Asianet Suvarna News Asianet Suvarna News

RSS ಮಧ್ಯೆ ಬರಬೇಕು: ಶಿವಸೇನೆ ಆಗ್ರಹಕ್ಕೆ ಬೆಚ್ಚಿ ಬಿದ್ದ ಬಿಜೆಪಿ!

ಮುಗಿಯದ ಶಿವಸೇನೆ-ಬಿಜೆಪಿ ನಡುವಿನ ಸಮರ/ ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಬಿಕ್ಕಟ್ಟು ಮತ್ತಷ್ಟು ಕಗ್ಗಂಟು/ ಬಿಕ್ಕಟ್ಟು ಶಮನಕ್ಕೆ RSS ಮಧ್ಯಪ್ರವೇಶಕ್ಕೆ ಕೋರಿ ಶಿವಸೇನೆ ಪತ್ರ/ RSS ಮುಖ್ಯಸ್ಥ ಮೋಹನ್ ಭಾಗವತ್’ಗೆ ಪತ್ರ ಬರೆದ ಶಿವಸೇನೆ ನಾಯಕ/ ನಿತಿನ್ ಗಡ್ಕರಿ ಮನಸ್ಸು ಮಾಡಿದರೆ ಎರಡು ಗಂಟೆಯಲ್ಲಿ ಬಿಕ್ಕಟ್ಟು ಶಮನ ಎಂದ ಕಿಶೋರ್ ತಿವಾರಿ/ ಶಿವಸೇನೆ ಪತ್ರಕ್ಕೆ ಇದುವರೆಗೂ ಪ್ರತಿಕ್ರಿಯೆ ನೀಡದ RSS/ 

Shiv Sena Urges RSS To Intervene Resolve Crisis In Maharashtra
Author
Bengaluru, First Published Nov 5, 2019, 6:04 PM IST

ಮುಂಬೈ(ನ.05): ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಯ ಬಿಕ್ಕಟ್ಟು ಕ್ಷಣಕ್ಷಣಕ್ಕೆ ಉಲ್ಬಣಗೊಳ್ಳುತ್ತಿದೆ. ಸಮಾನ ಅಧಿಕಾರ ಹಂಚಿಕೆಗೆ ಪಟ್ಟು ಹಿಡಿದಿರುವ ಶಿವಸೇನೆ, ಬಿಕ್ಕಟ್ಟು ಶಮನಕ್ಕೆ RSS ಮಧ್ಯಪ್ರವೇಶಕ್ಕೆ ಆಗ್ರಹಿಸಿದೆ.

ಈ ಕುರಿತು RSS ಮುಖ್ಯಸ್ಥರಿಗೆ ಪತ್ರ ಬರೆದಿರುವ ಶಿವಸೇನೆ ನಾಯಕ ಕಿಶೋರ್ ತಿವಾರಿ, ಬಿಜೆಪಿ ಮೈತ್ರಿ ಧರ್ಮ ಪಾಲಿಸುತ್ತಿಲ್ಲವಾದ್ದರಿಂದ ಮಧ್ಯಪ್ರವೇಶಿಸಿ ಬಿಕ್ಕಟ್ಟು ಶಮನಕ್ಕೆ ಆಗ್ರಹಿಸಿದ್ದಾರೆ.

ಶಿವಸೇನೆಯೇ 'ಮಹಾ ಮುಖ್ಯಸ್ಥ': ಸಂಜಯ್ ರಾವುತ್ ಹೇಳಿಕೆ ಅಸ್ತವ್ಯಸ್ತ!

ಬಿಜೆಪಿ - ಶಿವಸೇನಾ ಪರವಾಗಿ ಜನಾದೇಶ ನೀಡಲಾಗಿದೆ. ಆದರೆ, ಮೈತ್ರಿ ಧರ್ಮ ಪಾಲಿಸುವಲ್ಲಿ ವಿಫಲವಾಗಿರುವ ಬಿಜೆಪಿ ಸರ್ಕಾರ ರಚಿಸಲು ವಿಳಂಬ ಧೋರಣೆ ತಾಳಿದೆ. ಆದ್ದರಿಂದ ಮಧ್ಯ ಪ್ರವೇಶಿಸಿ ಸಮಸ್ಯೆಯನ್ನು ಬಗೆಹರಿಸುವಂತೆ ಕೋರಿ ಮೋಹನ್ ಭಾಗವತ್ ಅವರಿಗೆ ತಿವಾರಿ ಮನವಿ ಪತ್ರ ಬರೆದಿದ್ದಾರೆ.

ಮುಗಿಯದ ‘ಮಹಾ ನಾಟಕ’ : ಎನ್‌ಸಿಪಿ ಮುಖ್ಯಸ್ಥ ‘ನಿಗೂಢ ಹೇಳಿಕೆ’

ಅಲ್ಲದೇ ಬಿಜೆಪಿ ನಾಯಕ ಹಾಗೂ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಹೊಗಳಿರುವ ಕಿಶೋರ್ ತಿವಾರಿ, ಗಡ್ಕರಿ ಮನಸ್ಸು ಮಾಡಿದರೆ ಎರಡು ಗಂಟೆಯಲ್ಲಿ ಬಿಕ್ಕಟ್ಟಿಗೆ ಪರಿಹಾರ ದೊರೆಯಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಶಿವಸೇನೆಗೆ ಸೋನಿಯಾ ಶಾಕ್‌ ; ಎನ್‌ಸಿಪಿ, ಶಿವಸೇನೆ ಜತೆಗೆ ಒಪ್ಪದ ಸೋನಿಯಾ ಗಾಂಧಿ

ಆದರೆ ಶಿವಸೇನೆ ಪತ್ರಕ್ಕೆ ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡದ RSS, ಮುಂದಿನ ಬೆಳವಣಿಗೆಗಳ ಕುರಿತು ಗಂಭೀರವಾಗಿ ಗಮನ ಹರಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.

ನಾವು ಬಗ್ಗಲ್ಲ: ಶಿವಸೇನೆ ‘ಮಹಾ’ ಸಿಎಂ ಪಟ್ಟ ಕಸಿಯದೇ ಬಿಡಲ್ಲ!

Follow Us:
Download App:
  • android
  • ios