ಬಾಲಿವುಡ್ ಸಿನಿಮಾದಲ್ಲಿ ಅವಕಾಶ ಕೊಡಿಸುವುದಾಗಿ ಲಂಕಾ ಬಾಲಕಿ ರೇಪ್

First Published 28, Jan 2018, 7:56 AM IST
Shrilanka Girl Rape Case
Highlights

ಬಾಲಿವುಡ್ ಸಿನಿಮಾದಲ್ಲಿ ನಟನೆಗೆ ಅವಕಾಶ ಕೊಡಿಸುವುದಾಗಿ ನಂಬಿಸಿ ಶ್ರೀಲಂಕಾದ 14 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪ ಮೇರೆಗೆ ವ್ಯಕ್ತಿಯೊಬ್ಬನ್ನು ಉಪ್ಪಾರಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು : ಬಾಲಿವುಡ್ ಸಿನಿಮಾದಲ್ಲಿ ನಟನೆಗೆ ಅವಕಾಶ ಕೊಡಿಸುವುದಾಗಿ ನಂಬಿಸಿ ಶ್ರೀಲಂಕಾದ 14 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪ ಮೇರೆಗೆ ವ್ಯಕ್ತಿಯೊಬ್ಬನ್ನು ಉಪ್ಪಾರಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಹಾವೇರಿಯ ಸತೀಶ್ ಎಂಬಾತನೇ ಬಂಧಿತನಾಗಿದ್ದು, ಕೆಲ ದಿನಗಳ ಹಿಂದೆ ಮುಂಬೈಗೆ ಬಾಲಕಿಯನ್ನು ಕರೆಸಿಕೊಂಡ ಆರೋಪಿ ಈ ಕೃತ್ಯ ಎಸಗಿದ್ದ. ತದನಂತರ ಸಿನಿಮಾ ಲೋಕೇಷನ್ ತೋರಿಸುವುದಾಗಿ ಮೆಜೆಸ್ಟಿಕ್ ಕರೆತಂದು ಸಂತ್ರಸ್ತೆಯನ್ನು ಬಿಟ್ಟು ಪರಾರಿಯಾಗಿದ್ದ. ಈ ಮಾಹಿತಿ ಪಡೆದ ಪೊಲೀಸರು, ಆರೋಪಿಯನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

2015ರಲ್ಲಿ ಫೇಸ್‌ಬುಕ್‌ನಲ್ಲಿ ಸಂತ್ರಸ್ತೆಯು ಸತೀಶ್‌ಗೆ ಸ್ನೇಹಿತೆಯಾಗಿದ್ದಳು. ಆಗ ಆರೋಪಿ, ತಾನು ಬಾಲಿವುಡ್ ನಿರ್ಮಾಪಕ ಎಂದು ಸ್ಟೇಟಸ್ ಹಾಕಿದ್ದ. ಇದನ್ನು ಗಮನಿಸಿದ ಬಾಲಕಿ, ಚಲನಚಿತ್ರದಲ್ಲಿ ನಟಿಸುವ ಆಸೆ ವ್ಯಕ್ತಪಡಿಸಿದ್ದಳು. ಇದಕ್ಕೆ ಸಮ್ಮತಿಸಿದ ಆರೋಪಿ, ನನಗೆ ಹಲವು ಬಾಲಿವುಡ್ ನಿರ್ದೇಶಕರು ಸ್ನೇಹಿತರು. ಭಾರತಕ್ಕೆ ಬಂದರೆ ಅವರಿಗೆ ನಿನ್ನನ್ನು ಪರಿಚಯಿಸುತ್ತೇನೆ ಎಂದಿದ್ದ. ಈ ಮಾತು ನಂಬಿದ ಆಕೆ, 2017ರ ನವೆಂಬರ್‌ನಲ್ಲಿ ತಾಯಿ ಜತೆ ಮುಂಬೈಗೆ ಬಂದಿದ್ದಳು. ಅಲ್ಲಿ ತಾಯಿ-ಮಗಳನ್ನು ಬರಮಾಡಿಕೊಂಡ ಆರೋಪಿ, ನಂತರ ಹೋಟೆಲ್‌ನಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಿದ್ದ. ಆ ಹೋಟೆಲ್‌ನಲ್ಲಿ ಒಂದರಲ್ಲಿ ಆರೋಪಿ, ಮತ್ತೊಂದು ಕೊಠಡಿಯಲ್ಲಿ ಬಾಲಕಿ ಮತ್ತು ಆಕೆಯ ತಾಯಿ ನೆಲೆಸಿದ್ದರು.

