UP,MP ಬಳಿಕ ಇದೀಗ ಗುಜರಾತ್; ಲವ್ ಜಿಹಾದ್ ವಿರುದ್ಧ ಮತ್ತಷ್ಟು ಕಠಿಣ ಕಾನೂನು !...

ಉತ್ತರ ಪ್ರದೇಶ ಸರ್ಕಾರ ಹಾಗೂ ಮಧ್ಯ ಪ್ರದೇಶ ಸರ್ಕಾರ ಲವ್ ಜಿಹಾದ್ ಹಾಗೂ ಮತಾಂತರ ಕಾಯ್ದೆ ಜಾರಿಗೊಳಿಸಿದೆ. ಸುಗ್ರೀವಾಜ್ಞೆ ಮೂಲಕ ಕಾನೂನು ತಂದಿದೆ. ಇದೀಗ ಬಿಜೆಪಿ ಆಡಳಿತ ಇತರ ರಾಜ್ಯಗಳು ಲವ್ ಜಿಹಾದ್ ವಿರುದ್ಧ ಕಾನೂನು ಜಾರಿಗೆ ಮುಂದಾಗಿದೆ. ಇದೀಗ ಗುಜರಾತ್ ಸರದಿ. ಆದರೆ ಎರಡು ರಾಜ್ಯಗಳ ಮತಾಂತರ ಕಾಯ್ದೆ ಪರಿಶೀಲಿಸಿ, ಮತ್ತಷ್ಟು ಕಠಿಣ ಕಾನೂನು ಜಾರಿಗೆ ತರಲು ಮುಂದಾಗಿದೆ. 

ರೈತರ ಪ್ರತಿಭಟನೆಯಿಂದ ಆರ್ಥಿಕತೆಗೆ ಒಟ್ಟಾರೆ 70,000 ಕೋಟಿ ನಷ್ಟ!...

 ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆ ವಿರೋಧಿಸಿ ರಾಷ್ಟ್ರ ರಾಜಧಾನಿಯಲ್ಲಿ ಕಳೆದೊಂದು ತಿಂಗಳಿನಿಂದ ರೈತರ ಪ್ರತಿಭಟನೆ| ರೈತರ ಪ್ರತಿಭಟನೆಯಿಂದ ಆರ್ಥಿಕತೆಗೆ ಒಟ್ಟಾರೆ 70,000 ಕೋಟಿ ನಷ್ಟ

ಹೊಸ ವರ್ಷದ ಪಟಾಕಿ ಗದ್ದಲ: ಸತ್ತು ಬಿದ್ದವು ನೂರಾರು ಪಕ್ಷಿಗಳು...

ಹೊಸ ವರ್ಷದ ಹಿಂದಿನ ದಿನ ಇಟಾಲಿಯನ್ ರಾಜಧಾನಿಯಲ್ಲಿ ಜನರು ಪಟಾಕಿ ಸಿಡಿಸಿದ ನಂತರ ರೋಮ್ ಬೀದಿಗಳಲ್ಲಿ ನೂರಾರು ಪಕ್ಷಿಗಳು ಸತ್ತು ಬಿದ್ದವು. ಬೀದಿಗಳಲ್ಲಿ ಪಕ್ಷಿಗಳು - ಹೆಚ್ಚಾಗಿ ಸ್ಟಾರ್ಲಿಂಗ್‌ಗಳು ನೆಲದ ಮೇಲೆ ಸತ್ತು ಬಿದ್ದ ಫೋಟೋಸ್ ವೈರಲ್ ಆಗಿದೆ.

ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಆರೋಗ್ಯದಲ್ಲಿ ಏರುಪೇರು, ಆಸ್ಪತ್ರೆಗೆ ದಾಖಲು!...

ಬಿಸಿಸಿಐ ಅಧ್ಯಕ್ಷ ಹಾಗೂ ಟೀಮ್ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಆರೋಗ್ಯದಲ್ಲಿ ಏರುಪೇರಾಗಿದ್ದು, ಶನಿವಾರ ಅಅವರನ್ನು ಕೋಲ್ಕತ್ತಾದ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಂಗೂಲಿಗೆ ಎದೆನೋವು ಕಾಣಿಸಿಕೊಂಡ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿರುವುದಾಗಿ ತಿಳಿದು ಬಂದಿದೆ. 

