Asianet Suvarna News Asianet Suvarna News

ಭಾರತಕ್ಕೆ ಹೊಸ ಭದ್ರಕೋಟೆ : ಮಳೆ, ಚಳಿಗೂ ಬಗ್ಗದ ಕಾವಲುಗಾರ ಸಿದ್ಧ

 ಭಾರತ- ಪಾಕಿಸ್ತಾನ ಗಡಿಯಲ್ಲಿನ ತಲಾ 5 ಕಿ.ಮೀ. ಉದ್ದದ 2 ಬೇಲಿಗಳನ್ನು ಗೃಹ ಸಚಿವ ರಾಜನಾಥ್ ಸಿಂಗ್ ಲೋಕಾರ್ಪಣೆಗೊಳಿಸಿದ್ದಾರೆ.  5 ಕಿ.ಮೀ. ಉದ್ದದ ಎರಡು ಸ್ಮಾರ್ಟ್ ಬೇಲಿಗಳ ಪೈಕಿ ಒಂದನ್ನು ಸ್ಲೊವೇನಿಯಾದ ಕಂಪನಿ, ಮತ್ತೊಂದನ್ನು ಭಾರತೀಯ ಕಂಪನಿ ಅಭಿವೃದ್ಧಿ ಪಡಿಸಿವೆ. 

Smart Fencing Project Along India Border
Author
Bengaluru, First Published Sep 18, 2018, 2:15 PM IST

ನವದೆಹಲಿ: ಗಡಿಯಲ್ಲಿ ಉಗ್ರರ ಒಳನುಸುಳುವಿಕೆಗೆ ಸಂಪೂರ್ಣವಾಗಿ ಬ್ರೇಕ್ ಹಾಕು ವ ಉದ್ದೇಶದೊಂದಿಗೆ ಪ್ರಾಯೋಗಿಕವಾಗಿ ಅನುಷ್ಠಾನಗೊಳಿ ಸುತ್ತಿರುವ ದೇಶದ ಮೊದಲ ‘ಸ್ಮಾರ್ಟ್ ಬೇಲಿ’ಯನ್ನು ಗೃಹ ಸಚಿವ ರಾಜನಾಥ ಸಿಂಗ್ ಸೋಮವಾರ ಉದ್ಘಾಟಿಸಿದ್ದಾರೆ. ಭಾರತ- ಪಾಕಿಸ್ತಾನ ಗಡಿಯಲ್ಲಿನ ತಲಾ 5 ಕಿ.ಮೀ. ಉದ್ದದ 2 ಬೇಲಿಗಳನ್ನು ಅವರು ಲೋಕಾರ್ಪಣೆಗೊಳಿಸಿದ್ದಾರೆ.  5 ಕಿ.ಮೀ. ಉದ್ದದ ಎರಡು ಸ್ಮಾರ್ಟ್ ಬೇಲಿಗಳ ಪೈಕಿ ಒಂದನ್ನು ಸ್ಲೊವೇನಿಯಾದ ಕಂಪನಿ, ಮತ್ತೊಂದನ್ನು ಭಾರತೀಯ ಕಂಪನಿ ಅಭಿವೃದ್ಧಿ ಪಡಿಸಿವೆ. 

ಹೇಗಿದೆ?
ಇದೊಂದು ತಂತ್ರಜ್ಞಾನ ಆಧರಿತ ಕಣ್ಗಾವಲು ವ್ಯವಸ್ಥೆ. ಸದ್ಯ ಭಾರತ- ಪಾಕಿಸ್ತಾನ ಗಡಿಯಲ್ಲಿ ನೂರಾರು ಕಿ.ಮೀ. ಉದ್ದಕ್ಕೆ ತಂತಿ ಬೇಲಿ ಇದೆ. ಹಿಮಪಾತ ಮತ್ತಿತರೆ ನೈಸರ್ಗಿಕ ಕಾರಣಗಳಿಂದಾಗಿ ಆ ಬೇಲಿ ಸವೆಯುತ್ತದೆ. ಇದಕ್ಕಾಗಿ ನಿರ್ವಹಣಾ ವೆಚ್ಚ ಭರಿಸಬೇಕಾ ಗುತ್ತದೆ. ಜತೆಗೆ ಈ ಬೇಲಿಯ ಮೂಲಕ ಗಡಿಯೊಳಕ್ಕೆ ನುಸುಳುವುದನ್ನು ಉಗ್ರರು ಕರಗತ ಮಾಡಿಕೊಂಡಿದ್ದಾರೆ. 

ಹೀಗಾಗಿ ಗಡಿ ಯಲ್ಲಿ ಮಳೆ, ಚಳಿ, ಗಾಳಿ, ಬಿರುಗಾಳಿ, ಹಿಮ ಪಾತ ಎನ್ನದೇ ಸರ್ವಋತುಗಳಲ್ಲೂ ಕಣ್ಗಾ ವಲು ಇಡಲು ಭಾರತ ಕಂಡು ಕೊಂಡಿರುವ ವ್ಯವಸ್ಥೆಯೇ ಸ್ಮಾರ್ಟ್ ಫೆನ್ಸ್ ಅರ್ಥಾತ್ ಬೇಲಿ. ಸರ್ವೇಕ್ಷಣೆ, ಸಂಪರ್ಕ ಹಾಗೂ ದತ್ತಾಂಶ ಸಂಗ್ರಹಕ್ಕೆ ಬೇಕಾದ ಉಪಕರಣಗಳು ಇಲ್ಲಿ ಬಳಕೆಯಾಗಲಿವೆ.

ರಾತ್ರಿ ಹೊತ್ತೂ ವ್ಯಕ್ತಿ ಗಳ ಚಲನವಲನ  ಗುರುತಿಸುವ ಥರ್ಮಲ್ ಇಮೇಜರ್, ಭೂಗತ ಸೆನ್ಸರ್‌ಗಳು, ಫೈಬರ್ ಆಪ್ಟಿಕಲ್ ಸೆನ್ಸರ್‌ಗಳು, ರಾಡಾರ್, ಸೋ ನಾರ್‌ನಂತಹ ಉಪಕರಣಗಳನ್ನು ಗಡಿಯಲ್ಲಿ ಕಂಬ, ಗೋಪುರ, ಗಾಳಿಯಲ್ಲಿ ತೇಲುವ  ಏರೋಸ್ಟಾಟ್‌ಗಳಿಗೆ ಅಳವಡಿಕೆ ಮಾಡಲಾಗು ತ್ತದೆ. ಜತೆಗೆ ಸಿಸಿಟೀವಿ ನೇರ ಪ್ರಸಾರ ಬಿಎಸ್ ಎಫ್ ನೆಲೆಗೆ ರವಾನೆಯಾಗಲಿದೆ. ಒಂದು ವೇಳೆ, ಬೇಲಿ ಬಳಿ ಅನುಮಾನಾಸ್ಪದ ಚಟುವ ಟಿಕೆ ಕಂಡುಬಂದರೆ ನೇರವಾಗಿ ಬಿಎಸ್‌ಎಫ್ ನೆಲೆಗೆ ಗೊತ್ತಾಗಲಿದ್ದು, ತಕ್ಷಣವೇ ಯೋಧರು ಕಾರ್ಯಾಚರಣೆ ನಡೆಸಿ ಒಳನುಸುಳುವಿಕೆ ಯಂತಹ ಯತ್ನಗಳನ್ನು ನಿಷ್ಫಲಗೊಳಿಸಲಿದ್ದಾರೆ.

Follow Us:
Download App:
  • android
  • ios