ವರ್ತೂರು ಪ್ರಕಾಶ್ ಮೇಲೆ ಲೈಂಗಿಕ ದುರ್ಬಳಕೆ ಆರೋಪ

ಬೆಂಗಳೂರು (ಮೇ. 08): ಮಹಿಳೆಯೊಬ್ಬರು ಕೋಲಾರ ಕ್ಷೇತ್ರದ ಪಕ್ಷೇತರ ಶಾಸಕ ವರ್ತೂರು ಪ್ರಕಾಶ್ ಮೇಲೆ ಗಂಭೀರ ಆರೋಪ ಮಾಡಿದ್ದಾರೆ. 

ಸಹಾಯ ಕೇಳಲು ಹೋದರೆ ಶಾಸಕರು ನನ್ನನ್ನು ದೈಹಿಕವಾಗಿ ಬಳಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಪರಿಪರಿಯಾಗಿ ಬೇಡಿದರೂ ಅವರು ನನ್ನನ್ನು ಹಾಳು ಮಾಡಿದ್ದಾರೆ. ಸಹಾಯ ಮಾಡದೇ ದೈಹಿಕವಾಗಿ ಬಳಸಿಕೊಂಡು ನನ್ನ ಬದುಕನ್ನು ಹಾಳು ಮಾಡಿದ್ದಾರೆ. ಇದೇ ರೀತಿ ಹಲವು ಹೆಣ್ಣು ಮಕ್ಕಳನ್ನು ಹಾಳು ಮಾಡಿದ್ದಾರೆ ಅಂತಾ ಮಹಿಳೆ ಆರೋಪಿಸಿದ್ದಾಳೆ. 

ಶಾಸಕ ವರ್ತೂರ್ ಪ್ರಕಾಶ್ ಮೇಲೆ ಆರೋಪ ಮಾಡಿರುವ ಮಹಿಳೆಯ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗಿದೆ. ಅಪರಿಚಿತಳಿಂದ ಸುಮಾರು 2 ನಿಮಿಷ 42 ಸೆಕೆಂಡ್  ವಿಡಿಯೋ ರಿಲೀಸ್ ಆಗಿದೆ. ಆದ್ರೆ ಶಾಸಕ ವರ್ತೂರ್ ಪ್ರಕಾಶ್ ಮಾತ್ರ ಈ ಬಗ್ಗೆ ಹಾರಿಕೆ ಉತ್ತರ ಕೊಟ್ಟಿದ್ದಾರೆ.
 

Comments 0
Add Comment