Asianet Suvarna News Asianet Suvarna News

ಪ್ರಾಣಾಯಾಮ ಅಂದ್ರೆ..ತರೂರ್ ಕೊಟ್ಟ ಉತ್ತರಕ್ಕೆ ನೆಟಿಜನ್ಸ್ ಫಿದಾ!

ಶಶಿ ತರೂರ್ ಇಂಗ್ಲಿಷ್ ಪಾಂಡಿತ್ಯಕ್ಕೆ ತಲೆದೂಗದವರಿಲ್ಲ| Cardiac coherence breathing exercises ಅಂದ್ರೆನು ನಿಮಗೆ ಗೊತ್ತಾ?| ವಿದೇಶಿ ವೈದ್ಯಕೀಯ ಸಂಸ್ಥೆ ಕೊಟ್ಟ ಉತ್ತರ ಪ್ರಾಣಾಯಾಮ| ಅಭನಂದಿಸಿ ಶಶಿ ತರೂರ್ ಮಾಡಿದ ಟ್ವೀಟ್‌ಗೆ ನೆಟಿಜನ್‌ಗಳು ಫಿದಾ| ‘ಪಾಶ್ಚಾತ್ಯರಿಗೆ ಭಾರತದ ಪ್ರಾಚೀನ ಜ್ಞಾನ ಸಂಪತ್ತು ತಿಳಿಯಲು ಸಮಯ ಬೇಕು’

Shashi Tharoor Lesson US website Which Gave Pranayama a Western Name
Author
Bengaluru, First Published Jan 29, 2019, 3:33 PM IST

ತಿರುವನಂತಪುರಂ(ಜ.29): ಕಾಂಗ್ರೆಸ್ ಸಂಸದ ಶಶಿ ತರೂರ್ ಅವರನ್ನು ನೀವು ಒಪ್ಪಿ ಅಥವಾ ಬಿಡಿ. ಆದರೆ ಅವರ ಇಂಗ್ಲಿಷ್ ಪಾಂಡಿತ್ಯವನ್ನು ಮತ್ತು ವಿಶ್ವದ ಹಲವು ವೇದಿಕೆಗಳಲ್ಲಿ ಭಾರತವನ್ನು ಪ್ರತಿನಿಧಿಸುವ ಅವರ ಶೈಲಿಯನ್ನು ಮಾತ್ರ ಎಲ್ಲರೂ ಒಪ್ಪುತ್ತಾರೆ, ಪ್ರೀತಿಸುತ್ತಾರೆ.

ಶಶಿ ತರೂರ್ ಅವರ ಇಂಗ್ಲಿಷ್ ಪಾಂಡಿತ್ಯಕ್ಕೆ ಸರಿಸಾಟಿಯಾಗಬಲ್ಲ ಮತ್ತೋರ್ವ ರಾಜಕೀಯ ನಾಯಕ ಇಲ್ಲ ಎಂದರೆ ಅತಿಶೋಕ್ತಿಯೇನಲ್ಲ. ಜನಸಾಮಾನ್ಯರಿಗೆ ಗೊತ್ತಿರದ ಅದೆಷ್ಟೋ ಪದಗಳ ಅರ್ಥವನ್ನು ಶಶಿ ತರೂರ್ ನಿಮಷ ಮಾತ್ರದಲ್ಲಿ ಹೇಳಿ ಬಿಡುತ್ತಾರೆ.

ಅದರಂತೆ ಅಮೆರಿಕದ ವೈದ್ಯಕೀಯ ಸಂಸ್ಥೆಯೊಂದು ತನ್ನ ವೆಬ್‌ಸೈಟ್‌ವೊಂದರಲ್ಲಿ Cardiac coherence breathing exercises ಎಂಬುದರ ಕುರಿತು ವರದಿ ಪ್ರಕಟಿಸಿದ್ದು, ಇದು ಭಾರತದ ಪುರಾತನ ಪ್ರಾಣಾಯಾಮದ ಆಧುನಿಕ ರೂಪ ಎಂದು ಹೇಳಿದೆ.

ಇದಕ್ಕೆ ತಕ್ಷಣವೇ ಪ್ರತಿಕ್ರಿಯೆ ನೀಡಿರುವ ಶಶಿ ತರೂರ್ ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಭಾರತದ ಪ್ರಾಚೀನ ಜ್ಞಾನ ಸಂಪತ್ತಿನ ಕುರಿತು ತಿಳಿಯಲು ಇನ್ನೂ ಹಲವು ಮಿಲಿಯನ್ ವರ್ಷಗಳೇ ಬೇಕಾಗಬಹುದು. ಆದರೂ ಪ್ರಾಣಾಯಾಮದ ಇಂಗ್ಲಿಷ್ ಭಾಷಾಂತರ ನೀಡಿದ್ದಕ್ಕೆ ಧನ್ಯವಾದ ಎಂದು ಟ್ವೀಟ್ ಮಾಡಿದ್ದಾರೆ.

ಇನ್ನು ಶಶಿ ತರೂರ್ ಅವರ ಟ್ವೀಟ್ ಭಾರೀ ವೈರಲ್ ಆಗಿದ್ದು, ಮೆಚ್ಚುಗೆಯ ಸುರಿಮಳೆಯಾಗುತ್ತಿದೆ. ಅಲ್ಲದೇ ಪಾಶ್ಚಾತ್ಯರಿಗೆ ತಮ್ಮ ಸಂಕುಚಿತ ಜ್ಞಾನದ ಪರಿಚಯ ಮಾಡಿಕೊಟ್ಟ ತರೂರ್ ಅಭಿನಂದನೆಗೆ ಅರ್ಹರು ಎಂದು ಕೆಲವರು ಹೊಗಳಿದ್ದಾರೆ.

 

 

ಸೋಲೊಪ್ಪಿಕೊಂಡ ತರೂರ್: Floccinaucinihilipilification ಉಚ್ಛರಿಸಿದ ಕಂದ! 

#10YearChallenge| ಬಿಜೆಪಿಗೆ ತಿವಿದು ತರೂರ್ ಶೇರ್ ಮಾಡಿದ್ರು ಈ ಚಿತ್ರ!

Follow Us:
Download App:
  • android
  • ios