 20/2, ಮಾರ್ಕೆಂಡೆ 15/2 )
ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯ
(ವಿವರ ಅಪೂರ್ಣ)