ಮುಂಬೈ(ನ.19): ಮುಂಬೈ ಕರಾವಳಿಯಲ್ಲಿ ಪ್ರಪಂಚದಲ್ಲೇ ಅತಿ ಹೆಚ್ಚು ಎತ್ತರವಾದ ಶಿವಾಜಿ ವಿಗ್ರಹವನ್ನು ನಿರ್ಮಿಸಲು ಮಹಾರಾಷ್ಟ್ರ ಮುಖ್ಯಮಂತ್ರಿಗೆ ಶಿವಸೇನೆ ಆಗ್ರಹಿಸಿದೆ.

ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಚ್ರೀಯ ಅಧ್ಯಕ್ಷ  ಅಮಿತ್ ಶಾ ಅವರ ಬಗ್ಗೆ ಭಯಪಡಬೇಡಿ, ಅವರು ನಿರಾಕರಿಸಿದರೂ ವಿಶ್ವದ ಅತಿ ಎತ್ತರದ ಶಿವಾಜಿ ಪ್ರತಿಮೆ ನಿರ್ಮಿಸಿ ಎಂದು ಶಿವಸೇನೆ ಫಡ್ನವೀಸ್ ಅವರನ್ನು ಒತ್ತಾಯಿಸಿದೆ.

ಮುಂಬೈ ಕರಾವಳಿಯಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಶಿವಾಜಿ ಪ್ರತಿಮೆ ವಿಶ್ವದಲ್ಲೇ ಬೃಹತ್ ಆಗಿ ನಿರ್ಮಿಸಬೇಕು ಎಂದು ಎನ್‌ಸಿಪಿ  ಮುಖ್ಯಸ್ಥ ಜಯಂತ್ ಪಾಟಿಲ್ ಹೇಳಿದ್ದರು.

ಆದರೆ ಗುಜರಾತ್‌ನಲ್ಲಿ ಇತ್ತಿಚೀಗೆ ನಿರ್ಮಿಸಿರುವ ಸರ್ದಾರ್ ಪಟೇಲ್ ಪ್ರತಿಮೆಗಿಂತ ಶಿವಾಜಿ ಪ್ರತಿಮೆ ಎತ್ತರವಾದರೆ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಆಶಯಕ್ಕೆ ಭಂಗ ಬರಬಹುದು ಎಂದು ಸಿಎಂ ಫಡ್ನವೀಸ್ ಯೋಚಿಸುತ್ತಿದ್ದಾರೆ.

ಹೀಗಾಗಿ ಮೋದಿಗೆ ಹೆದರದೆ ಅತಿ ಎತ್ತರದ ಶಿವಾಜಿ ಪ್ರತಿಮೆ ನಿರ್ಮಾಣ ಮಾಡಲು ಸರ್ಕಾರ ಧೈರ್ಯ ತೋರಬೇಕು ಎಂದು ಶಿವಸೇನೆ ತನ್ನ ಮುಖವಾಣಿ ಸಾಮ್ನಾದಲ್ಲಿ ಆಗ್ರಹಿಸಿದೆ.