Asianet Suvarna News Asianet Suvarna News

ತಾಯಿಯೊಂದಿಗಿನ ಸಂಬಂಧಕ್ಕೆ ಮಗಳೇ ಅಡ್ಡಿ, ಕಾಮಾಂಧ ಮಾಡಿದ್ದೇನು?

ಇದೊಂದು ಅಮಾನವೀಯ ಪ್ರಕರಣ. ತಾಯಿಯೊಂದಿಗೆ ಸಂಬಂಧ ಇರಿಸಿಕೊಳ್ಳಲು ಮಗುವೆ ಅಡ್ಡಿ ಎಂದು ಭಾವಿಸಿದ ಪ್ರಿಯತಮ ಮಗುವಿನ ಮೇಲೆ ಅತ್ಯಾಚಾರಕ್ಕೆ ಯತ್ನ ಮಾಡಿದ್ದಲ್ಲದೆ ಹಲ್ಲೆ ಮಾಡಿದ್ದಾನೆ.

Seven-year-old Girl assaulted by mom live-in partner
Author
Bengaluru, First Published Oct 3, 2018, 5:00 PM IST

ಲುಧಿಯಾನಾ[ಅ.3]  ತಾಯಿಯೊಂದಿಗೆ ಲಿವ್ ಇನ್ ಸಂಬಂಧದಲ್ಲಿ ವಾಸವಿದ್ದ ವ್ಯಕ್ತಿಯೊಬ್ಬ 7 ವರ್ಷದ ಮಗುವಿನ ಮೇಲೆ ಹಲ್ಲೆ ನಡೆಸಿದ್ದಾನೆ. ಅತ್ಯಾಚಾರಕ್ಕೆ ಯತ್ನ ಮಾಡಿದ್ದು ಬಾಲಕಿ ಅಡ್ಡಿ ಪಡಿಸಿದಾಗ ಅಮಾನುಷ ರೀತಿಯಲ್ಲಿ ಹಲ್ಲೆ ಮಾಡಿದ್ದಾನೆ.

ಗಾಯಗೊಂಡಿರುವ ಬಾಲಕಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದಾಳೆ. ಆರೋಪಿಯನ್ನು ಮತ್ತು ಬಾಲಕಿ ತಾಯಿಯನ್ನು ಪೊಲೀಸರು ಬಂಧಿಸಿದ್ದಾರೆ. ಒಂದೇ ಕೋಣೆಯಲ್ಲಿ ವಾಸವಿದ್ದವರ ಜತೆ ಬಾಲಕಿಯೂ ವಾಸವಿದ್ದಳು. ನಮ್ಮ ಸಂಬಂಧಕ್ಕೆ ಬಾಲಕಿಯೇ ಅಡ್ಡಿ ಎಂದು ಆರೋಪಿ ಭಾವಿಸಿದ್ದಾನೆ.

ಬಾಲಕಿಯ36 ವರ್ಷದ ಮಾವನ ಹೇಳಿಕೆ ಆಧಾರದಲ್ಲಿ ದೂರು ದಾಖಲಿಸಿಕೊಳ್ಳಲಾಗಿದೆ. 13 ವರ್ಷದ ಹಿಂದೆ ನನ್ನ ತಂಗಿಯನ್ನು ಮದುವೆ ಮಾಡಲಾಗಿದ್ದು ಆಕೆಗೆ ಹೆಣ್ಣು ಮಗು ಜನಿಸಿತ್ತು. ನಂತರ ಆಕೆ ಗಂಡನನ್ನು ತೊರೆದು ಪ್ರಿಯತಮನ ಜತೆ ವಾಸಮಾಡುತ್ತಿದ್ದಳು. ಇದೀಗ ಆಕೆಯೊಂದಿಗೆ ಲಿವ್ ಇನ್ ಸಂಬಂಧದಲ್ಲಿದ್ದ ವ್ಯಕ್ತಿ ಬಾಲಕಿಯ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ.

Follow Us:
Download App:
  • android
  • ios