ಬೆಂಗಳೂರು(ಡಿ. 30) ಈ ಸುದ್ದಿಯನ್ನು ಮೊದಲು ಎತ್ತಿದ್ದು ಸೋಶಿಯಲ್ ಮೀಡಿಯಾ. ಸೋಶಿಯಲ್ ಮೀಡಿಯಾದಲ್ಲಿ ಬರೀ ಬೇಡದ್ದೇ ಬರುತ್ತಿದೆ ಎಂದು ಮೂಗು ಸಿಂಡರಿಸುವವರಿಗೆ ಇಲ್ಲಿ ಒಂದು ಮಹತ್ವದ ವಿಚಾರ ಇದೆ.

ಇನ್ನೇನು ಮುಂದಿನ ವಾರದಿಂದ ಹೊಸವರ್ಷ ಆರಂಭವಾಗಲಿದೆ. 2020 ಆರಂಭವಾದ ಬಳಿಕ ನೀವು ದಿನಾಂಕ ನಮೂದಿಸುವ ಸಂದರ್ಭದಲ್ಲಿ ಹುಷಾರಾಗಿರಬೇಕು.

ದಿನಾಂಕ ಬರೆಯುವಾಗ ಅಂದರೆ ಜನವರಿ 1ನ್ನು ಬರೆಯುವಾಗ 1-1-20 ಎಂದು ಬರೆದರೆ ಸಮಸ್ಯೆಗೆ ಸಿಕ್ಕಿಹಾಕಿಕೊಳ್ಳುತ್ತೀರಿ. ಅದರಲ್ಲೂ ಜಮೀನು ದಾಖಲೆ, ಕರಾರು ಪತ್ರದಂತಹ ವಿಚಾರದಲ್ಲಿ ಎಚ್ಚರದಿಂದಲೇ ಇರಬೇಕು.

ಹೊಸ ವರ್ಷಕ್ಕೆ ಹಾರುವ ಕಾರು

ಒಂದು ವೇಳೆ ನೀವು 1-1-20 ಎಂದು ಬರೆದರೆ ಅದನ್ನು 2000ನೇ ಇಸವಿ ಅತವಾ 2000 ದಿಂದ 2019ರ ವರೆಗಿನ ಯಾವ ಇಸವಿಯನ್ನಾದರೂ ಮಾಡುವ ಸಾಧ್ಯತೆ ಇದೆ. ಇಲ್ಲವೇ 21 ರಿಂದ 29 ನ್ನು ಬಲಕ್ಕೆ ಸೇರಿಸಿ ದಿನಾಂಕ ಮುಂದೆ ಹಾಕುವ ಸಾಧ್ಯತೆಯೂ ಇದೆ.  ಹಾಗಾಗಿ ಇನ್ನು ಮುಂದೆ ದಿನಾಂಕ ಬರೆಯುವಾಗ ಜಾಗೃತೆ ಮತ್ತು ಎಚ್ಚರ.