Asianet Suvarna News Asianet Suvarna News

ಐಸಿಯುನಲ್ಲೇ ನಡೆದಾಡಿದ ಸಿದ್ಧಗಂಗಾ ಶ್ರೀ

ಮತ್ತೆ ಐಸಿಯುಗೆ ಶಿಫ್ಟ್‌ ಆದ ಸಿದ್ಧಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ.  ರೆಲಾ ಆಸ್ಪತ್ರೆ ಸಿಬ್ಬಂದಿ ಶ್ರೀಗಳನ್ನು ಐಸಿಯುನಲ್ಲೇ ವಾಕಿಂಗ್‌ ಮಾಡಿಸಿದರು. 

Siddaganga Sri health Condition Improved
Author
Bengaluru, First Published Dec 17, 2018, 9:38 AM IST

ತುಮಕೂರು : ಸ್ಪೆಷಲ್‌ ವಾರ್ಡ್‌ನಿಂದ ಕಳೆದ ಎರಡು ದಿವಸಗಳ ಹಿಂದೆ ಮತ್ತೆ ಐಸಿಯುಗೆ ಶಿಫ್ಟ್‌ ಆದ ಸಿದ್ಧಗಂಗಾ ಶ್ರೀಗಳಿಗೆ ರೆಲಾ ಆಸ್ಪತ್ರೆ ಸಿಬ್ಬಂದಿ ವಾಕಿಂಗ್‌ ಮಾಡಿಸಿದರು. 

ಪ್ರತಿ ನಾಲ್ಕು ಗಂಟೆಗೊಮ್ಮೆ 5 ನಿಮಿಷಗಳ ಕಾಲ ವಾಕಿಂಗ್‌ ಮಾಡಿಸಲಾಯಿತು. ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು ಭಾನುವಾರ ಮಾಜಿ ಸಚಿವ ರಾಮಲಿಂಗಾರೆಡ್ಡಿ ಹಾಗೂ ಮಧುಗಿರಿ ಶಾಸಕ ವೀರಭದ್ರಪ್ಪ ಅವರು ಶ್ರೀಗಳನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.

ಚೆನ್ನೈನ ರೆಲಾ ಆಸ್ಪತ್ರೆಯಲ್ಲಿ ಪಿತ್ತಕೋಶ ಮತ್ತು ಯಕೃತ್‌ ಸಮಸ್ಯೆಗೆ ಚಿಕಿತ್ಸೆ ಪಡೆಯುತ್ತಿರುವ ಸಿದ್ಧಗಂಗಾ ಮಠಾಧ್ಯಕ್ಷ ಶ್ರೀ ಶಿವಕುಮಾರ ಸ್ವಾಮೀಜಿ ಅವರನ್ನು ಸಣ್ಣಪುಟ್ಟತಪಾಸಣೆ ಸಲುವಾಗಿ ಶುಕ್ರವಾರ ಮತ್ತೆ ಐಸಿಯುಗೆ ಸ್ಥಳಾಂತರ ಮಾಡಲಾಗಿತ್ತು.

Follow Us:
Download App:
  • android
  • ios