Asianet Suvarna News Asianet Suvarna News

ರಂಜಾನ್ ತಿಂಗಳಲ್ಲಿ ಕಣಿವೆ ಪ್ರಕ್ಷುಬ್ದಗೊಳಿಸುವ ಪ್ಲ್ಯಾನ್..?

ಇಡೀ ದೇಶದ ಮುಸ್ಲಿಂ ಭಾಂಧವರು ಪವಿತ್ರ ರಂಜಾನ್ ಆಚರಣೆಗೆ ಸಜ್ಜಾಗುತ್ತಿದ್ದಾರೆ. ಶಾಂತಿ ಮತ್ತು ಸಹಬಾಳ್ವೆಯ ಪ್ರತೀಕವಾದ ರಂಜಾನ್ ಹಬ್ಬಕ್ಕೆ ಹಬ್ಬಕ್ಕೆ ಕ್ಷಣಗಣನೆ ಶುರುವಾಗಿದೆ. ಆದರೆ ಕಣಿವೆ ರಾಜ್ಯದಲ್ಲಿ ಮಾತ್ರ ಪ್ರತಿ ಬಾರಿಯಂತೆ ಈ ಬಾರಿಯ ರಂಜಾನ್ ಅನ್ನು ಕೂಡ ಭಾರತ ವಿರೋಧಿ ಚಟುವಟಿಕೆಗೆ ಮೀಸಲಿಡಲಾಗಿದೆ.

ಶ್ರೀನಗರ(ಜೂ.5): ಇಡೀ ದೇಶದ ಮುಸ್ಲಿಂ ಭಾಂಧವರು ಪವಿತ್ರ ರಂಜಾನ್ ಆಚರಣೆಗೆ ಸಜ್ಜಾಗುತ್ತಿದ್ದಾರೆ. ಶಾಂತಿ ಮತ್ತು ಸಹಬಾಳ್ವೆಯ ಪ್ರತೀಕವಾದ ರಂಜಾನ್ ಹಬ್ಬಕ್ಕೆ ಹಬ್ಬಕ್ಕೆ ಕ್ಷಣಗಣನೆ ಶುರುವಾಗಿದೆ. ಆದರೆ ಕಣಿವೆ ರಾಜ್ಯದಲ್ಲಿ ಮಾತ್ರ ಪ್ರತಿ ಬಾರಿಯಂತೆ ಈ ಬಾರಿಯ ರಂಜಾನ್ ಅನ್ನು ಕೂಡ ಭಾರತ ವಿರೋಧಿ ಚಟುವಟಿಕೆಗೆ ಮೀಸಲಿಡಲಾಗಿದೆ.

ಹೌದು, ಕಣಿವೆಯಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದೆ. ಪ್ರತ್ಯೇಕತಾವಾದಿಗಳು ಮತ್ತೆ ಕಾಶ್ಮೀರಿ ಯುವಕರಲ್ಲಿ ಭಾರತ ವಿರೋಧಿ ಭಾವನೆ ಬಿತ್ತಲು ಪವಿತ್ರ ರಂಜಾನ್ ತಿಂಗಳನ್ನೇ ಬಳಸಿಕೊಳ್ಳುತ್ತಿದ್ದಾರೆ. ಗುಪ್ತವಾಗಿ ಸಭೆ ಸೇರಿ ಸೇನೆ ವಿರುದ್ದ ಬಂಡೇಳುವಂತೆ ಮತ್ತು ಆ ಮೂಲಕ ಭಾರತ ಸರ್ಕಾರಕ್ಕೆ ಸೆಡ್ಡು ಹೊಡೆಯುವ ಯೋಜನೆ ರೂಪಿಸಿದ್ದಾರೆ.

ರಕ್ಷಣಾ ಪಡೆಗಳ ಮೇಲೆ ಕಲ್ಲು ತೂರಾಟ ಎಂಬುದು ಕಣಿವೆಯಲ್ಲಿ ಸಾಮಾನ್ಯವಾಗಿ ಬಿಟ್ಟಿದೆ. ಏಕಾಏಕಿ ಸೇನಾ ವಾಹನಗಳ ಮೇಲೆ ದಾಳಿ ಮಾಡುವ ಯುವಕರ ಗುಂಪು, ಕಲ್ಲು ತೂರಾಟದಲ್ಲಿ ತೊಡಗುತ್ತಾರೆ. ಇವರನ್ನು ಚದುರಿಸುವುದೇ ಸೇನಾ ಪಡೆಗಳಿಗೆ  ಹರಸಾಹಸದ ಕೆಲಸ. ಆದರೆ ಆತ್ಮ ರಕ್ಷಣೆಗೆ ಸೈನಿಕರು ಏನಾದರೂ ಕ್ರಮಕ್ಕೆ ಮುಂದಾದರೆ, ರಾಜಕಾರಣಿಗಳಿಂದ ಹಿಡಿದು ಎಲ್ಲರೂ ಮುಗ್ದರ ಮೇಲೆ ದೌರ್ಜನ್ಯ ಎಂದು ಬೊಬ್ಬೆ ಇಡುತ್ತವೆ.

ಇತ್ತಿಚೀಗೆ ಕಲ್ಲು ತೂರಾಟ ನಡೆಸುತ್ತಿದ್ದ ಯುವಕರನ್ನು ಚದುರಿಸುವ ಪ್ರಯತ್ನದಲ್ಲಿದ್ದ ಸೇನಾ ವಾಹನ ಅಚಾನಕ್ಕಾಗಿ ಯುವಕನೋರ್ವನ  ಮೇಲೆ ಹರಿದು ಆತ ಸಾವನ್ನಪ್ಪಿದ್ದ. ಇದನ್ನೇ ನೆಪ ಮಾಡಿಕೊಂಡ ಪ್ರತ್ಯೇಕತಾವಾದಿ ಶಕ್ತಿಗಳು ಕಣಿವೆಯನ್ನು ಮತ್ತಷ್ಟು ಪ್ರಕ್ಷುಬ್ದಗೊಳಿಸಲು ಹುನ್ನಾರ ನಡೆಸಿವೆ. ಇದಕ್ಕೆ ಪಾಕಿಸ್ತಾನದ ಬೆಂಬಲ ಕೂಡ ಇದೆ ಎಂಬುದು ಸುಳ್ಳಲ್ಲ.

ಒಟ್ಟಿನಲ್ಲಿ ಕಣಿವೆ ಪ್ರಕ್ಷುಬ್ದಗೊಳಿಸುವ ಈ ಹುನ್ನಾರವನ್ನು ನಾವೆಲ್ಲ ಖಂಡಿಸಬೇಕಿದೆ. ಕಾಶ್ಮೀರಿ ಯುವಕರಲ್ಲಿ ಭಾರತ ವಿರೋಧಿ ಭಾವನೆ ಬೆಲೇಯದಂತೆ ಕ್ರಮ ಕೈಗೊಳ್ಳಬೇಕಿದೆ. ಕಣಿವೆ ಸುರಕ್ಷತೆಗಾಗಿ ನಮ್ಮ ಸೇನಾ  ಪಡೆಗಳ ತ್ಯಾಗವನ್ನು ಮರೆಯದೇ ಅವರ ಬೆಂಬಲಕ್ಕೆ ಅಖಂಡವಾಗಿ ನಿಲ್ಲಬೇಕಿದೆ.

Video Top Stories