ಬೆಂಗಳೂರು[ಡಿ.02]  ಅಧಿಕಾರ ಸಿಕ್ಕಮೇಲೆ ಪಕ್ಷ ಸಂಘಟನೆಯನ್ನು ಸಚಿವರು ಸಂಪೂರ್ಣ ಮರೆತಿದ್ದಾರೆ. ಸಚಿವರ ಕ್ಷೇತ್ರಗಳಲ್ಲಿ ರಾಹುಲ್ ಗಾಂಧಿ ಕನಸಿನ ಯೋಜನೆ ವಿಫಲವಾಗುತ್ತಿರುವುದು ಕಂಡು ಬಂದಿದೆ.

ಸದಸ್ಯತ್ವ ಹೆಚ್ಚು ಮಾಡುವ ಶಕ್ತಿ ಯೋಜನೆಗೆ ರಾಜ್ಯದಿಂದ ಸಾಕಷ್ಟು ಪ್ರಮಾಣದ ನೊಂದಣೀ ಆಗದಿರುವುದೇ  ರಾಹುಲ್ ಸಿಟ್ಟಿಗೆ ಮುಖ್ಯ ಕಾರಣ.  ಸಚಿವರ ಕ್ಷೇತ್ರಗಳಲ್ಲಿ ಕೈ ಶಕ್ತಿ ಯೋಜನೆ ಶಕ್ತಿ ಕಳೆದುಕೊಂಡಿದೆ.

ರಾಜ್ಯಕ್ಕೆ ಹೋಲಿಕೆ ಮಾಡಿದರೆ ಚಿಕ್ಕ ರಾಜ್ಯವಾಗಿರುವ ಚತ್ತಿಸಗಢ್ ನಲ್ಲಿ 6 ಲಕ್ಷ ನೊಂದಣಿಯಾಗಿದೆ. ಆದ್ರೆ ರಾಜ್ಯದಲ್ಲಿ ಕೇವಲ 3 ಲಕ್ಷ ನೊಂದಣಿ ಮಾತ್ರ ಆಗಿದೆ ಹಾಗಾಗಿ ರಾಹುಲ್ ಗಾಂಧಿ ಗರಂ ಆಗಿದ್ದಾರೆ.

ದತ್ತಾತ್ರೇಯ ಗೋತ್ರ ಎಂದ ರಾಹುಲ್ ದತ್ತಪೀಠಕ್ಕೆ ಬರ್ತಾರಾ?

ಲೋಕಸಭಾ ಚುನಾವಣೆ ಹಿನ್ನೆಲೆ ಸದಸ್ಯತ್ವ ಸಂಖ್ಯೆ ಹೆಚ್ವಿಸಲು ಪರಿಚಯಿಸಿದ್ದ ಶಕ್ತಿ ಯೋಜನೆ ಇದಾಗಿದ್ದು ವಾಟ್ಸಪ್ ಮೂಲಕ ನೊಂದಣಿ ಮಾಡಿಕೊಳ್ಳುವ ಗುರಿ ಹೊಂದಲಾಗಿತ್ತು. 

ಇದೀಗ  ಸಚಿವರ ಕ್ಷೇತ್ರಗಳಲ್ಲಿ ಶಕ್ತಿ ಯೋಜನೆಯ ಸದಸ್ಯತ್ವ ವಿವರವನ್ನು ರಾಹುಲ್ ಗಾಂಧಿ ಕೇಳಿದ್ದಾರೆ. ಯಾವುದೇ ಪ್ರಗತಿ ಕಾಣದ ಹಿನ್ನೆಲೆಯಲ್ಲಿ ಸಚಿವರ ವಿರುದ್ಧ ರಾಹುಲ್ ಕಿಡಿ ಕಾರಿದ್ದು ಕಾರ್ಯದರ್ಶಿಗಳನ್ನು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತರಾಟೆಗೆ ತೆಗೆದುಕೊಂಡಿದ್ದಾರೆ.