ಮಾಲ್ಡೀವ್ಸ್‌ನಲ್ಲಿ ಅನನ್ಯಾ ಪಾಂಡೆ ಹಾಟ್ ಬಿಕಿನಿ ಲುಕ್: ಫೋಟೋಸ್ ನೋಡಿ...ಅನನ್ಯಾ ಪಾಂಡೆ ಮಾಲ್ಡೀವ್ಸ್‌ನಲ್ಲಿ ಬ್ಯೂಟಿಫುಲ್ ಈಜುಡುಗೆಯಲ್ಲಿ ಮಿಂಚಿದ್ದಾರೆ. 2021 ಅನ್ನು ಸ್ವಾಗತಿಸುತ್ತಿದ್ದಂತೆ ಸೂರ್ಯಕಾಂತಿ ಬಿಕಿನಿಯಲ್ಲಿ ಪೂಲ್‌ನಲ್ಲಿ ಎಂಜಾಯ್ ಮಾಡ್ತಿರೋ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಬೆಳಗಾವಿ ಪಾಲಿಕೆ ಎದುರು ಕನ್ನಡ ಧ್ವಜ ಹಾರಿಸಿದವರ ಮನೆಗೆ ಬೆಂಕಿ: ಎಚ್‌ಡಿಕೆ ಫುಲ್ ಗರಂ...

ಬೆಳಗಾವಿ ಮಹಾನಗರ ಪಾಲಿಕೆ ಎದುರು ಕನ್ನಡ ಧ್ವಜ ಹಾರಿಸಿದವರ ಮನೆಗೆ ಬೆಂಕಿ ಇಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಕೆಂಡಾಮಂಡಲರಾಗಿದ್ದಾರೆ.

'ಬಿಜೆಪಿ ವಿತರಿಸೋ ಲಸಿಕೆ ಹಾಕಿಸ್ಕೊಳ್ಳಲ್ಲ, ನಮ್ಮ ಸರ್ಕಾರ ಬಂದ್ರೆ ಉಚಿತ ವ್ಯಾಕ್ಸಿನ್'...

ಸಮಾಜವಾದಿ ಪಕ್ಷದ ನಾಯಕ ಹಾಗೂ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ವಿವಾದಾತ್ಮಕ ಹೇಳಿಕೆ| ಬಿಜೆಪಿ ವಿತರಿಸುವ ಲಸಿಕೆ ಹಾಕಿಸಿಕೊಳ್ಳುವುದಿಲ್ಲ, ನನಗೆ ಅವರು ಕೊಡುವ ಲಸಿಕೆ ಮೇಲೆ ನಂಬಿಕೆ ಇಲ್ಲ

ಜಾಹೀರಾತು ಲೋಕಕ್ಕೆ ಕಾಲಿಟ್ಟ ಧೋನಿ ಪುತ್ರಿ ಝಿವಾ...

ಟೀಂ ಇಂಡಿಯಾ ಮಾಜಿ ನಾಯಕ ಎಂ ಎಸ್ ಧೋನಿ ಹಾಗೂ ಮತ್ತವರ ಪುತ್ರಿ ಝಿವಾ ಒಟ್ಟಾಗಿ ಜಾಹೀರಾತೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಧ್ವಂಸಗೊಂಡ ಹಿಂದೂ ದೇಗುಲ ಸರ್ಕಾರಿ ವೆಚ್ಚದಲ್ಲಿ ನಿರ್ಮಾಣ: ಪಾಕ್‌ ಭರವಸೆ...

ಪಾಕಿಸ್ತಾನದ ಖೈಬರ್‌ ಪಖ್ತುಂಖ್ವಾದಲ್ಲಿರುವ 100 ವರ್ಷ ಇತಿಹಾಸದ ಹಿಂದು ದೇವಾಲಯದ ಧ್ವಂಸ ಮತ್ತು ಬೆಂಕಿ ಇಟ್ಟಿರುವ ಪ್ರಕರಣ ಸಂಬಂಧ ಭಾರತ ಸರ್ಕಾರ ತೀವ್ರ ವಿರೋಧ ವ್ಯಕ್ತಪಡಿಸಿದೆ. ರಾಜತಾಂತ್ರಿಕ ಹಾದಿಯಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಪ್ರತಿಭಟನೆ ದಾಖಲಿಸಿದೆ. ಮಾನವ ಹಕ್ಕುಗಳ ಹೋರಾಟಗಾರರೂ ಘಟನೆಯನ್ನು ಖಂಡಿಸಿದ್ದಾರೆ.

ಶಾಲಾ-ಕಾಲೇಜು ಪ್ರಾರಂಭದ ನಡುವೆ ವಿದ್ಯಾರ್ಥಿಗಳಿಗೆ ಗುಡ್‌ ನ್ಯೂಸ್...!...

ಕೊರೋನಾ ಭೀತಿಯ ನಡುವೆಯೂ ಶಾಲಾ-ಕಾಲೇಜುಗಳನ್ನ ಪ್ರಾರಂಭಿಸಲಾಗಿದೆ. ಇದರ ಮಧ್ಯೆ ಬಸ್ ಮೂಲಕ ಶಾಲಾ-ಕಾಲೇಜುಗಳಿಗೆ ಪ್ರಯಾಣ ಮಾಡುವ  ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ಇಲ್ಲಿದೆ.