ಶ್ರೀಶಾಂತ್ ಕಮ್‌ಬ್ಯಾಕ್ ಖಚಿತ, Netlfixಗೆ ಬಹಿಷ್ಕಾರ ಸಂಕಷ್ಟ; ನ.22ರ ಟಾಪ್ 10 ಸುದ್ದಿ!
ಕೊರೋನಾ ವೈರಸ್ ಹೆಚ್ಚಾಗುತ್ತಿರುವ ಕಾರಣ ಫೈಝರ್ ಕಂಪನಿ ತನ್ನ ಲಸಿಕೆಯ ತುರ್ತು ಬಳಕೆಗೆ ಅನುಮತಿ ಕೋರಿ ಅರ್ಜಿ ಸಲ್ಲಿಸಿದೆ. 26/11 ದಾಳಿ ಯತ್ನಕ್ಕೆ ಮೌಲಾನಾ ಅಜರ್ ಸೋದರನೇ ರೂವಾರಿ ಅನ್ನೋ ಹಲವು ಮಾಹಿತಿಗಳು ಬಹಿರಂಗವಾಗಿದೆ. ಫೆವಿಕಾಲ್ ಜಾಹೀರಾತಿನಲ್ಲಿ ಯಕ್ಷಗಾನಕ್ಕೆ ಅಪಚಾರ ಮಾಡಲಾಗಿದೆ. ಮುಸ್ಲಿಂ ಧರ್ಮಗುರುವನ್ನು ವರಿಸಿದ ಬಿಗ್ ಬಾಸ್ ಬ್ಯೂಟಿ, ಕ್ರಿಕೆಟ್‌ಗೆ ಮರಳುತ್ತಿದ್ದಾರೆ ಶ್ರೀಶಾಂತ್ ಸೇರಿದಂತೆ ನವೆಂಬರ್ 22ರ ಟಾಪ್ 10 ಸುದ್ದಿ ವಿವರ ಇಲ್ಲಿವೆ

ಶ್ವಾನದ ಅಸಲಿ ಮಾಲೀಕರು ಯಾರು? ಆಧುನಿಕ ಬೀರ್‌ಬಲ್ ಕತೆ...
ಅಕ್ಬರ್-ಬೀರಬಲ್ ಕತೆಯಲ್ಲಿ ಅಸಲಿ ಮಾಲೀಕರ ಪತ್ತೆಮಾಡಲು ಬೀರ್ ಬಲ್ ಮಾಡುತ್ತಿದ್ದ ಜಾಣ್ಮೆಯ ಕತೆಗಳನ್ನು ಕೇಳಿದ್ದೇವೆ. ಆದರೆ ಆಧುನಿಕ ಜಗತ್ತಿನಲ್ಲಿ ಡಿಎನ್‌ಎ ಪರೀಕ್ಷೆ ಎಂಬುದು ಒಂದಿದೆ. ಶ್ವಾನದ ಮಾಲೀಕತ್ವ ವಿವಾದಕ್ಕೆ ಪೊಲೀಸರ ಅಂಗಣದಲ್ಲಿ ಇದ್ದು ಅಸಲಿ ಮಾಲೀಕರ ಪತ್ತೆಮಾಡಲು ಪೊಲೀಸರು ಡಿಎನ್‌ಎ ಪರೀಕ್ಷೆಗೆ ಮುಂದಾಗಿದ್ದಾರೆ.
ದುಬೈ ದೊರೆಯ ಪತ್ನಿಗೆ ಬಾಡಿಗಾರ್ಡ್ ಜೊತೆ ಸಂಬಂಧ: ವಿಚಾರ ಮುಚ್ಚಿಡಲು 12 ಕೋಟಿ!...
ದುಬೈ ದೊರೆ ಶೇಖ್ ಮಹಮ್ಮದ್ ಬಿನ್ ರಶೀದ್‌ರವರ ರಾಜಕುಮಾರಿ ಪತ್ನಿಗೆ ತನ್ನ ಬಾಡಿಗಾರ್ಡ್ ಜೊತೆ ಸಂಬಂಧವಿತ್ತು. ರಾಜಕುಮಾರಿ ಹಯಾ ತನ್ನ ಬಾಡಿಗಾರ್ಡ್‌ಗೆ ಈ ವಿಚಾರ ಮುಚ್ಚಿಡಲು ಸುಮಾರು ಹನ್ನೆರಡು ಕೋಟಿ ರೂ. ಕೂಡಾ ನೀಡಿದ್ದರು.
