ನವದೆಹಲಿ : ಇಷ್ಟು ದಿನಗಳ ಕಾಲ ಪೆಟ್ರೋಲ್  ಡೀಸೆಲ್ ಬೆಲೆ ಏರಿಕೆಯಿಂದ ತತ್ತರಿಸಿದ್ದ ಜನರಿಗೆ ಶೀಘ್ರದಲ್ಲೇ ಇದೀಗ ಮತ್ತೊಂದು ಶಾಕ್ ಕಾದಿದೆ. 

ಶೀಘ್ರದಲ್ಲೇ ಮೊಬೈಲ್ ಹಾಗೂ ಇಂಟರ್ನೆಟ್ ದರಗಳಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ. ಮುಂದಿನ ಒಂದೆರಡು ತಿಂಗಳಲ್ಲಿ  ಟೆಲಿಕಾಂ ಕಂಪನಿಗಳ ಸುಂಕ ಹೆಚ್ಚಳವಾಗುವ ಸಾಧ್ಯತೆ ಇದ್ದು ಈ ನಿಟ್ಟಿನಲ್ಲಿ ಕರೆ ಹಾಗೂ ಡೇಟಾ ದರದಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ. 

ಈ ಬದಲಾವಣೆಗೆ ಪ್ರಮುಖವಾಗಿ ರಿಲಾಯನ್ಸ್ ಜಿಯೋ ಕಾರಣವಾಗುತ್ತಿದ್ದು, ಉಚಿತವಾಗಿ ಸೌಲಭ್ಯ ನೀಡಿದ್ದ ಜಿಯೋದಿಂದ  ಉಳಿದ ಕಂಪನಿಗಳ ಮೇಲೆ  ಹೊಡೆತ ಬಿದ್ದಿದ್ದು, ಇದರಿಂದ ಚೇತರಿಸಿಕೊಳ್ಳಲು ಬೇರೆ ಸುಂಕವನ್ನು ಏರಿಕೆ ಮಾಡುವ ಸಾಧ್ಯತೆ ಇದೆ.