ನವದೆಹಲಿ(ನ.07) ಹಸಿರು ಪಟಾಕಿ ಬಳಸಿ ಅಂದರೆ ಕಡಿಮೆ ಹೊಗೆ ಉಗುಳುವ ಕಡಿಮೆ ಶಬ್ದ ಮಾಡುವ ಪಟಾಕಿ ಬಳಸಿ ಎಂದು ಸುಪ್ರೀಂ ಕೋರ್ಟ್ ಪರಿಸರದ ವಿಚಾರ ತಲೆಯಲ್ಲಿ ಇಟ್ಟುಕೊಂಡು ಹೇಳಿದೆ. ಆದರೆ ಹಸಿರು ಪಟಾಖಿ ಅಂದರೆ ಯಾವುದು ಎನ್ನುವುದಕ್ಕೆ ಸೂಕ್ತ ಮಾನದಂಡವೇ ಇಲ್ಲ!

ಎಲೆಕ್ಟ್ರಾನಿಕ್ ಪಟಾಕಿಗಳೂ ಬಳಕೆಗೆ ಲಭ್ಯವಿದೆ. ಭಾರತ ಮಾತ್ರವಲ್ಲದೆ ನೆದರ್ಲೆಂಡ್, ಸಿಂಗಾಪುರ, ಜರ್ಮನಿ, ಇಂಗ್ಲೆಂಡ್, ಆಸ್ಟ್ರೇಲಿಯಾ ಹಾಗು ಚೀನಾದಲ್ಲಿ ಪಟಾಕಿ ಬಳಕೆಗೆ ಸಂಬಂಧಿಸಿ ಕಠಿಣ ಕಾನೂನು ಜಾರಿಯಲ್ಲಿದೆ ಎಂಬ  ವಿಚಾರವನ್ನು ಸಹ ಸುಪ್ರೀಂ  ಹೇಳಿತ್ತು.

 

ಸುಪ್ರೀಂ ತೀರ್ಪನ್ನು ಅಣಕವಾಡಿರುವ ಕೆಲವರು ಹಸಿರು ಪಟಾಕಿ ಹೆಸರಲ್ಲಿ ಹಸಿರು ತರಕಾರಿಗಳ ನಡುವೆ ಪಟಾಕಿ ಇಟ್ಟು ಮಾರಿದ್ದಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗುತ್ತಿದೆ.