ತುಮಕೂರು[ಜ.10]  ನಡೆದಾಡುವ ದೇವರ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದು,  ದೇಹದಲ್ಲಿ ಪ್ರೋಟೀನ್‌ ಅಂಶ ಸುಧಾರಿಸಿದೆ ಎಂದು ಡಾ.ರವೀಂದ್ರ ತಿಳಿಸಿದ್ದಾರೆ.

ನಮ್ಮ ನಿರೀಕ್ಷೆಯಂತೆ ಸುಧಾರಣೆ ಕಂಡುಬಂದಿಲ್ಲವಾದರೂ ಚಿಕಿತ್ಸೆಗೆ ಅವರು ಸ್ಪಂದಿಸುತ್ತಿರುವ ರೀತಿ ಸಕಾರಾತ್ಮಕವಾಗಿದೆ. ಶ್ರೀಗಳಿಗೆ ಸ್ವತಃ ಉಸಿರಾಡಲು ಆಗುತ್ತಿಲ್ಲ ಆದರೆ ಕೃತಕ ಉಸಿರಾಟದ ವ್ಯವಸ್ಥೆ ಮಾಡಲಾಗಿದೆ. ನಿನ್ನೆ‌ ಕೂಡ ಶ್ವಾಸಕೋಶದಿಂದ 600 ಮಿಲೀ ನೀರನ್ನ ತಗೆದಿಯಲಾಗಿದೆ. ಶ್ವಾಸಕೋಶ ಇಂಪ್ರೋಮೆಂಟ್ ಆಗಬೇಕು ಈಗಲೂ ಅಸಿಸ್ಟ್ ಮಾಡಿಯೇ ಆಕ್ಸಿಜನ್‌ ನೀಡ್ತಿದ್ದೇವೆ ಎಂದರು.

ಮಾತನಾಡಿದ ದೇವರು

ಅವರಿಗೆ ಉಸಿರಾಡಲು ಶಕ್ತಿ ಬರುವ ಹಂತಕ್ಕೆ ಬರೋವರೆಗೂ ಕಾಯಬೇಕು‌ 112ನೇ ವಯಸ್ಸಿನಲ್ಲಿ ವೈದ್ಯರು ಯಾರೂ ಇಂತಹ ಪರಿಸ್ಥಿತಿ ನೋಡಿರಲು ಸಾಧ್ಯವೇ ಇಲ್ಲ. ಈ ವಯಸ್ಸಿನಲ್ಲಿ 6 ಬಾರಿ ಎಂಡೋಸ್ಕೋಪಿ  ಮಾಡಿಸಿಕೊಂಡು ಮತ್ತೆ ಕೆಲಸದಲ್ಲಿ ನಿರತವಾಗಿರುವುದು ನಮ್ಮ ಮುಂದೆ ಇರುವ ಪವಾಡ.  ನಾವು ಟ್ರೀಟ್ ಮೆಂಟ್ ಕೊಡುತ್ತಿದ್ದೇವೆ ಎನ್ನುವುದಕ್ಕಿಂತ ಅವರ ಇಚ್ಛೆಗೆ ಅನುಗುಣವಾಗಿ ನಡೆದುಕೊಳ್ಳುತ್ತಿದ್ದೇವೆ ಎಂದು ಹೇಳಿದರು.