ಅಲಿಗಡ್(ಜ.29): ದೇಶದಲ್ಲಿ ಅಸಹಿಷ್ಣುತೆ ಇದೆ, ಅಲ್ಪಸಂಖ್ಯಾತರಿಗೆ ರಕ್ಷಣೆ ಇಲ್ಲವಾಗಿದೆ ಎಂದು ಹೇಳಿಕೆ ನೀಡಿದ್ದ ಬಾಲಿವುಡ್ ನಟರಾದ ನಸೀರುದ್ದೀನ್ ಶಾ ಮತ್ತು ಅಮೀರ್ ಖಾನ್ ದೇಶದ್ರೋಹಿಗಳು ಎಂದು ಆರ್‌ಎಸ್‌ಎಸ್‌ ಮುಖಂಡ ಇಂದ್ರೇಶ್ ಕುಮಾರ್ ಹರಿಹಾಯ್ದಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಇಂದ್ರೇಶ್ ಕುಮಾರ್, ಭಾರತಕ್ಕೆ ಉಗ್ರ ಸಜ್ಮಲ್ ಕಸಬ್‌ನಂತ ಮುಸ್ಲಿಮರು ಬೇಡ, ಅಬ್ದುಲ್ ಕಲಾಂ ಅವರಂತ ಮುಸ್ಲಿಮರು ಬೇಕು ಎಂದು ಹೇಳಿದ್ದಾರೆ.

ಇದೇ ವೇಳೆ ನಟರಾದ ನಸೀರುದ್ದೀನ್ ಶಾ, ಅಮೀರ್ ಖಾನ್ ಮತ್ತು ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ಅವರನ್ನು ದೇಶದ್ರೋಹಿಗಳು ಎಂದ ಇಂದ್ರೇಶ್, ಸುಳ್ಳು ಸುಳ್ಳು ಆರೋಪಗಳನ್ನು ಮಾಡುತ್ತಾ ಸಮಾಜದ ಶಾಂತಿ ಕದಡುವ ಇಂತವರು ಗೌರವಕ್ಕೆ ಯೋಗ್ಯರಲ್ಲ ಎಂದು ಹರಿಹಾಯದ್ದಿದ್ದಾರೆ.