ಗೌರಿ ಲಂಕೇಶ್ ಪ್ರಕರಣ : ಮತ್ತೆ ಐವರು ವಶಕ್ಕೆ

ಬೆಂಗಳೂರು(ಮೇ.29): ಗೌರಿ ಲಂಕೆಶ್ ಹತ್ಯೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ಸ್ಫೋಟಕ ಸುದ್ದಿ ಹೊರ ಬಿದ್ದಿದೆ. ಉಪ್ಪಾರಪೇಟೆ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ. 
ಮುಂಬೈ ಮೂಲದ ನಾಲ್ವರು ಹಾಗೂ ಶಿಕಾರಿಪುರದ ಓರ್ವ ಬಂಧಿತರು. ಚಿಂತಕ ಕೆ.ಎಸ್.ಭಗವಾನ್ ಹತ್ಯೆ ಯತ್ನ ಪ್ರಕರಣದ ವೇಳೆ ಗೌರಿಲಂಕೇಶ್ ಕೊಲೆ ನಂಟಿನ ಬಗ್ಗೆ ಬಾಯ್ಬಿಟ್ಟಿದ್ದಾರೆ. ಆರೋಪಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸುತ್ತಿದ್ದು ಬಾಡಿ ವಾರಂಟ್ ಮೂಲಕ ಎಸ್'ಐಟಿ ವಶಕ್ಕೆ ಪಡೆಯಲು ಸಿದ್ಧತೆ ನಡೆಸಿದೆ.  

Comments 0
Add Comment