ಗೌರಿಗದ್ದೆ ಆಶ್ರಮದ ವಿನಯ್​ ಗುರೂಜಿಗೆ ಸ್ಪೀಕರ್​​ ಪಾದಪೂಜೆ..!

ಚಿಕ್ಕಮಗಳೂರು(ಜೂ.8): ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಹರಿಹರಪುರದ ಗೌರಿಗದ್ದೆ ಆಶ್ರಮ ದಿನದಿಂದ ದಿನಕ್ಕೆ ಪ್ರಸಿದ್ಧಿ ಪಡೆಯುತ್ತಿದೆ. ಈ ಆಶ್ರಮಕ್ಕೆ ಪ್ರಮುಖ ರಾಜಕೀಯ ಮುಖಂಡರ ಭೇಟಿಯೂ ಹೆಚ್ಚಾಗುತ್ತಿದೆ. ಕಳೆದ ಏಳೆಂಟು ವರ್ಷಗಳಿಂದ ಅಶ್ರಮ ನಡೆಯುತ್ತಿದೆ. 

ಗೌರಿ ಗದ್ದೆ ಆಶ್ರಮದ ವಿನಯ್​​ ಗುರೂಜಿ, ಭವಿಷ್ಯ ನುಡಿಯುವ ಮೂಲಕ ಖ್ಯಾತಿ ಆಗಿದ್ದಾರೆ. ಹರಿಹರಪುರದ ಗೌರಿಗದ್ದೆಯ ಅವಧೂತ ವಿನಯ ಗುರೂಜಿ ದರ್ಶನ ಪಡೆಯಲು ಕಳೆದ ಮೂರು ದಿನಗಳ ಹಿಂದೆ ಸ್ಪೀಕರ್ ರಮೇಶ್ ಕುಮಾರ್ ಆಗಮಿಸಿದ್ದರು. ಆಶ್ರಮಕ್ಕೆ ಭೇಟಿ ನೀಡಿ ಕೆಲ ಕಾಲ ಅವದೂತ ವಿನಯ ಗುರೂಜಿಯೊಂದಿಗೆ ಮಾತುಕತೆ ನಡೆಸಿದ್ದಾರೆ. ಅಲ್ಲದೆ ಅವರ ಪಾದಪೂಜೆಯನ್ನೂ ಮಾಡಿದ್ದಾರೆ. 

ಚುನಾವಣಾ ಪೂರ್ವ ಜೆಡಿಎಸ್ ಮುಖಂಡರಾದ ಹೆಚ್ ಡಿ ರೇವಣ್ಣ, ಶರವಣ ಸೇರಿದಂತೆ ಡಿ.ಕೆ ಶಿವಕುಮಾರ್ ಕೂಡ ಆರ್ಶಿರ್ವಾದ ಪಡೆದಿದ್ದರು. ಇತ್ತೀಚೆಗೆ ಹೆಚ್ ಡಿ ಕುಮಾರಸ್ವಾಮಿ, ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಬೆಂಗಳೂರಿನಲ್ಲಿ ವಿನಯ್​ ಗುರೂಜಿಯನ್ನು ಭೇಟಿಯಾಗಿ ಪಾದಪೂಜೆಯನ್ನು ಮಾಡಿದ್ದರು.

Comments 0
Add Comment