ನವದೆಹಲಿ[ಜ.30]  ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ತಿಕ್ಕಾಟದ ಮಾತುಗಳು ಜೋರಾಗಿರುವ ನಡುವೆ ಮಾಜಿ ಸಿಎಂ ಸಿದ್ದರಾಮಯ್ಯ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿರುವುದು ಕುತೂಹಲ ಹೆಚ್ಚು ಮಾಡಿದೆ.

ರಾಹುಲ್ ಭೇಟಿ ನಂತರ ಸಿದ್ದರಾಮಯ್ಯ ಮಾತನಾಡಿದ್ದಾರೆ. ಕಾಂಗ್ರೆಸ್-JDS ಮೈತ್ರಿಕೂಟದ ಸರ್ಕಾರದಲ್ಲಿ ಗೊಂದಲ ಇಲ್ಲ. ಕಾಂಗ್ರೆಸ್ ಶಾಸಕರು ನನ್ನನ್ನು ಸಿಎಂ ಎಂದು ಎಲ್ಲಿಯೂ ಹೇಳಿಲ್ಲ. ನಾನು CM ಆಗಿದ್ದೆ, ಮತ್ತೆ CM ಆಗಬೇಕೆಂದು ಶಾಸಕರು ಹೇಳಿದ್ದಾರೆ ಎಂದು ಹೇಳಿದರು.

ಸಿದ್ದರಾಮಯ್ಯ ವಿರುದ್ಧ ದೇವೇಗೌಡ್ರ ಮಾತಿನ ಚಾಟಿ

ದೇವೇಗೌಡರು ನನ್ನ ವಿರುದ್ಧ ಏನು ಹೇಳಿದ್ದಾರೆ ಎಂದು ಗೊತ್ತಿಲ್ಲ ಎಂದು ಹೇಳಿರುವ ಸಿದ್ದರಾಮಯ್ಯ ದೋಸ್ತಿ ಸರಕಾರದಲ್ಲಿ ಯಾವುದೆ ಭಿನ್ನ ಅಭಿಪ್ರಾಯ ಇಲ್ಲ ಎಂದು ಪುನರುಚ್ಚಾರ ಮಾಡಿದರು. ಹೈಕಮಾಂಡ್ ಸಿದ್ದರಾಮಯ್ಯ ಅವರನ್ನು ತರಾಟೆಗೆ ತೆಗೆದುಕೊಂಡಿತು ಎಂಬ ಮಾತು ಕೇಳಿಬಂತು.