ನವದೆಹಲಿ (ಡಿ. 28): 60 ವರ್ಷದ ದಾಟಿದ ತೃತೀಯ ಲಿಂಗಿಗಳಿಗೆ ಇನ್ನು ಮುಂದೆ ರೈಲ್ವೆ ಪ್ರಯಾಣದ ವೇಳೆ ಶೇ.40ರಷ್ಟುರಿಯಾಯಿತಿ ಸಿಗಲಿದೆ.

ಇದುವರೆಗೆ 60 ವರ್ಷ ದಾಟಿದ ಪುರುಷರಿಗೆ ಶೇ.40 ಮತ್ತು 58 ವರ್ಷ ದಾಟಿದ ಮಹಿಳೆಯರಿಗೆ ರೈಲ್ವೆ ಪ್ರಯಾಣದ ವೇಳೆ ಶೇ.50ರಷ್ಟುರಿಯಾಯಿತಿ ಸಿಗುತ್ತಿತ್ತು. ಹೊಸ ಬುಕಿಂಗ್‌ ಕಾಲಂನಲ್ಲಿ ತೃತೀಯ ಲಿಂಗಿಗಳಿಗೆ ಪ್ರತ್ಯೇಕ ವ್ಯವಸ್ಥೆ ಇತ್ತಾದರೂ, ಅವರಿಗೆ ರಿಯಾಯಿತಿ ಸಿಗುತ್ತಿರಲಿಲ್ಲ. ಇದೀಗ ಅವರಿಗೂ ರಿಯಾಯಿತಿ ಸೌಲಭ್ಯ ವಿಸ್ತರಿಸಲಾಗಿದೆ.