‘ಅಂಬಿ ನಿಂಗ್‌ ವಯಸ್ಸಾಯ್ತೋ’ ಸಿನಿಮಾ ರಿಲೀಸ್ ಆದ ಸಂದರ್ಭದಲ್ಲಿ ಮಾತನಾಡಿದ್ದ ರೆಬೆಲ್ ಸ್ಟಾರ್ ಅಂಬರೀಶ್ ಚಿತ್ರ ಆಲ್‌ಮೋಸ್ಟ್‌ ನನ್ನ ಕೊನೆಯ ಚಿತ್ರ ಆಗಬಹುದು ಎಂದು ನಟ ಅಂಬರೀಶ್‌ ಹೇಳಿದ್ದರು..

‘ಇದು ಆಲ್‌ಮೋಸ್ಟ್‌ ನನ್ನ ಕೊನೆಯ ಚಿತ್ರ. ಈ ಚಿತ್ರಕ್ಕಿಂತ ಒಳ್ಳೆಯ ಪಾತ್ರ ಬಂದರೆ ಮಾತ್ರ ನಟನೆ ಮಾಡುತ್ತೇನೆ. ಪೋಷಕ ಪಾತ್ರಗಳಲ್ಲಿ ಇನ್ನು ಮುಂದೆ ನಟಿಸುವುದಿಲ್ಲ. ನಾನು ನಿರ್ಮಾಪಕರ ನಟ. ನಿರ್ಮಾಪಕರಿಗೆ ಒಳ್ಳೆಯದಾಗಲಿ ಎಂದು ಸಿನಿಮಾ ಮಾಡುತ್ತೇನೆ. ನನಗೆ 66 ವರ್ಷವಾಗಿದೆ. ವಯಸ್ಸಿಗೆ ತಕ್ಕ ಹಾಗೆ ಪಾತ್ರ ಮಾಡುತ್ತೇನೆ’ ಎಂದಿದ್ದರು.

ಈ ಮೂಲಕ ಅಂಬಿ ತನ್ನ ಸಾವಿಗೂ ಮೊದಲು ‘ಅಂಬಿ ನಿಂಗ್‌ ವಯಸ್ಸಾಯ್ತೋ’ ಕೊನೆಯ ಸಿನಿಮಾ ಎಂಬ ಹಿಂಟ್ ನೀಡಿದ್ದರು.