ಹುಬ್ಬಳ್ಳಿ (ಫೆ. 17): ರಜೆ ಮೇಲೆ ಊರಿಗೆ ಬಂದಿದ್ದ ಯೋಧನ ಮೇಲೆ ಯುವಕರ ಗುಂಪು ಹಲ್ಲೆ‌ ನಡೆಸಿರುವ ಘಟನೆ  ಕುಂದಗೋಳ ತಾಲೂಕಿನ ಗುಡೇನಕಟ್ಟಿ ಗ್ರಾಮದಲ್ಲಿ ನಡೆದಿದೆ. 

ಯೋಧ ಭರತೇಶ್ ಯೋಗಪ್ಪ ಕಳೆದ ನಾಲ್ಕು ವರ್ಷದಿಂದ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ನಾಲ್ಕು ಜನರ ಯುವಕರ ತಂಡ ಬೈಕಿನಲ್ಲಿ ಸೌಂಡು ಮಾಡಿಕೊಂಡು ಬರುವುದನ್ನು ಪ್ರಶ್ನಿಸಿದಾಗ ಯುವಕರು ಹಲ್ಲೆ ನಡೆಸಿದ್ದಾರೆ. 

ಆನಂತರ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.  ಈ ಘಟನೆಯಿಂದ ರೊಚ್ಚಿಗೆದ್ದ ಗುಡೇನಕಟ್ಟಿ ಗ್ರಾಮಸ್ಥರು ಇಬ್ಬರು ಆರೋಪಿಗಳಾದ ವಿನಾಯಕ ಶಿಶ್ವಿನಹಳ್ಳಿ ಹಾಗೂ ಮಹಾಂತೇಶ ಶಿಶ್ವಿನಹಳ್ಳಿಯನ್ನು ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ.