Asianet Suvarna News Asianet Suvarna News

ಕೂಲ್ ಡ್ರಿಂಕ್ಸ್'ನಲ್ಲಿ ನಿದ್ದೆ ಮಾತ್ರೆ ಬೆರೆಸಿ ಕುಡಿಸಿದ: ಮಾರುತಿ ಓಮ್ನಿಯಲ್ಲೇ ಯುವತಿ ಮೇಲೆ ಅತ್ಯಾಚಾರ

ಅವರಿಬ್ಬರೂ ಕಾಲೇಜು ಓದುತ್ತಿದ್ದರು. ಡ್ರಾಪ್ ಕೊಡುವ ನೆಪದಲ್ಲಿ ಯುವತಿಯನ್ನು ಕಾರಿಗೆ ಹತ್ತಿಸಿಕೊಂಡು ನಿದ್ರೆ ಮಾತ್ರೆ ಕೊಟ್ಟು ರೇಪ್ ಮಾಡಿದ್ದಾನೆ. ಅದೂ ಮಾರುತಿ ಒಮ್ನಿಯಲ್ಲೇ ನಿರಂತರ ಅತ್ಯಾಚಾರ. ರೇಪ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಡುವುದಾಗಿ ಬೆದರಿಕೆಯೊಡ್ಡಿ ನಿರಂತರ ಅತ್ಯಾಚಾರ ಎಸಗಿದ್ದ ಆ ಕಾಮುಕ. ಕಡೆಗೆ ಆ ಕೇಸ್​ ಎಲ್ಲಿಗೆ ಬಂತು? ನಡೆದಿರುವುದಾಧರೂ ಎಲ್ಲಿ ? ಈ ಕುರಿತ ಎಕ್ಸ್​ಕ್ಲೂಸಿವ್ ಸ್ಟೋರಿ ಇಲ್ಲಿದೆ.

Serial Rapist Of shimogga Arrested by The police

ಶಿವಮೊಗ್ಗ(ಜ.07): ಅವರಿಬ್ಬರೂ ಕಾಲೇಜು ಓದುತ್ತಿದ್ದರು. ಡ್ರಾಪ್ ಕೊಡುವ ನೆಪದಲ್ಲಿ ಯುವತಿಯನ್ನು ಕಾರಿಗೆ ಹತ್ತಿಸಿಕೊಂಡು ನಿದ್ರೆ ಮಾತ್ರೆ ಕೊಟ್ಟು ರೇಪ್ ಮಾಡಿದ್ದಾನೆ. ಅದೂ ಮಾರುತಿ ಒಮ್ನಿಯಲ್ಲೇ ನಿರಂತರ ಅತ್ಯಾಚಾರ. ರೇಪ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಡುವುದಾಗಿ ಬೆದರಿಕೆಯೊಡ್ಡಿ ನಿರಂತರ ಅತ್ಯಾಚಾರ ಎಸಗಿದ್ದ ಆ ಕಾಮುಕ. ಕಡೆಗೆ ಆ ಕೇಸ್​ ಎಲ್ಲಿಗೆ ಬಂತು? ನಡೆದಿರುವುದಾಧರೂ ಎಲ್ಲಿ ? ಈ ಕುರಿತ ಎಕ್ಸ್​ಕ್ಲೂಸಿವ್ ಸ್ಟೋರಿ ಇಲ್ಲಿದೆ.

