ಬೆಂಗಳೂರು, [ಜ.12]: ಮಾಜಿ ಸಿಎಂ ಸಿದ್ದರಾಮಯ್ಯ ಅವರ ಅತ್ಯಾಪ್ತರಾಗಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಎಂಜಿನಿಯರ್ ಎಲ್. ರಘು ಅವರಿಗೆ ಸೇರಿದ ಆಸ್ತಿಗಳನ್ನ ಜಾರಿ ನಿರ್ದೇಶನಾಲಯ [ಇಡಿ] ಜಪ್ತಿ ಮಾಡಿದೆ. 

ಎಂಜಿನಿಯರ್ ರಘು ಅವರಿಗೆ ಸೇರಿದ ಮಂಡ್ಯ ಹಾಗೂ ಬೆಂಗಳೂರಿನಲ್ಲಿರುವ 11 ವಿವಿಧ ಕಡೆ ಇರೋ ಒಟ್ಟು 1.92 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನ ಇಡಿ ಜಪ್ತಿ ಮಾಡಿದೆ. 

ಈ ಹಿಂದೆ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ, ರಘು ಅವರ ನಿವಾಸದ ಮೇಲೆ ಲೋಕಾಯುಕ್ತ ಪೊಲೀಸರು 2012 ರಲ್ಲಿ ದಾಳಿ ನಡೆಸಿದ್ದರು. 

ಇನ್ನು ರಘು ಅವರು ಸಿದ್ದರಾಮಯ್ಯರಿಗೆ ದುಬಾರಿ ಹ್ಯೂಬ್ಲೋಟ್ ವಾಚ್ ಉಡುಗೊರೆ ನೀಡಿದ್ದರು ಎಂಬ ಆರೋಪದಲ್ಲಿ ಸಿಲುಕಿ, ರಾಷ್ಟ್ರಾದ್ಯಂತ ಸುದ್ದಿಯಾಗಿದ್ದರು.