Asianet Suvarna News Asianet Suvarna News

RSS ಕಾರ್ಯಕರ್ತ, ಗರ್ಭಿಣಿ ಪತ್ನಿ ಸೇರಿದಂತೆ 6 ವರ್ಷದ ಕಂದನ ಬರ್ಬರ ಹತ್ಯೆ

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತ, ಅತನ ಗರ್ಭಿಣಿ ಪತ್ನಿ ಹಾಗೂ 6 ವರ್ಷದ ಮಗುವನ್ನು ಅಮಾನುಷವಾಗಿ ಕೊಲೆಗೈದಿರುವ ಘಟನೆ ಪಶ್ಚಿಮಬಂಗಾಳದಲ್ಲಿ ನಡೆದಿದೆ.

RSS man, pregnant wife, child hacked to death in West Bengal
Author
Bengaluru, First Published Oct 10, 2019, 9:22 PM IST

ಕೋಲ್ಕತ್ತಾ, [ಅ.10]: ಆರ್‌ಎಸ್‌ಎಸ್ ಕಾರ್ಯಕರ್ತ ಮತ್ತು ಆತನ ಪತ್ನಿ, 6 ವರ್ಷದ ಮಗನನ್ನು ಬರ್ಬರವಾಗಿ ಕೊಲೆಗೈದಿರುವ ಘಟನೆ ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯಲ್ಲಿ ನಡೆದಿದೆ.

ಬೊಂಧು ಪ್ರಕಾಶ್ ಪಲ್ ಕೊಲೆಯಾದ ಆರ್‌ಎಸ್‌ಎಸ್ ಕಾರ್ಯಕರ್ತ. ಪ್ರಕಾಶ್ ವೃತ್ತಿಯಲ್ಲಿ ಶಿಕ್ಷಕರಾಗಿ ಕೆಲಸ ಮಾಡಿಕೊಂಡಿದ್ದು, ಆರ್‍ಎಸ್‍ಎಸ್ ನಲ್ಲಿಯೂ ಗುರುತಿಸಿಕೊಂಡಿದ್ದರು.  ಪ್ರಕಾಶ್ (35), 8 ತಿಂಗಳ ಗರ್ಭಿಣಿ ಬ್ಯೂಟಿ ಪಾಲ್ (28) ಹಾಗೂ ಅಂಗನ್ ಪಾಲ್ (6) ದುಷ್ಕರ್ಮಿಗಳ ಅಟ್ಟಹಾಸಕ್ಕೆ ಬಲಿಯಾಗಿದ್ದಾರೆ.

ಮಗಳನ್ನು ಚುಡಾಯಿಸಿ, ಕಿರುಕುಳ ಕೊಟ್ಟ RSS ಕಾರ್ಯಕರ್ತನನ್ನು ಕೊಂದ ತಂದೆ!

ಮಂಗಳವಾರ ಬೆಳಗ್ಗೆ 11 ಗಂಟೆಗೆ ಪ್ರಕಾಶ್​ ಮಾರುಕಟ್ಟೆಯಿಂದ ಕನೈಗಂಜ್-ಲೆಬುತಲದಲ್ಲಿರುವ ತಮ್ಮ ಮನೆಗೆ ಹಿಂದಿರುಗಿದ ಒಂದು ಗಂಟೆಯಲ್ಲಿಯೇ ಇಡೀ ಕುಟುಂಬ ಶವವಾಗಿದೆ ಪತ್ತೆಯಾಗಿದೆ. 

ಪ್ರಕಾಶ್​ ಹಾಗೂ ಮಗುವಿನ ಮೃತದೇಹ ಕೋಣೆಯೊಳಗೆ ಪತ್ತೆಯಾಗಿದ್ದು, ಮಹಿಳೆ ಶವ ಮತ್ತೊಂದು ಕೋಣೆಯಲ್ಲಿ ಪತ್ತೆಯಾಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

11:15ಕ್ಕೆ ಪ್ರಕಾಶ್​ ಹಾಗೂ ಮಗ ಅಂಗನ್ ಸಂಬಂಧಿಕರೊಂದಿಗೆ ಮಾತನಾಡುತ್ತಿದ್ದರು. ಕೆಲವೇ ಸೆಕೆಂಡ್​ಗಳಲ್ಲಿ ಸಂಪರ್ಕ ಕಡಿತವಾಯಿತು. ಆ ಬಳಿಕ ಕೊಲೆ ನಡೆದಿರಬಹುದು ಎಂದು ಪ್ರಕಾಶ್​ ಸಂಬಂಧಿ ರಾಜೇಶ್​ ಘೋಷ್​ ಶಂಕೆ ವ್ಯಕ್ತಪಡಿಸಿದ್ದಾರೆ.

ಸದ್ಯ ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ. ಕೊಲೆಗಾರರ ಸುಳಿವಿಗಾಗಿ ಪ್ರಕಾಶ್​ ಕುಟುಂಬದೊಂದಿಗೆ ಮಾತನಾಡಿ ವೈಯಕ್ತಿಕ ಮಾಹಿತಿ ಕಲೆ ಹಾಕಲಾಗಿದೆ ಎಂದು ಲಾಲ್​ಬಾಗ್ ವಿಭಾಗೀಯ ಪೊಲೀಸ್​ ಅಧಿಕಾರಿ ಬರೂನ್ ಬೈದ್ಯ ತಿಳಿಸಿದ್ದಾರೆ.

ಈ ಮಧ್ಯೆ ಅಪರಾಧಿಗಳನ್ನು ಬಂಧಿಸುವಲ್ಲಿ ಪೊಲೀಸ್​ ಇಲಾಖೆ ವಿಫಲವಾದರೆ ಹೋರಾಟ ನಡೆಸುವುದಾಗಿ ಶಿಕ್ಷಕರ ಸಂಘಟನೆ ಎಚ್ಚರಿಸಿದೆ.

Follow Us:
Download App:
  • android
  • ios