ಕೊರೋನಾ ಅಟ್ಟಹಾಸ: ತುರ್ತು ಬಳಕೆಗೆ ಅನುಮತಿ ಕೋರಿದ ವಿಶ್ವದ ಮೊದಲ ಲಸಿಕೆ!...
ಜಗತ್ತೇ ತುದಿಗಾಲಿನಲ್ಲಿ ನಿಂತು ಕಾಯುತ್ತಿರುವ ಕೊರೋನಾ ಲಸಿಕೆ ಕೊನೆಗೂ ಜನರಿಗೆ ಸಿಗುವ ಕ್ಷಣ ಸನ್ನಿಹಿತವಾಗುತ್ತಿದ್ದು, ಅಮೆರಿಕದ ಫೈಝರ್ ಕಂಪನಿ ತನ್ನ ಲಸಿಕೆಯ ತುರ್ತು ಬಳಕೆಗೆ ಅನುಮತಿ ಕೋರಿ ಅಮೆರಿಕದ ಸರ್ಕಾರಕ್ಕೆ ಔಪಚಾರಿಕ ಮನವಿ ಸಲ್ಲಿಸಿದೆ. ಇಂಥ ಒಪ್ಪಿಗೆ ಕೋರಿ ಅರ್ಜಿ ಸಲ್ಲಿಸಿದ ವಿಶ್ವದ ಮೊದಲ ಕಂಪನಿ ಇದಾಗಿದೆ. ಹೀಗಾಗಿ ಸರ್ಕಾರ ಒಪ್ಪಿದರೆ ಮುಂದಿನ ತಿಂಗಳಿನಿಂದಲೇ ಅಮೆರಿಕದಲ್ಲಿ ಸೀಮಿತ ಪ್ರಮಾಣದಲ್ಲಿ ಈ ಲಸಿಕೆ ಲಭ್ಯವಾಗಲಿದೆ.
26/11 ದಾಳಿ ಯತ್ನಕ್ಕೆ ಮೌಲಾನಾ ಅಜರ್ ಸೋದರನೇ ರೂವಾರಿ?...
26/11 ಎಂದೇ ಜನಮಾನಸದಲ್ಲಿ ಬೇರೂರಿರುವ ಮುಂಬೈ ಮೇಲಿನ ದಾಳಿ ಪ್ರಕರಣದ 12ನೇ ವರ್ಷಾಚರಣೆ ಸಂದರ್ಭ ಬೃಹತ್ ಪ್ರಮಾಣದ ಭಯೋತ್ಪಾದಕ ಕೃತ್ಯ ನಡೆಸಲು ಪಾಕಿಸ್ತಾನ ಮೂಲದ ಭಯೋತ್ಪಾದಕರು ರೂಪಿಸಿದ್ದ ಸಂಚಿಗೆ ಜೈಷ್ ಎ ಮೊಹಮ್ಮದ್ ಉಗ್ರಗಾಮಿ ಸಂಘಟನೆ ಸಂಸ್ಥಾಪಕ ಮೌಲಾನಾ ಮಸೂದ್ ಅಜರ್ ಕಿರಿಯ ಸೋದರನೇ ರೂವಾರಿಯಾಗಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ.
T20 ಟೂರ್ನಿ ಮೂಲಕ ಶ್ರೀಶಾಂತ್ ಕ್ರಿಕೆಟ್‌ಗೆ ಕಮ್‌ಬ್ಯಾಕ್; ಹೊಸ ಅಧ್ಯಾಯ ಆರಂಭ!...
7 ವರ್ಷ ನಿಷೇಧ ಶಿಕ್ಷೆ ಅನುಭವಿಸಿ ಇದೀಗ ಮುಕ್ತಗೊಂಡಿರುವ ಟೀಂ ಇಂಡಿಯಾ ವೇಗಿ ಎಸ್ ಶ್ರೀಶಾಂತ್ ಮತ್ತೆ ಕ್ರಿಕೆಟ್ ಆಡುವುದೇ ಅನುಮಾನವಾಗಿತ್ತು. ಆದರೆ ಕೇರಳ ಪೇಸರ್ ಮತ್ತೆ ಕ್ರಿಕೆಟ್ ಆಡಲಿದ್ದಾರೆ ಅನ್ನೋದು ಖಚಿತವಾಗಿದೆ. ಟಿ20 ಟೂರ್ನಿ ಮೂಲಕ ಶ್ರೀಶಾಂತ್ ಕಮ್‌ಬ್ಯಾಕ್ ಮಾಡುತ್ತಿದ್ದಾರೆ.
