ನವದೆಹಲಿ(ನ.20): ಕೇಂದ್ರ ಸಚಿವೆ ಸ್ಮೃತಿ ಇರಾನಿ ಸಾಮಾಜಿಕ ಜಾಲತಾಣದಲ್ಲಿ ಸಕ್ರೀಯರಾಗಿರುತ್ತಾರೆ. ಇಷ್ಟೇ ಅಲ್ಲ ಹಾಸ್ಯದಲ್ಲೇ  ವಿಡಂಬನೆ ಮಾಡುವ, ವಿರೋಧಿಗಳನ್ನು ತಿವಿಯು ಕಲೆ ಸ್ಮೃತಿ ಇರಾನಿಗೆ ಚೆನ್ನಾಗಿ ತಿಳಿದಿದೆ. ಹೀಗಾಗಿ ಸ್ಮೃತಿ  ಇರಾನಿ ಟ್ವೀಟ್‌ಗಳು, ಸಾಮಾಜಿಕ ಜಾಲತಾಣದಲ್ಲಿನ ಪೋಸ್ಟ್‌ಗಳು ಹೆಚ್ಚು ಮಹತ್ವ ಪಡೆದುಕೊಳ್ಳುತ್ತವೆ. ಇದೀಗ ಸ್ಮೃತಿ ಇರಾನಿ, ಶ್ರೀಮಂತ ಉದ್ಯಮಿ, ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್‌ಗೇಟ್ಸ್ ಜೊತೆಗಿನ ಫೋಟೋ ಹಂಚಿಕೊಳ್ಳೋ ಮೂಲಕ ಹಾಸ್ಯದ ಮೂಲಕ ತಮ್ಮನ್ನು ಟೀಕಿಸಿದವರಿಗೆ  ತಿರುಗೇಟು ನೀಡಿದ್ದಾರೆ.

ಇದನ್ನೂ ಓದಿ: ಸ್ಮೃತಿ ಇರಾನಿಗೆ ಕ್ಲೀನ್ ಚಿಟ್ ನೀಡಿದ ಕೋರ್ಟ್

ಬಿಲ್‌ಗೇಟ್ಸ್ ಜೊತೆಗಿರುವ ಫೋಟೋವನ್ನು ಸ್ಮೃತಿ ಇರಾನಿ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಹೆಚ್ಚಿನ ವಿಶೇಷತೆ ಇಲ್ಲ. ಆದರೆ ಫೋಟೋ ಕೆಳೆಗಿನ ಕ್ಯಾಪ್ಶನ್ ಹಾಸ್ಯಭರಿತ ಮಾತ್ರವಲ್ಲ, ಟೀಕಿಸಿದವರಿಗೆ ಚಾಟಿ ಬೀಸಿದಂತಿದೆ. ವಿದ್ಯಾಭ್ಯಾಸ ಪೂರ್ತಿಗೊಳಿಸಿಲ್ಲ, ಯೋಚನೆ ಮಾಡುತ್ತಿದ್ದೇವೆ, ಮುಂದೇನು ಮಾಡೋದು? ಎಂದು ಸ್ಮೃತಿ ಬರೆದುಕೊಂಡಿದ್ದಾರೆ.

 

 
 
 
 
 
 
 
 
 
 
 
 
 

सोच रहे हैं पढ़ाई पूरी करी नहीं , आगे क्या करें 🧐

A post shared by Smriti Irani (@smritiiraniofficial) on Nov 18, 2019 at 5:12am PST

ಇದನ್ನೂ ಓದಿ: 'ದಿ ಸ್ವೋರ್ಡ್ ಆಫ್ ಸ್ಮೃತಿ ಇರಾನಿ': ಕೇಂದ್ರ ಸಚಿವೆ ಕೈಯಲ್ಲಿ ಖಡ್ಗ!

ಸ್ಮೃತಿ ಇರಾನಿ ಹಾಗೂ ಬಿಲ್ ಗೇಟ್ಸ್ ಇಬ್ಬರೂ ಕೂಡ ವಿದ್ಯಾಭ್ಯಾಸ ಪೂರ್ಣಗೊಳಿಸಿಲ್ಲ. ಇಬ್ಬರೂ ಡ್ರಾಪ್ ಔಟ್ ಸ್ಟೊಡೆಂಟ್ಸ್. ಆದರೆ ಇಬ್ಬರೂ ಕೂಡ ತಮ್ಮ ತಮ್ಮ ಕ್ಷೇತ್ರದಲ್ಲಿ ಸಾಧನೆ ಮಾಡಿದವರು. ಹೀಗಾಗಿ ಇದೇ ಫೋಟೋವನ್ನು ಬಳಸಿಕೊಂಡ ಇರಾನಿ, ತಮ್ಮ ಡ್ರಾಪ್ ಔಟ್ ಕುರಿತು ಹಾಸ್ಯ ಮಾಡಿದ್ದಾರೆ. ಇರಾನಿ ಸಾಮಾಜಿಕ ಜಾಲತಾಣದ ಪೋಸ್ಟ್ ಕೇವಲ ಹಾಸ್ಯಕ್ಕೆ ಸೀಮಿತವಾಗಿಲ್ಲ. ಈ ಹಿಂದೆ ಹಲವು ಬಾರಿ ಸ್ಮೃತಿ ಇರಾನಿ ಪದವಿ ಕುರಿತು ಟೀಕೆ ಮಾಡಲಾಗಿತ್ತು. ಸ್ಮೃತಿ ಪದವಿ ಕುರಿತು ಚರ್ಚೆಗಳೇ ನಡೆದಿದೆ. ಇದೀಗ ಈ ಫೋಟೋದ ಮೂಲಕ ಸಾಧನೆಗೆ ಪದವಿ ಮುಖ್ಯವಲ್ಲ,  ಎಂದು ಟೀಕಿಸಿದವರಿಗೆ ತಿರುಗೇಟು ನೀಡಿದ್ದಾರೆ.  ಸ್ಮೃತಿ ಇರಾನಿ ಪೋಸ್ಟ್ ಕ್ಷಣಾರ್ಧದಲ್ಲೇ ಲಕ್ಷಕ್ಕೂ ಅಧಿಕ ಲೈಕ್ಸ್ ಹಾಗೂ 100ಕ್ಕೂ ಹೆಚ್ಚಿನ ಕಮೆಂಟ್‌ಗಳು ಬಂದಿದೆ.