ಚಿಕ್ಕಬಳ್ಳಾಪುರಕ್ಕೆ ಶಿಫ್ಟ್ ಆಯ್ತು ಶಿರಡಿ: ವಿಡಿಯೋ!
ಚಿಕ್ಕಬಳ್ಳಾಪುರಕ್ಕೆ ಶಿಫ್ಟ್ ಆಯ್ತು ಶಿರಡಿ
ಹಾರೋಬಂಡೆ ಬಳಿ ಸಾಯಿಬಾಬಾ ದೇವಸ್ಥಾನ
ಶಿರಡಿ ಸಾಯಿಬಾಬಾ ದೇವಸ್ಥಾನದ ತದ್ರೂಪ
ಈ ದೇವಸ್ಥಾನದಲ್ಲಿ ಭಕ್ತರಿಗೆ ಇದೆ ಸಕಲ ಸೌಲಭ್ಯ
ಚಿಕ್ಕಬಳ್ಳಾಪುರ(ಜು.14): ಶಿರಡಿ ಎಂದ ತಕ್ಷಣ ಎಲ್ಲರಿಗೂ ನೆನಪಾಗುವುದು ಸಾಯಿ ಬಾಬಾ. ಆದರೆ ಎಲ್ಲರಿಗೂ ಸಾಯಿ ಬಾಬಾ ದರ್ಶನ ಮಾಡಲು ಶಿರಡಿಗೆ ಹೋಗಲು ಸಾಧ್ಯವಿಲ್ಲ.
ಆದರೆ ಇನ್ಮುಂದೆ ಸಾಯಿ ಬಾಬಾ ಭಕ್ತರು ಚಿಂತೆ ಮಾಡಬೇಕಿಲ್ಲ. ಕಾರಣ ಸಾಯಿ ಬಾಬಾ ಭಕ್ತರಿಗೆ ಇಲ್ಲೊಂದು ಸಿಹಿ ಸುದ್ದಿ ಇದೆ. ಚಿಕ್ಕಬಳ್ಳಾಪುರದ ಹಾರೋಬಂಡೆ ಬಳಿ ಸಾಯಿ ಬಾಬಾ ದೇವಸ್ಥಾನ ನಿರ್ಮಿಸಲಾಗಿದೆ.
ಎಂಟುವರೆ ಕೆಜಿ ಚಿನ್ನದ ಲೇಪನದಿಂದ ಈ ದೇವಸ್ಥಾನದ ಗರ್ಭಗುಡಿ ಅಲಂಕೃತಗೊಂಡಿದ್ದು, ಇದು ಶಿರಡಿಯಲ್ಲಿರುವ ಸಾಯಿ ಬಾಬಾ ಮಂದಿರದ ತದ್ರೂಪದಂತಿದೆ. ಈ ದೇವಸ್ಥಾನದಲ್ಲಿ ಭಕ್ತರಿಗಾಗಿ ಎಲ್ಲ ರೀತಿಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.
ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ...