ಬೆಂಗಳೂರು(ಮೇ.09): ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಲ್ಲಿ ಭೋಪಾಲ್ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಕೈವಾಡ ಇದೆ ಎಂಬ ಆರೋಪವನ್ನು ಎಸ್‌ಐಟಿ ತಳ್ಳಿ ಹಾಕಿದೆ.

ಗೌರಿ ಹತ್ಯೆ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ದಳ, ಹತ್ಯೆಯಲ್ಲಿ ಸಾಧ್ವಿ ಕೈವಾಡ ಇರುವುದರ ಕುರಿತು ಯಾವುದೇ ಪುರಾವೆಯಿಲ್ಲ ಎಂದು ಸ್ಪಷ್ಟಪಡಿಸಿದೆ.

ಗೌರಿ ಲಂಕೇಶ್ ಹತ್ಯೆಯಲ್ಲಿ ಸಾಧ್ವಿ ಪ್ರಗ್ಯಾ ಕೈವಾಡವಿರುವ ಸಾಧ್ಯತೆಯಿದೆ ಎಂದು ಇಂಗ್ಲಿಷ್ ದೈನಿಕವೊಂದು ವರದಿ ಪ್ರಕಟಿಸಿತ್ತು. ಈ ಕುರಿತು ಸ್ಪಷ್ಟನೆ ನೀಡಿರುವ ಎಸ್‌ಐಟಿ, ಸಾಧ್ವಿ ಕೈವಾಡ ಇರುವ ಕುರಿತು ಯಾವ ಸಾಕ್ಷಿಯೂ ಇಲ್ಲ ಮತ್ತು ಆರೋಪ ಪಟ್ಟಿಯಲ್ಲಿ ಅವರ ಹೆಸರಿಲ್ಲ ಎಂದು ಹೇಳಿದೆ.