ಆಗ ಸಿನಿಮಾದ ಬಗ್ಗೆ ಮಾತನಾಡಬೇಕಿದೆ ಎಂದು ಹೇಳಿ ಬಾಲಕಿಯನ್ನು ಏಕಾಂಗಿಯಾಗಿ ತನ್ನ ಕೊಠಡಿಗೆ ಕರೆಸಿಕೊಂಡ ಆರೋಪಿ, ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಕುಡಿಸಿದ್ದ. ಕೆಲವೇ ನಿಮಿಷದಲ್ಲಿ ಪ್ರಜ್ಞೆಹೀನಳಾದ ಮೇಲೆ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದ. ಎರಡು ಗಂಟೆ ಬಳಿಕ ಆಕೆಗೆ ಎಚ್ಚರವಾದಾಗ ಘಟನೆ ಗೊತ್ತಾಗಿದೆ. ಆ ಬಗ್ಗೆ ತಾಯಿ ಬಳಿ ಆಕೆ ಏನೂ ಹೇಳಿರಲಿಲ್ಲ. ಮರುದಿನ ಆರೋಪಿ, ಬಾಲಕಿ ಹಾಗೂ ಆಕೆಯ ತಾಯಿಯನ್ನು ಕರೆದುಕೊಂಡು ಬೆಂಗಳೂರಿನತ್ತ ಬಸ್ಸಿನಲ್ಲಿ ಹೊರಟಿದ್ದ. ಹಾವೇರಿ ಬರುತ್ತಿದ್ದಂತೆ ಸಿನಿಮಾ ಆಡಿಷನ್‌ಗೆ ಒಳ್ಳೆಯ ಬಟ್ಟೆ ಬೇಕು.2 ಲಕ್ಷ ರು ಕೊಟ್ಟರೆ ಖರೀದಿಸುತ್ತೇನೆ ಎಂದು ಹೇಳಿ ಅವರಿಂದ ಹಣ ಪಡೆದು ವಂಚಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಹೀಗೆ ಮೂರು ತಿಂಗಳು ತಾಯಿ-ಮಗಳನ್ನು ಸುತ್ತಾಡಿಸಿದ ಆತ, ಕೊನೆಗೆ ಮೆಜೆಸ್ಟಿಕ್‌ಗೆ ಕರೆತಂದು ಬಾಲಕಿ ಹಾಗೂ ತಾಯಿಯನ್ನು ನಿಲ್ದಾಣದಲ್ಲೇ ಬಿಟ್ಟು ಪರಾರಿಯಾಗಿದ್ದ. ಬಳಿಕ ತಾಯಿ ಪೊಲೀಸರಿಗೆ ದೂರು ಕೊಟ್ಟಿದ್ದರು. ಅದರನ್ವಯದ ಆರೋಪಿ ವಿರುದ್ಧ ಆರೋಪಿ ವಿರುದ್ಧ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಕಾಯ್ದೆ (ಪೋಕ್ಸೊ) ಮತ್ತು ಅತ್ಯಾಚಾರ ಆರೋಪದಡಿ ಪ್ರಕರಣ ದಾಖಲಿಸಿಕೊಂಡು ಆರೋಪಿ ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

loader