ಗುಜರಾತಿನ ಮುಸ್ಲಿಂ ಧರ್ಮ ಗುರುವನ್ನು ವರಿಸಿದ ಬಿಗ್ ಬಾಸ್ ಬ್ಯೂಟಿ...
ಸಿನಿಮಾದಲ್ಲಿ ನಟಿಸೋದಿಲ್ಲ, ಸಮಾಜ ಸೇವೆ ಮಾಡ್ಬೇಕು ಎಂದಿದ್ದ ಬಿಗ್‌ಬಾಸ್ ಖ್ಯಾತಿಯ ನಟಿ ಸನಾ ಖಾನ್ ಈಗ ವಿವಾಹಿತರಾಗಿದ್ದಾರೆ. ಇಲ್ಲಿ ನೋಡಿ ಫೋಟೋಸ್
ಫೆವಿಕಾಲ್ ಜಾಹೀರಾತಿನಲ್ಲಿ ಯಕ್ಷಗಾನಕ್ಕೆ ಅಪಚಾರ..!...
ಫೆವಿಕಾಲ್ ಜಾಹೀರಾತಿನಲ್ಲಿ ಯಕ್ಷಗಾನದ ದೃಶ್ಯಗಳನ್ನು ಅನುಚಿತವಾಗಿ ಬಳಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ
ಹಬ್ಬದ ವೇಳೆ ಆನ್‌ಲೈನ್ ಶಾಪಿಂಗ್ ಮಾಡುತ್ತೀರಾ? ಎಚ್ಚರ ವಹಿಸುವುದು ಅಗತ್ಯ!...
ವಂಚನೆಯ ಚಟುವಟಿಕೆಗಳು ಹೆಚ್ಚಾಗುತ್ತಿದ್ದು ಸೈಬರ್ ವಂಚಕರು ಈ ಹಬ್ಬದ ಋತುವಿಗೆ ಡಿಜಿಟಲ್ ಶಾಪಿಂಗ್ ಮಾಡುವ ಭಾರತೀಯರ ಮೇಲೆ ಹೆಚ್ಚಿನ ಸೈಬರ್ ದಾಳಿ ಸಾಧ್ಯತೆ ಇದೆ.
ಸತತ 3ನೇ ದಿನ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ, ಭಾರತಕ್ಕೆ ತೀವ್ರ ಹೊಡೆತ!...
ಕಳೆದೆರಡು ತಿಂಗಳಿನಿಂದ ತಟಸ್ಥವಾಗಿದ್ದ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಇದೀಗ ಸತತ 3ನೇ ದಿನ ಏರಿಕೆ ಕಂಡಿದೆ. ಇದೀಗ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಮತ್ತಷ್ಟು ದುಬಾರಿಯಾಗುತ್ತಿದ್ದು, ಎಲ್ಲಾ ವಸ್ತುಗಳು, ಆಹಾರ ಉತ್ಪನ್ನಗಳ ಬೆಲೆ ಹೆಚ್ಚಾಗುವ ಸಾಧ್ಯತೆ ದಟ್ಟವಾಗಿದೆ.
ದೇಗುಲದಲ್ಲಿ ಕಿಸ್ಸಿಂಗ್ ಸೀನ್, #BoycottNetflix ಅಭಿಯಾನ ಬಲು ಜೋರು!...
ಭಾರತದಲ್ಲಿ ಭಾನುವಾರದಂದು ಆನ್‌ಲೈನ್ ಸ್ಟ್ರೀಮಿಂಗ್ ವೆಬ್‌ಸೈಟ್ Netflix ವಿರುದ್ಧ ಬಹಿಷ್ಕಾರದ ಕೂಗು ಜೋರಾಗಿದ್ದು, ಟ್ವಿಟರ್‌ನಲ್ಲಿ ಅಇಯಾನವೇ ಆರಂಭವಾಗಿದೆ. ಟ್ವಿಟರ್‌ನಲ್ಲಿ ಸದ್ಯ #BoycottNetflix ಟಾಪ್ ಟ್ರೆಂಡ್ ಆಗಿದೆ. ಇದಕ್ಕೆಲ್ಲಾ ಕಾರಣವಾಗಿದ್ದು, ಇದರಲ್ಲಿ ಪ್ರಸಾರವಾಗುವ ಸೀರೀಸ್ 'A Suitable Boy'ನಲ್ಲಿರುವ ಕೆಲ ದೃಶ್ಯಗಳು. ಇವುಗಳ ಬಗ್ಗೆ ಸದ್ಯ ಭಾರೀ ವಿರೋಧ ವ್ಯಕ್ತವಾಗಿದೆ.