ತುಮಕೂರು[ಜ.17] ನಡೆದಾಡುವ ದೇವರ  ಆರೋಗ್ಯದಲ್ಲಿ ಅಚ್ಚರಿಯ ಚೇತರಿಕೆ ಕಂಡುಬಂದಿದೆ. ಶ್ರೀಗಳ ದೇಹದ ಪ್ರೋಟೀನ್ ಶೇ. 3ರಷ್ಟು ಏರಿಕೆಯಾಗಿದೆ. ಶ್ರೀಗಳ ಆರೋಗ್ಯ ಸುಧಾರಿಸಿದ್ದಕ್ಕೆ ಭಕ್ತರು ಪೂಜೆ ಸಹ ನಡೆಸುತ್ತಿದ್ದಾರೆ. ಪ್ರತಿದಿನ 3 ಸಾರಿ ಫಿಜಿಯೊಥೆರಫಿ ಮಾಡಲು ವೈದ್ಯರು ತೀರ್ಮಾನ ಮಾಡಿದ್ದಾರೆ. ಗುರುವಾರ ಸಂಜೆ ಶ್ರೀಗಳು ಸ್ವಯಂ ಉಸಿರಾಟ ನಡೆಸಿದ್ದರು.

ಸಿದ್ದಗಂಗಾ ಶ್ರೀಗಳಿಗೆ ಅಮೆರಿಕಾದಿಂದ ಬಂದ ಶಿಷ್ಯ ಡಾ.ನಾಗಣ್ಣರಿಂದ ಚಿಕಿತ್ಸೆ

ಪರಮಪೂಜ್ಯ ಡಾಕ್ಟರ್ ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮಿಗಳವರದು ಅಮೋಘ ವ್ಯಕ್ತಿತ್ವ . ಅವರ ಮಹೋನ್ನತ ಸೇವೆ ಕೋಟ್ಯಾಂತರ ಜನರ ಜೀವನದ ಮೇಲೆ ಸಕಾರಾತ್ಮಕ ಪ್ರಭಾವ ಬೀರಿದೆ. ಶ್ರೀಗಳು ಬೇಗ ಗುಣ ಮುಖರಾಗಲಿ ಎಂದು ಹಾಗೂ ದೇವರು ಅವರಿಗೆ ಉತ್ತಮ ಆರೋಗ್ಯ ಕರುಣಿಸಲೆಂದು ಇಡೀ ರಾಷ್ಟ್ರ ಪ್ರಾರ್ಥಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.

ಸುಮಾರು ಅರ್ಧಗಂಟೆಗೂ ಅಧಿಕ ಕಾಲ ಶ್ರೀಗಳು ಸ್ವಯಂ ಉಸಿರಾಟ ನಡೆಸಿದ್ದರು. ಇದೀಗ ಪ್ರೋಟೀನ್ ಪ್ರಮಾಣ ಏರಿಕೆಯಾಗಿದೆ. ತ್ರಿವಿಧ ದಾಸೋಹಿ, ನಡೆದಾಡುವ ದೇವರು, ಶತಾಯುಷಿ ಸಿದ್ಧಗಂಗಾ ಶ್ರೀಗಳ ಆರೋಗ್ಯ ನಿರೀಕ್ಷಿತ ಮಟ್ಟದಲ್ಲಿ ಚೇತರಿಕೆ ಆಗುತ್ತಿಲ್ಲ ಎಂದು ವೈದ್ಯ ತಂಡ ಹೇಳಿತ್ತು. ಶ್ರೀಗಳ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ ಬಳಿಕ ವೈದ್ಯ ಡಾ.ಪರಮೇಶ್ ಮಾಧ್ಯಮಗಳಿಗೆ ಮಾಹಿತಿ ನೀಡಿ ಅವರ ಶ್ವಾಸಕೋಶದಿಂದ ನೀರು ಹೊರತೆಗೆಯಲಾಗುತ್ತಿದೆ ಎಂದು ತಿಳಿಸಿದ್ದರು.