ಹೈದರಾಬಾದ್ (ಜ. 14): ಅಧಿಕಾರಕ್ಕೆ ಬಂದಾಗಿನಿಂದಲೂ ಜನರಿಗೆ ಉಚಿತ ಆಫರ್ ನೀಡುವ ಮೂಲಕವೇ ಸುದ್ದಿಯಲ್ಲಿರುವ ತೆಲಂಗಾಣ ಸಿಎಂ ಕೆ.ಚಂದ್ರಶೇಖರ ರಾವ್, ಇದೀಗ ರಾಜ್ಯದ ಜನರಿಗೆ ಸಂಕ್ರಾಂತಿ ಗಿಫ್ಟ್ ಘೋಷಿಸಿದ್ದಾರೆ.

ಸಂಕ್ರಾಂತಿ ಹಿನ್ನೆಲೆ ರಾಜ್ಯದ ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳ ಟೋಲ್ ಶುಲ್ಕವನ್ನು ಅವರು ಮನ್ನಾ ಮಾಡಿದ್ದಾರೆ. 3 ದಿನ ಆಚರಿಸಲಾಗುವ ಸಂಕ್ರಾಂತಿ ಪ್ರಯುಕ್ತ ಹೈದರಾಬಾದ್‌ನಲ್ಲಿ ನೆಲೆಸಿರುವ ವಿವಿಧ ಭಾಗಗಳ ಜನರು ಹಬ್ಬಕ್ಕಾಗಿ ಇದೀಗ ತಮ್ಮ ಹುಟ್ಟೂರಿಗೆ ತೆರಳುತ್ತಿದ್ದಾರೆ. ಅವರಿಗೆ ಅನುಕೂಲವಾಗಲೆಂದು ವಾಹನಗಳ ಮೇಲೆ ಯಾವುದೇ ಟೋಲ್ ವಿಧಿಸಿದಂತೆ ಟೋಲ್‌ಗಳಿಗೆ ಸರ್ಕಾರ ಸೂಚನೆ ನೀಡಿದೆ.