ಇಂತಹ ಹೀನಾತಿ ಹೀನ ಕೃತ್ಯ ನಡೆದಿರುವುದು ಶಿವಮೊಗ್ಗದಲ್ಲಿ . 20 ವರ್ಷದ ಡಿಪ್ಲೊಮಾ ವಿದ್ಯಾರ್ಥಿನಿಯನ್ನು ವಂಚಿಸಿ ಮುಕ್ಕಿ ತಿಂದ ಕಾಮುಕ ಈತನೇ ಶ್ರೀನಿವಾಸ್​. ಪ್ಯಾರಾ ಮೆಡಿಕಲ್ ಓದುತ್ತಿದ್ದ ಈ ಕಾಮಾಂಧ, ಈಕೆಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾನೆ. ಅಲ್ಲದೇ, ತಂಗಿ ಮತ್ತು ಸ್ನೇಹಿತೆಯನ್ನು ಕಳಿಸು ಅಂತಲೂ ಬೆನ್ನು ಬಿದ್ದಿದ್ದಾನೆ. ಇದರಿಂದ ಸಿಟ್ಟಿಗೆದ್ದ ಈಕೆ, ತಾಯಿಗೆ ಅತ್ಯಾಚಾರ ಮತ್ತು ಬ್ಲಾಕ್ ಮೇಲ್ ವಿಚಾರವನ್ನು ತಿಳಿಸಿದ್ದಾಳೆ. ಅಲ್ಲಿಗೆ ಶಿವಮೊಗ್ಗದ ಸೀರಿಯಲ್ ರೇಪಿಸ್ಟ್ ಪುರಾಣ ಬಯಲಾಗಿತ್ತು.

ಪೊಲೀಸರ ಮುಂದೆ ಸುಳ್ಳು ಹೇಳಿದ್ದ ದುರುಳ

ಒಂದು ಸಲ ತನ್ನ ಬೇಡಿಕೆ ತಿರಸ್ಕರಿಸಿದ್ದಕ್ಕೆ ನಡು ರಸ್ತೆಯಲ್ಲೇ ಈಕೆಯನ್ನ ಶ್ರೀನಿವಾಸ ಹೊಡೆದಿದ್ದನಂತೆ. ಈ ವಿಚಾರ ತುಂಗಾನಗರ ಪೋಲಿಸ್ ಸ್ಟೇಷನ್ ಮೆಟ್ಟಿಲೇರಿತ್ತು. ಅಲ್ಲಿ ಬ್ಲ್ಯಾಕ್​ಮೇಲ್ ವಿಚಾರ ಯುವತಿ ತಿಳಿಸಿದಾಗ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ್ದ.

ನಂಬಿಸಿ ಕರೆಯಿಸಿ ಹಿಡಿಯುವ ತಂತ್ರ ಫೇಲ್​

ಅಂದ ಹಾಗೆ ಸ್ನೇಹಿತೆಯ ಮೂಲಕ ಶ್ರೀನಿವಾಸನಿಗೆ ಈಕೆಯ ಪರಿಚಯ ಆಗಿರುವುದು. ಈ ದುಷ್ಟ ಅದೆಂಥಾ ಚಾಲಾಕಿ ಗೊತ್ತಾ. ತುಂಗಾನಗರ ಪೊಲೀಸ್ರ ಕಿವಿಗೆ ಮಾತ್ರ ಹೂವಿಟ್ಟಿಲ್ಲ. ವಿಷಜಂತು ಸೆರೆ ಹಿಡಿದು ಪೋಲಿಸರಿಗೊಪ್ಪಿಸುವ ಯುವತಿಯರ ತಂತ್ರವನ್ನೂ ವಿಫಲಗೊಳಿಸಿದ್ದ. ಇದೀಗ ನೊಂದ ಯುವತಿ ಜಿಲ್ಲಾ ಎಸ್ಪಿಗೆ ಕಂಪ್ಲೇಂಟ್ ಕೊಡಲು ನಿರ್ಧರಿಸಿದ್ದಾಳೆ. ತನಗಾದ ಅನ್ಯಾಯ ಮತ್ಯಾರಿಗೂ ಆಗಬಾರದು ಅಂತ ದೃಢ ನಿರ್ಧಾರ ತಳೆದಿದ್ದಾಳೆ. ಹೆಣ್ಣುಮಕ್ಕಳ ಅಸಹಾಯಕತೆಯನ್ನು ಬಂಡವಾಳ ಮಾಡಿಕೊಂಡಿದ್ದ ಕಿರಾತಕ ಮಾತ್ರ ಎಲ್ಲರಿಗೂ ಚಳ್ಳೆಹಣ್ಣು ತಿನ್ನಿಸಿ ನಾಪತ್ತೆಯಾಗಿದ್ದಾನೆ.

Follow Us:
Download App:
  • android
  • ios